ಸ್ಪಂದನಾ ಸಾವಿಗೆ ಮರುಗಿದ ರಾಧಿಕಾ ಕುಮಾರಸ್ವಾಮಿ, ವಿಜಯ್ ರಾಘವೇಂದ್ರರ ಸಂತೈಸಿದ್ದು ಹೀಗೆ – Kannada News | Radhika Kumaraswamy Condolence to Vijay Raghavendra who lost his wife Spandana
ಪತ್ನಿ ಸ್ಪಂದನಾರನ್ನು (Spandana) ಕಳೆದುಕೊಂಡಿರುವ ವಿಜಯ್ ರಾಘವೇಂದ್ರ (Vijay Raghavendra) ದುಃಖದ ಮಡುವಿನಲ್ಲಿ ಮುಳುಗಿದ್ದಾರೆ. ಹರಿಶ್ಚಂದ್ರ ಘಾಟ್ನಲ್ಲಿ ಸ್ಪಂದನಾ ಅಂತ್ಯ ಸಂಸ್ಕಾರ ನೆರವೇರಿದೆ. ಅದಕ್ಕೂ ಮುನ್ನ ಚಿತ್ರರಂಗದ ಹಲವಾರು ಗಣ್ಯರು, ಸ್ಪಂದನಾರ ಅಂತಿಮ ದರ್ಶನವನ್ನು ಇಂದು ಪಡೆದರು. ಈ ಸಂದರ್ಭದಲ್ಲಿ ವಿಜಯ್ ರಾಘವೇಂದ್ರ ನಾಯಕನಾಗಿ ನಟಿಸಿದ ಮೊದಲ ಸಿನಿಮಾದ ನಾಯಕಿ ರಾಧಿಕಾ ಕುಮಾರಸ್ವಾಮಿ ಸಹ ಆಗಮಿಸಿ ಸ್ಪಂದನಾರ ಅಂತಿಮ ದರ್ಶನ ಪಡೆದಿದ್ದಲ್ಲದೆ ವಿಜಯ್ ರಾಘವೇಂದ್ರ ಅವರ ಕೈಹಿಡಿದು ಸಂತೈಸಿದರು.