EBM News Kannada
Leading News Portal in Kannada

ನೂರಾರು ಕೋಟಿ ರೂಪಾಯಿಗಳ ಒಡೆಯ ಮಹೇಶ್ ಬಾಬು; ಬರ್ತ್​ಡೇ ಬಾಯ್ ಐಷಾರಾಮಿ ಜೀವನ ಹೇಗಿದೆ ನೋಡಿ – Kannada News | Mahesh Babu Birthday Mahesh Babu Net worth Mahesh Babu Luxury Life Mahesh Babu Daughter Photo

0


Mahesh Babu Birthday: ಮಹೇಶ್ ಬಾಬು ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಇದರ ಜೊತೆಗೆ ಅವರು ಗ್ರಾಮಗಳನ್ನು ದತ್ತು ಪಡೆದು ಅದರ ಅಭಿವೃದ್ಧಿಯಲ್ಲಿ ತೊಡಗಿಕೊಂಡಿದ್ದಾರೆ.

ಮಹೇಶ್ ಬಾಬು

ಮಹೇಶ್ ಬಾಬು (Mahesh Babu) ಅವರಿಗೆ ಇಂದು (ಆಗಸ್ಟ್ 9) ಬರ್ತ್​ಡೇ ಸಂಭ್ರಮ. 48ನೇ ವರ್ಷಕ್ಕೆ ಕಾಲಿಟ್ಟ ಖುಷಿಯನ್ನು ಅವರು ಕುಟುಂಬದ ಜೊತೆ ಆಚರಿಸಿಕೊಳ್ಳುತ್ತಿದ್ದಾರೆ. ಅವರು ಹುಟ್ಟುಹಬ್ಬದ ಆಚರಣೆಗೆ ವಿದೇಶಕ್ಕೆ ತೆರಳಿದ್ದಾರೆ ಎನ್ನಲಾಗುತ್ತಿದೆ. ಫಿಟ್ನೆಸ್​ಗೆ ಹೆಚ್ಚು ಆದ್ಯತೆ ಕೊಡುವ ಮಹೇಶ್ ಬಾಬು ಸಖತ್ ಯಂಗ್ ಆಗಿ ಕಾಣಿಸಿಕೊಳ್ಳುತ್ತಾರೆ. ಅವರಿಗೆ ಎಲ್ಲರ ಕಡೆಗಳಿಂದ ಶುಭಾಶಯ ಬರುತ್ತಿದೆ. ಸಿನಿಮಾ ಜೊತೆಗೆ ಹಲವು ಸಾಮಾಜಿಕ ಕೆಲಸಗಳ ಮೂಲಕವೂ ಅವರು ಗುರುತಿಸಿಕೊಂಡಿದ್ದಾರೆ.

ಮಹೇಶ್ ಬಾಬು ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಇದರ ಜೊತೆಗೆ ಅವರು ಗ್ರಾಮಗಳನ್ನು ದತ್ತು ಪಡೆದು ಅದರ ಅಭಿವೃದ್ಧಿಯಲ್ಲಿ ತೊಡಗಿಕೊಂಡಿದ್ದಾರೆ. ಹೃದಯದ ಸಮಸ್ಯೆ ಇರುವ ಮಕ್ಕಳ ಶಸ್ತ್ರಚಿಕಿತ್ಸೆಗೆ ಅವರ ಕಡೆಯಿಂದ ಸಹಕಾರ ಸಿಗುತ್ತಿದೆ. ಈ ಕಾರಣಕ್ಕೆ ಅವರು ಅನೇಕರಿಗೆ ಇಷ್ಟ ಆಗುತ್ತಾರೆ. ಅವರ ನಟನೆಯ ‘ಗುಂಟೂರು ಖಾರಂ’ ಚಿತ್ರದಿಂದ ಹೊಸ ಪೋಸ್ಟರ್ ರಿಲೀಸ್ ಆಗುವ ಸಾಧ್ಯತೆ ಇದೆ.

1975ರಲ್ಲಿ ತೆಲುಗು ನಟ ಕೃಷ್ಣ ಹಾಗೂ ಇಂದಿರಾ ದೇವಿಯ ಪುತ್ರನಾಗಿ ಮಹೇಶ್ ಬಾಬು ಜನಿಸಿದರು. ಚೆನ್ನೈನಲ್ಲಿ ಜನಿಸಿದ ಅವರು ಅಲ್ಲಿಯೇ ಶಿಕ್ಷಣ ಪಡೆದರು. ಬಾಲ ನಟನಾಗಿ ಅವರು ಸಿನಿಮಾಗಳಲ್ಲಿ ಅಭಿನಯಿಸಿದರು. 1999ರಲ್ಲಿ ರಿಲೀಸ್ ಆದ ‘ರಾಜಕುಮಾರುಡು’ ಮಹೇಶ್ ಬಾಬು ಹೀರೋ ಆಗಿ ನಟಿಸಿದ ಮೊದಲ ಸಿನಿಮಾ. ಇವರು ಪ್ರತಿ ಚಿತ್ರಕ್ಕೆ ದೊಡ್ಡ ಮಟ್ಟದ ಸಂಭಾವನೆ ಪಡೆಯುತ್ತಾರೆ.

2005ರಲ್ಲಿ ಮಹೇಶ್ ಬಾಬು ಅವರು ನಟಿ ನಮ್ರತಾ ಶಿರೋಡ್ಕರ್ ಅವರನ್ನು ಮದುವೆ ಆದರು. ನಾಲ್ಕು ವರ್ಷಗಳ ಕಾಲ ಈ ಜೋಡಿ ಡೇಟಿಂಗ್ ಮಾಡಿತ್ತು. ಈ ದಂಪತಿಗೆ ಗೌತಮ್ ಹಾಗೂ ಸಿತಾರಾ ಹೆಸರಿನ ಮಕ್ಕಳಿದ್ದಾರೆ. ಮಹೇಶ್ ಬಾಬು ಅವರು ಒಟ್ಟೂ ಆಸ್ತಿ 256 ಕೋಟಿ ರೂಪಾಯಿ ಎನ್ನಲಾಗಿದೆ. ನಟನೆ ಹಾಗೂ ಬ್ರ್ಯಾಂಡ್​ಗಳ ಪ್ರಚಾರದಿಂದ ಮಹೇಶ್ ಬಾಬುಗೆ ಹಣ ಬರುತ್ತದೆ.

ಹೈದರಾಬಾದ್​ನಲ್ಲಿ ಮಹೇಶ್ ಬಾಬು ದೊಡ್ಡ ಬಂಗಲೆ ಹೊಂದಿದ್ದಾರೆ. ಇದರ ಮೌಲ್ಯ 28 ಕೋಟಿ ರೂಪಾಯಿ ಎನ್ನಲಾಗಿದೆ. ಅವರು ಇತ್ತೀಚೆಗೆ ಬೆಂಗಳೂರಿನಲ್ಲಿ ಮನೆ ಖರೀದಿ ಮಾಡಿದ್ದಾರೆ. ರೇಂಜ್ ರೋವರ್, ಮರ್ಸೀಡಿಸ್ ಬೆಂಜ್, ಆಡಿ ಕಾರಗಳನ್ನು ಮಹೇಶ್ ಬಾಬು ಹೊಂದಿದ್ದಾರೆ.

ಹೈದರಾಬಾದ್​ನಲ್ಲಿರುವ ಏಷಿಯನ್ ಸಿನಿಮಾಸ್​ಗೆ ಮಹೇಶ್ ಬಾಬು ಪಾರ್ಟ್ನರ್. 2021ರಲ್ಲಿ ಇದು ಆರಂಭ ಆಯಿತು. ಹೈದರಾಬಾದ್​​ನ ಐಷಾರಾಮಿ ಥಿಯೇಟರ್​​ಗಳಲ್ಲಿ ಇದು ಕೂಡ ಒಂದು. ತಮ್ಮದೇ ಆದ ರೆಸ್ಟೋರೆಂಟ್​ನ ಮಹೇಶ್ ಬಾಬು ಹೊಂದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On – 8:56 am, Wed, 9 August 23

ತಾಜಾ ಸುದ್ದಿ



Leave A Reply

Your email address will not be published.