EBM News Kannada
Leading News Portal in Kannada

ವಿಜಯ್-ಸಮಂತಾ ‘ಖುಷಿ’ ಟ್ರೈಲರ್ ಬಿಡುಗಡೆ: ಪ್ರೇಮ-ಸಂಸಾರದ ಕತೆ – Kannada News | Vijay Deverakonda And Samantha Starrer Khushi Movie Trailer Released

0


Khushi Trailer: ವಿಜಯ್ ದೇವರಕೊಂಡ ಸಮಂತಾ ನಟನೆಯ ‘ಖುಷಿ’ ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದೆ.

‘ಖುಷಿ’ ಟ್ರೈಲರ್

ವಿಜಯ್ ದೇವರಕೊಂಡ (Vijay Deverakonda) ಹಾಗೂ ಸಮಂತಾ (Samantha) ಇಬ್ಬರೂ ಸಹ ಗೆಲುವಿನ ಹುಡುಕಾಟದಲ್ಲಿದ್ದಾರೆ. ಇಬ್ಬರು ಸೋಲುಂಡಿದ್ದಾರೆ. ಗೆಲುವಿನ ನಿರೀಕ್ಷೆಯಲ್ಲಿರುವ ಈ ಜೋಡಿ ಈಗ ಒಟ್ಟಿಗೆ ಒಂದೇ ಸಿನಿಮಾದಲ್ಲಿ ನಟಿಸಿದೆ. ಸಿನಿಮಾದ ಹೆಸರು ‘ಖುಷಿ’. ಪ್ರೇಮಕತೆಯುಳ್ಳ ಈ ಸಿನಿಮಾದ ಟ್ರೈಲರ್ ಇಂದು (ಆಗಸ್ಟ್ 09) ಬಿಡುಗಡೆ ಆಗಿದ್ದು, ವಿಜಯ್-ಸಮಂತಾಗೆ ಗೆಲುವು ತಂದುಕೊಡುವ ಭರವಸೆ ಮೂಡಿಸಿದೆ.

‘ಖುಷಿ’ ಸಿನಿಮಾವು ಪ್ರೇಮಕತೆಯನ್ನು ಒಳಗೊಂಡಿದೆ. ಟ್ರೈಲರ್​ನ ಆರಂಭದಲ್ಲಿ ಇದೇನು ಹಿಂದು-ಮುಸ್ಲಿಂ ಪ್ರೇಮಕತೆಯೇ ಎಂಬ ಅನುಮಾನ ಮೂಡುತ್ತದೆ. ‘ರೋಜಾ’ ಮಾದರಿಯಲ್ಲಿ ಹಿಮದ ನಡುವೆ ನಡೆಯುವ ಲವ್ ಸ್ಟೋರಿಯೇ ಎಂಬ ಅನುಮಾನ ಮೂಡುತ್ತದೆ, ಟ್ವಿಸ್ಟ್ ಏನೆಂದರೆ ನಟಿ ಸಮಂತಾ, ಸಿನಿಮಾದಲ್ಲಿ ಮುಸ್ಲಿಂ ವೇಷ ಧರಿಸಿರುವ ಬ್ರಾಹ್ಮಣ ಹುಡುಗಿ!

ಈ ಇಬ್ಬರು ಪೋಷಕರ ವಿರೋಧದ ನಡುವೆಯೂ ಮದುವೆಯಾಗುತ್ತಾರೆ. ಆರಂಭದಲ್ಲಿ ಎಲ್ಲವೂ ಚೆನ್ನಾಗಿಯೇ ಇರುತ್ತದೆ ಆ ನಂತರ ದಾಂಪತ್ಯದಲ್ಲಿ ಜಗಳ, ವಿರಸ ತಲೆದೂರುತ್ತದೆ. ತಮ್ಮ ಪ್ರೇಮವನ್ನು ಈ ಜೋಡಿ ಹೇಗೆ ನಿಭಾಯಿಸುತ್ತದೆ, ದಾಂಪತ್ಯದಲ್ಲಿ ವಿರಸ ಬಂದಾಗ ಅದನ್ನು ಹೇಗೆ ಹ್ಯಾಂಡಲ್ ಮಾಡಬೇಕು ಎಂಬಿತ್ಯಾದಿ ವಿಷಯಗಳನ್ನು ಸಿನಿಮಾ ಒಳಗೊಂಡಿದೆ.

ಸಿನಿಮಾದಲ್ಲಿ ತೀರ ನವಿರಾದ ಪ್ರೇಮಕತೆಯಿಲ್ಲ ಅದರ ಜೊತೆಗೆ ಹಾಸ್ಯ, ಆಕ್ಷನ್, ಕೌಟುಂಬಿಕ ಸನ್ನಿವೇಶಗಳು, ಹುಸಿ ಜಗಳ, ರೊಮ್ಯಾನ್ಸ್ ಎಲ್ಲವೂ ಇದೆಯೆಂಬುದನ್ನು ಟ್ರೈಲರ್ ಸಾರಿ ಹೇಳುತ್ತಿದೆ. ಜೊತೆಗೆ ಕೆಲವು ಮಧುರವಾದ ಹಾಡುಗಳ ಝಲಕ್​ ಸಹ ಟ್ರೈಲರ್​ನಲ್ಲಿ ನೀಡಲಾಗಿದೆ. ಬಿಡುಗಡೆ ಆದ ಕೆಲವೇ ಸಮಯದಲ್ಲಿ ಲಕ್ಷಾಂತರ ಮಂದಿ ‘ಖುಷಿ’ ಸಿನಿಮಾದ ಟ್ರೈಲರ್ ಅನ್ನು ನೋಡಿ ಮೆಚ್ಚಿಕೊಂಡಿದ್ದಾರೆ.

‘ಖುಷಿ’ ಸಿನಿಮಾದಲ್ಲಿ ವಿಜಯ್ ದೇವರಕೊಂಡ, ಸಮಂತಾ ಜೊತೆಗೆ ವೆನ್ನಿಲ ಕಿಶೋರ್, ಸತ್ಯರಾಜ್, ಸಚಿನ್ ಖೇಡ್ಕರ್, ಜಯರಾಂ, ರಾಹುಲ್ ರಾಮಕೃಷ್ಣ ಇನ್ನೂ ಕೆಲವು ಅತ್ಯುತ್ತಮ ನಟರು ಸಿನಿಮಾದಲ್ಲಿದ್ದಾರೆ. ಸಿನಿಮಾದ ಕತೆಯನ್ನು ಶಿವ ನಿರ್ವಾನ ಬರೆದು, ನಿರ್ದೇಶನ ಮಾಡಿದ್ದಾರೆ. ಸಿನಿಮಾ ನಿರ್ಮಾಣ ಮಾಡಿರುವುದು ನವೀನ್ ಯೆರನೇನಿ ಹಾಗೂ ವೈ ರವಿಶಂಕರ್ ಅವರುಗಳು ಮೈತ್ರಿ ಮೂವಿ ಮೇಕರ್ಸ್ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ. ಸಿನಿಮಾಕ್ಕೆ ಸಂಗೀತವನ್ನು ಹೇಷಮ್ ಅಬ್ದುಲ್ ಹವಾದ್ ನೀಡಿದ್ದಾರೆ. ‘ಖುಷಿ’ ಸಿನಿಮಾವು ಸೆಪ್ಟೆಂಬರ್ 1 ರಂದು ಬಿಡುಗಡೆ ಆಗಲಿದೆ.

ತಾಜಾ ಸುದ್ದಿ

Leave A Reply

Your email address will not be published.