EBM News Kannada
Leading News Portal in Kannada

ಭಗವಂತನಿಗೆ ಬೇಕಾದಾಗ ಇಂಥ ಹೂವುಗಳನ್ನು ಕರೆಸಿಕೊಳ್ಳುತ್ತಾನೆ: ಸ್ಪಂದನಾ ಅಗಲಿಕೆಗೆ ಕೋಡಿಶ್ರೀ ಸಂತಾಪ – Kannada News | Kodi Mutt Swamiji Talks after Pays Final Tribute To Spandana Vijay Raghavendra

0


ಶೋಕ ಸಾಗರವೇ ತುಂಬಿದೆ.. ನೀರವ ಮೌನ ಆವರಿಸಿದೆ.. ಸದಾ ಆನಂದದಿಂದ ತೇಲಾಡ್ತಿದ್ದ ಮನೆಯಲ್ಲಿ ಹೇಳಲಾಗದ ದುಃಖ ಆವರಿಸಿದೆ.. ನಟ ವಿಜಯರಾಘವೇಂದ್ರ ಅವರ ಪತ್ನಿ ಸ್ಪಂದನಾ (Spandana Vijay Raghavendra) ನಿಧನ ಹೊಂದಿ ಎರಡು ದಿನ ಕಳೆದಿದ್ದು, ನಿನ್ನೆ(ಆಗಸ್ಟ್ 08) ರಾತ್ರಿ ಅವರ ಪಾರ್ಥಿವ ಶರೀರವನ್ನು ಥೈಲ್ಯಾಂಡ್‌ನಿಂದ ಬೆಂಗಳೂರಿಗೆ ತರಲಾಗಿದ್ದು, ಮಲ್ಲೇಶ್ವರಂನ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಚಿತ್ರರಂಗ, ರಾಜಕೀಯ ನಾಯಕರು ಸೇರಿದಂತೆ ಹಲವು ಗಣ್ಯರು ಸ್ಪಂದನಾ ಅಂತಿಮ ದರ್ಶನಕ್ಕೆ ಆಗಮಿಸುತ್ತಿದ್ದಾರೆ. ಕೋಡಿಮಠದ ಡಾ ಶಿವಾನಂದ ಮಹಾಸ್ವಾಮೀಜಿ ಸಹ ಸ್ಪಂದನಾ ಅಂತಿಮ ದರ್ಶನ ಪಡೆದುಕೊಂಡರು.

ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಕೋಡಿಶ್ರೀ ಸ್ಪಂದನಾ ಅಕಾಲಿಕವಾಗಿ ನಿಧನ ಹೊಂದಿದ್ದಾರೆ. ಭಗವಂತನಿಗೆ ಬೇಕಾದಾಗ ಇಂಥ ಹೂವುಗಳನ್ನು ಕರೆಸಿಕೊಳ್ಳುತ್ತಾನೆ. ಭಗವಂತ ಬುಗರಿ ತರಹ ಗೊಂಬೆಯನ್ನು ಆಡಿಸುತ್ತಾ ಇರುತ್ತಾನೆ. ಅವನಿಗೆ ಬೇಕೆಂದಾಗ ಹೂವುಗಳನ್ನು ಕರೆದುಕೊಂಡು ಹೋಗುತ್ತಾನೆ. ಸ್ಪಂದನಾ ಚಿಕ್ಕಪ್ಪ ಬಿ.ಕೆ.ಹರಿಪ್ರಸಾದ್ ನನ್ನ ಕ್ಲಾಸ್​ಮೆಂಟ್. ಸ್ಪಂದನಾ ಕುಟುಂಬಸ್ಥರು ನಮಗೆ ಅತ್ಯಂತ ಆತ್ಮೀಯರಾಗಿದ್ದರು ಸ್ಪಂದನಾ ಆತ್ಮಕ್ಕೆ ಭಗವಂತ ಶಾಂತಿ ಕರುಣಿಸಲಿ ಎಂದರು.

ಇನ್ನಷ್ಟು ವಿಡಿಯೋ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Related Video

Leave A Reply

Your email address will not be published.