EBM News Kannada
Leading News Portal in Kannada

ಹುಲಿ ಉಗುರು ಪ್ರಕರಣ: ‘ಬಿಗ್ ಬಾಸ್’ ಮನೆಯಿಂದ ಹೊರಗೆ ಕಳುಹಿಸಿ ಎಂದು ಕಣ್ಣೀರಿಟ್ಟ ವರ್ತೂರು ಸಂತೋಷ್

0



ಬೆಂಗಳೂರು: ಹುಲಿ ಉಗುರು ಪ್ರಕರಣದಲ್ಲಿ ಜೈಲು ಸೇರಿದ್ದ ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್‍, ಜಾಮೀನಿನ ಮೇಲೆ ಬಿಡುಗಡೆಯಾಗಿ ಮತ್ತೆ ಬಿಗ್ ಬಿಸ್ ಮನೆ ಸೇರಿಕೊಂಡಿದ್ದಾರೆ.

ಆದರೆ, ಈಗ ಅವರು ‘ನನ್ನನ್ನು ಬಿಗ್ ಬಾಸ್‌ ಮನೆಯಿಂದ ಹೊರಗೆ ಕಳುಹಿಸಿ’ ಎಂದು ಪಟ್ಟು ಹಿಡಿದಿದ್ದಾರೆ.

ಇಂದು ಬಿಡುಗಡೆಗೊಂಡ ಪ್ರೋಮೊದಲ್ಲಿ ವರ್ತೂರ್ ಸಂತೋಷ್ ಅವರು ಮನಬಿಚ್ಚಿ ತಮ್ಮ ಸಂಕಟವನ್ನು ಹೇಳಿಕೊಂಡಿದ್ದಾರೆ. ಸಂತೋಷ್ ಅವರು ಈ ವಾರ ನಾಮಿನೇಟ್ ಆಗಿದ್ದರು.

”ವರ್ತೂರು ಸಂತೋಷ್ ನೀವು ಸೇಫ್ ಆಗಿದ್ದೀರಿ” ಎಂದು ಸುದೀಪ್ ಹೇಳುತ್ತಿದ್ದಂತೆ ವರ್ತೂರು ಕೊಂಚ ಭಾವುಕರಾಗಿ, ”ಹೊರಗೆ ಒಂದು ಘಟನೆ (ಹುಲಿ ಉಗುರು ಪ್ರಕಣ) ನಡೆದಿದೆ. ಅದರಿಂದ ಹೊರ ಬಂದು ನಾನು ಇಲ್ಲಿ ಆಡಬೇಕು ಎಂದರೆ ಕಷ್ಟ ಆಗುತ್ತಿದೆ ಎಂದು ಕಣ್ಣೀರು ಹಾಕಿದರು. ಜೊತೆಗೆ ನಾನು ಹೊರಗೆ ಹೋಗುತ್ತೇನೆ ಎಂದು ಪಟ್ಟು ಹಿಡಿದರು.

ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಸುದೀಪ್, ”ನಿಮಗೆ 34,15,472 ಮತಗಳು ಬಂದಿವೆ. ಜನರ ಅಭಿಪ್ರಾಯದ ವಿರುದ್ಧ ನಾನು ಹೋಗಲ್ಲ” ಎಂದು ವೇದಿಕೆಯಿಂದಲೇ ಹೊರ ನಡೆದಿದ್ದಾರೆ.

Leave A Reply

Your email address will not be published.