EBM News Kannada
Leading News Portal in Kannada

ಭಾರತದಿಂದ ಆಸ್ಕರ್ಸ್ ಗೆ ಅಧಿಕೃತ ಪ್ರವೇಶ ಪಡೆದ ಮಲಯಾಳಂ ಚಿತ್ರ ‘2018’

0



ಹೊಸದಿಲ್ಲಿ: ಆಸ್ಕರ್ಸ್ ಪ್ರಶಸ್ತಿಗೆ ಭಾರತದಿಂದ ಮಲಯಾಳಂ ಚಿತ್ರವಾದ ‘2018-Everyone is a Hero’ ಅಧಿಕೃತ ಪ್ರವೇಶ ಪಡೆದುಕೊಂಡಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

2018 ರಲ್ಲಿ ಕೇರಳಕ್ಕೆ ಅಪ್ಪಳಿಸಿದ ಪ್ರವಾಹದ ಕುರಿತಾದ ಚಿತ್ರವಾದ ʼ2018ʼ ವಿಮರ್ಶಾತ್ಮಕವಾಗಿಯೂ, ಬಾಕ್ಸ್‌ ಆಫೀಸಿನಲ್ಲೂ ಅದ್ಭುತ ಗೆಲುವು ಸಾಧಿಸಿತ್ತು.

ಆಂಟನಿ ಜೋಸೆಫ್ ನಿರ್ದೇಶನದ ಈ ಚಿತ್ರದಲ್ಲಿ ಟೊವಿನೋ ಥಾಮಸ್, ಕುಂಜಾಕೊ ಬೋಬನ್, ಆಸಿಫ್ ಅಲಿ, ವಿನೀತ್ ಶ್ರೀನಿವಾಸನ್, ನರೇನ್, ಲಾಲ್ ಮೊದಲಾದವರು ನಟಿಸಿದ್ದಾರೆ.

2018 ಈ ವರ್ಷ ಮೇ ತಿಂಗಳಲ್ಲಿ ಬಿಡುಗಡೆಯಾದ ಈ ಚಿತ್ರ ಸಾರ್ವಕಾಲಿಕ ಅತಿ ಹೆಚ್ಚು ಗಳಿಕೆಯನ್ನು ಕಂಡ ಮಲಯಾಳಂ ಚಲನಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

Leave A Reply

Your email address will not be published.