EBM News Kannada
Leading News Portal in Kannada

ರಜನಿ-ಶಿವಣ್ಣ ನಟನೆಯ ‘ಜೈಲರ್’ ಚಿತ್ರದ ಮೊದಲಾರ್ಧ ಹೇಗಿದೆ? ಇಲ್ಲಿದೆ ರಿಪೋರ್ಟ್ – Kannada News | Jailer Movie Review Here is The Rajanikanth And Shivarajkumar Movie First Half Review

0


Jailer Movie First Half Review: ನೆಲ್ಸನ್ ದಿಲೀಪ್ ಕುಮಾರ್ ಅವರ ನಿರ್ದೇಶನದಲ್ಲಿ ‘ಜೈಲರ್’ ಸಿನಿಮಾ ಮೂಡಿಬಂದಿದೆ. ತಮನ್ನಾ ಹೆಜ್ಜೆ ಹಾಕಿದ ‘ಕಾವಾಲಾ..’ ಹಾಡು ಸೂಪರ್ ಹಿಟ್ ಆಗಿದೆ. ಈ ಚಿತ್ರದ ಮೊದಲಾರ್ಧ ಹೇಗಿದೆ? ಫಸ್ಟ್ ಹಾಫ್​ನಲ್ಲಿ ಏನೆಲ್ಲ ಇತ್ತು ಎನ್ನುವ ಬಗ್ಗೆ ಈ ವರದಿಯಲ್ಲಿದೆ ಉತ್ತರ.

ರಜನಿಕಾಂತ್ (Rajinikanth) ನಟನೆಯ ಸಿನಿಮಾ ರಿಲೀಸ್ ಆಗುತ್ತದೆ ಎಂದರೆ ದೊಡ್ಡ ಮಟ್ಟದ ಕ್ರೇಜ್ ಸೃಷ್ಟಿ ಆಗುತ್ತದೆ. ಸ್ವಾತಂತ್ರ್ಯೋತ್ಸವಕ್ಕೆ ಕೆಲವೇ ದಿನ ಬಾಕಿ ಇರುವಾಗ ‘ಜೈಲರ್’ ಸಿನಿಮಾ (Jailer Movie) ರಿಲೀಸ್ ಆಗಿದೆ. ಇಂದು (ಆಗಸ್ಟ್​ 10) ಬಿಡುಗಡೆ ಆದ ಈ ಸಿನಿಮಾ ಬಗ್ಗೆ ಭರ್ಜರಿ ನಿರೀಕ್ಷೆ ಸೃಷ್ಟಿ ಆಗಿದೆ. ಶಿವಣ್ಣ ಕೂಡ ನಟಿಸಿರುವುದರಿಂದ ಈ ಚಿತ್ರದ ಮೇಲೆ ಕನ್ನಡಿಗರಿಗೆ ವಿಶೇಷ ಆಸಕ್ತಿ ಮೂಡಿದೆ. ನೆಲ್ಸನ್ ದಿಲೀಪ್ ಕುಮಾರ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ತಮನ್ನಾ ಹೆಜ್ಜೆ ಹಾಕಿದ ‘ಕಾವಾಲಾ..’ ಹಾಡು ಸೂಪರ್ ಹಿಟ್ ಆಗಿದೆ. ಈ ಚಿತ್ರದ ಮೊದಲಾರ್ಧ ಹೇಗಿದೆ? ಫಸ್ಟ್ ಹಾಫ್​ನಲ್ಲಿ ಏನೆಲ್ಲ ಇತ್ತು ಎನ್ನುವ ಬಗ್ಗೆ ಈ ವರದಿಯಲ್ಲಿದೆ ಉತ್ತರ.

ರಜನಿಕಾಂತ್ ಅವರು ಮಾಸ್ ಸಿನಿಮಾ ಮೂಲಕ ಗಮನ ಸೆಳೆದವರು. ‘ಜೈಲರ್’ ಚಿತ್ರದಲ್ಲಿ ಅವರ ಎಂಟ್ರಿ ಸಿಂಪಲ್ ಆಗಿದೆ. ಆದರೆ ಅವರ ಎಂಟ್ರಿಗೆ ಅಭಿಮಾನಿಗಳು ಶಿಳ್ಳೆ ಹೊಡೆಯೋದು ಪಕ್ಕಾ. ರಜನೀ ಫ್ಯಾನ್ಸ್‌ಗೆ ನಿರ್ದೇಕರು ಬೇಸರ ಮಾಡಿಲ್ಲ‌, ಫ್ಯಾಮಿಲಿಮ್ಯಾನ್ ಆದರೂ ಮಾಸ್ ಆಗಿ ಕಾಣಿಸಿಕೊಳ್ಳುತ್ತಾರೆ ರಜನಿ. ಅವರು ಎರಡು ಶೇಡ್​ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮೊದಲಾರ್ಧದಲ್ಲೇ ಎರಡೂ ಶೇಡ್ ತೆರೆ ಮೇಲೆ ಕಾಣಸಿಕೊಳ್ಳುತ್ತದೆ.

ಹಳೆಯ ರಜನಿಕಾಂತ್ ಅವರನ್ನು ತೆರೆ ಮೇಲೆ ತೋರಿಸಿದ್ದಾರೆ ನಿರ್ದೇಶಕ ನೆಲ್ಸನ್, ರಜನೀಕಾಂತ್ ಅಂತೂ ಮಸ್ತ್ ಆ್ಯಕ್ಷನ್ ಮೂಲಕ ಸಖತ್ತಾಗಿ ಮಿಂಚಿದ್ದಾರೆ. ಆ್ಯಕ್ಷನ್ ಜೊತೆ ಸೆಂಟಿಮೆಂಟ್ ಕೂಡ ಹೈಲೈಟ್ ಮಾಡಲಾಗಿದೆ. ಅಪ್ಪ-ಮಗನ‌ ಸೆಂಟಿಮೆಂಟ್ ಸಿನಿಮಾದ ಮೊದಲಾರ್ಧದಲ್ಲಿದೆ, ದ್ವಿತೀಯಾರ್ಧದಲ್ಲೂ ಅದು ಮುಂದುವರೆಯುವ ಸಾಧ್ಯತೆ ಇದೆ.

ಯೋಗಿ ಬಾಬು ಕಾಮಿಡಿ ಪಂಚ್ ಸಖತ್ ಆಗಿದೆ. ರಜನೀಕಾಂತ್ ಸಹ ಅಲ್ಲಲ್ಲಿ ಕಾಮಿಡಿ ಮಾಡುತ್ತಾರೆ,  ಮೊದಲಾರ್ಧ ಆಕ್ಷನ್, ಸೆಂಟಿಮೆಂಟ್ ಜೊತೆಗೆ ಹಾಸ್ಯವೂ ತುಂಬಿದೆ.

‘ಜೈಲರ್’ ಕರ್ನಾಟಕದಲ್ಲೂ ಕಥೆ ಸಾಗುತ್ತದೆ. ಶಿವರಾಜ್ ಕುಮಾರ್ ಹಾಗೂ ರಜನಿ ಮುಖಾಮುಖಿ ಆಗುವುದನ್ನು ನೋಡಲು ಫ್ಯಾನ್ಸ್ ಕಾದಿದ್ದರು. ಇದಕ್ಕೆ ನಿರ್ದೇಶಕರು ಮೊದಲಾರ್ಧದಲ್ಲೇ ಅವಕಾಶ ಮಾಡಿಕೊಟ್ಟಿದ್ದಾರೆ. ರಜನಿಗೆ ಸಹಾಯ ಮಾಡೋ ವ್ಯಕ್ತಿಯಾಗಿ ಶಿವಣ್ಣ ಕಾಣಿಸುತ್ತಾರೆ.

ಸಖತ್ ಸೆನ್ಸೇಷನ್ ಸೃಷ್ಟಿ ಮಾಡಿದ್ದ ‘ಕಾವಾಲಾ..’ ಹಾಡು ಮೊದಲಾರ್ಧದಲ್ಲಿ ಇಲ್ಲ. ಈ ಹಾಡಿಗಾಗಿ ದ್ವಿತೀಯಾರ್ಧದ ವರೆಗೆ ಕಾಯಬೇಕು. ಅನಿರುದ್ಧ್ ರವಿಚಂದರ್ ಅವರ ಸಂಗೀತ ಸಂಯೋಜನೆ ಗಮನ ಸೆಳೆದಿದೆ. ಅವರು ಮ್ಯೂಸಿಕ್ನಲ್ಲಿ ಹೆಚ್ಚು ಅಂಕ ಗಿಟ್ಟಿಸಿಕೊಳ್ಳುತ್ತಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On – 8:15 am, Thu, 10 August 23

ತಾಜಾ ಸುದ್ದಿ

Leave A Reply

Your email address will not be published.