Seetha Raama Serial: ಸಿಹಿಯ ಮನದಲ್ಲಿನ ಭಯ ದೂರ ಮಾಡಲು ಶ್ರೀ ರಾಮನ ಮುಂದಿನ ನಡೆಯೇನು? – Kannada News | Seetha Raama Serial Episode 18 Explainer; What will be the Ram’s next move to remove the fear in Sihi’s mind pgt
ಸಿಹಿಗೆ ಅಮ್ಮನನ್ನು ಪೊಲೀಸರು ಜೈಲಿಗೆ ಕರೆದುಕೊಂಡು ಹೋಗಿರಬಹುದು ಎಂಬ ಆತಂಕ ಉಂಟಾಗಿ ರಾಮ್ ಬಳಿಯಲ್ಲಿ ಪ್ರಶ್ನೆ ಮಾಡುತ್ತಾಳೆ. ಗಾಬರಿಗೊಂಡ ರಾಮ್ ಏನು ಮಾಡಬೇಕೆಂಬುದು ತಿಳಿಯದೇ ಕಂಗಾಲಾಗುತ್ತಾನೆ.
‘ಸೀತಾ ರಾಮ’ (Seetha Raama Serial) ಧಾರಾವಾಹಿ ಸಂಚಿಕೆ 18: ರುದ್ರ ಪ್ರತಾಪನ ಪ್ಲಾನ್ ವರ್ಕ್ ಆಗಿದೆ. ಸೀತಾ ತಿಳಿಯದೇ ಲಾಯರ್ ಬಲೆಯಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಾಳೆ. ಮುಖ್ಯವಾಗಿ ಸೀತಾಳಿಗೆ ಮನೆ ಸಮಸ್ಯೆ ಬಗೆಹರಿಸಿಕೊಳ್ಳಬೇಕಾಗಿರುತ್ತದೆ. ಆದರೆ ರುದ್ರನಿಗೆ ಸೀತಾಳ ಜೊತೆ ಸಮಯ ಕಳೆಯಬೇಕಾಗಿರುತ್ತದೆ. ಅದಕ್ಕಾಗಿಯೇ ಅಸಭ್ಯವಾಗಿ ನಡೆದುಕೊಳ್ಳಲು ಪ್ರಾಂಭಿಸುತ್ತಾನೆ. ಆದರೆ ಸೀತಾಳಿಗೆ ಬಿಸಿ ತುಪ್ಪ ಬಾಯಲ್ಲಿ ಹಾಕಿದ ಅನುಭವ. ಉಗುಳಲು ಆಗದು ನುಂಗಲು ಆಗದ ಪರಿಸ್ಥಿತಿ. ಏನು ಮಾಡಬೇಕೆಂದು ತೋಚದೆ, ದಾರಿ ತಪ್ಪಿದವರ ಸ್ಥಿತಿಯಾಗುತ್ತದೆ.
ಸಿಹಿಗೆ ಅಮ್ಮನ ಚಿಂತೆ
ಇನ್ನು ಸಿಹಿಗೆ ಅಮ್ಮ ಜೈಲಿಗೆ ಹೋಗುತ್ತಾಳೆ ಅನ್ನುವ ಭಯ. ಅದಕ್ಕಾಗಿಯೇ ಅಜ್ಜನ ಬಳಿ ಕಾರಾಗ್ರಹದ ಬಗ್ಗೆ ತಿಳಿದುಕೊಂಡು ಭಯ ಪಟ್ಟುಕೊಳ್ಳುತ್ತಾಳೆ. ಸೀತಾಳ ಅತ್ತಿಗೆ ನೋಟಿಸ್ ವಿಷಯವಾಗಿ ಜೈಲಿಗೆ ಹೋಗಬೇಕಾಗುತ್ತದೆ ಎಂಬ ಮಾತು ಅವಳನ್ನು ಭಯಪಡಿಸಿರುತ್ತದೆ. ಹಾಗಾಗಿ ಆಲೋಚನೆಯಂತಾದರೆ ಎಂಬುದೇ ಅವಳಿಗೆ ಆತಂಕ ಮೂಡಿಸುತ್ತದೆ.
ರಾಮನಿಗೆ ಸೀತಾಳದ್ದೇ ಚಿಂತೆ
ಇನ್ನು ಆಫೀಸ್ನಲ್ಲಿ ಹೊಸ ಅಕೌಂಟ್ ಟೀಮ್ ಬಂದಿರುವುದರಿಂದ, ಚರಣ್ ಡಿ. ಅವರಿಗೆ ತಲೆ ನೋವು ತರಿಸುತ್ತದೆ. ಅದಕ್ಕಾಗಿಯೇ ಆ ವಿಷಯವನ್ನು ಭಾರ್ಗವಿಗೆ ಮುಟ್ಟಿಸುವ ಕೆಲಸ ಮಾಡುತ್ತಾನೆ. ಮನೆಯವರಿಂದ ಗೊತ್ತಾಗದ ವಿಷಯ ಮ್ಯಾನೇಜರ್ ನಿಂದ ಬಂದು ತಲುಪುತ್ತಿರುವುದು ಭಾರ್ಗವಿಗೆ ಮುಂದಿನ ಆಟಕ್ಕೆ ಸಜ್ಜಾಗಲು ಸಹಾಯ ಮಾಡುತ್ತದೆ. ಇದೆಲ್ಲದರ ಮಧ್ಯೆ ರಾಮನಿಗೆ ಸೀತಾಳದ್ದೇ ಆತಂಕ. ಅದಕ್ಕಾಗಿಯೇ ಆಕೆಗೆ ಫೋನ್ ಮಾಡುತ್ತಾನೆ. ಯಾವುದೇ ಉತ್ತರ ಇಲ್ಲದಾಗ ಸಿಹಿಯ ಅಜ್ಜಿ ತಾತನಿಗೂ ಫೋನ್ ಮಾಡಿ ಸೀತಾ ಬಂದಿರುವ ಬಗ್ಗೆ ವಿಚಾರಿಸುತ್ತಾನೆ. ಇದನ್ನೆಲ್ಲಾ ಕೇಳುತ್ತಿದ್ದ ಸಿಹಿಗೆ ಅಮ್ಮನನ್ನು ಪೊಲೀಸರು ಜೈಲಿಗೆ ಕರೆದುಕೊಂಡು ಹೋಗಿರಬಹುದು ಎಂಬ ಆತಂಕ ಉಂಟಾಗಿ ರಾಮ್ ಬಳಿಯಲ್ಲಿ ಪ್ರಶ್ನೆ ಮಾಡುತ್ತಾಳೆ. ಗಾಬರಿಗೊಂಡ ರಾಮ್ ಏನು ಮಾಡಬೇಕೆಂಬುದು ತಿಳಿಯದೇ ಕಂಗಾಲಾಗುತ್ತಾನೆ. ಮುಂದೇನಾಗಬಹುದು ಕಾದು ನೋಡಬೇಕಾಗಿದೆ.
Published On – 10:50 pm, Wed, 9 August 23