EBM News Kannada
Leading News Portal in Kannada

Viral: ‘ಭಯ ಒಳ್ಳೆಯದು’ ಸುನೀಲ್​ ಶೆಟ್ಟಿ ಲಿಂಕ್ಡ್​ಇನ್​ ಪೋಸ್ಟ್​ ವೈರಲ್​ – Kannada News | Face the Fear It is good Bollywood actor Suniel Shetty shared his thoughts on LinkedIn

0


Sunil Shetty : ‘ಭಯವು ಬೆಳವಣಿಗೆಯ ಸಹಜ ಭಾಗ. ನೀವು ಭಯಪಡುವುದೆಲ್ಲ ನಿಜವಲ್ಲ, ಅದು ಅನುಮಾನಗಳ ಮೊತ್ತ. ಭಯವನ್ನು ಎದುರಿಸಿದಷ್ಟೂ ನಿಮ್ಮನ್ನು ನೀವು ಅರಿತುಕೊಳ್ಳುತ್ತೀರಿ. ಭಯವೆನ್ನಿಸಿದಾಗೆಲ್ಲ ಆಳವಾದ ಉಸಿರು ತೆಗೆದುಕೊಳ್ಳಿ. ಇನ್ನೇನು ಮುಗಿದೇ ಹೋಯಿತು ಎಂದು ಗಡಿಯಂಚಿಗೆ ಬಂದು ನಿಂತಾಗಲೇ ದೊಡ್ಡ ಕನಸೊಂದು ನಿಮ್ಮ ಬೆನ್ನಿಗಂಟುವುದು!’

Viral: 'ಭಯ ಒಳ್ಳೆಯದು' ಸುನೀಲ್​ ಶೆಟ್ಟಿ ಲಿಂಕ್ಡ್​ಇನ್​ ಪೋಸ್ಟ್​ ವೈರಲ್​

ನಟ ಸುನೀಲ್​ ಶೆಟ್ಟಿ

Fear : ಬದುಕಿನಲ್ಲಿ ಭಯವನ್ನು ಎದುರಿಸುವುದು ಹೇಗೆ ಎನ್ನುವುದರ ಕುರಿತು ನಟ ಸುನೀಲ್ ಶೆಟ್ಟಿ (Suniel Shetty) ತಮ್ಮ ಕೆಲವೊಂದು ವಿಚಾರಗಳನ್ನು ಲಿಂಕ್ಡ್ಇನ್​ನಲ್ಲಿ ಹಂಚಿಕೊಂಡಿದ್ದಾರೆ. ಏನಾದರೂ ಹೊಸದನ್ನು ಮಾಡಬೇಕೆಂದು ಹೊರಟಾಗ ಭಯವಾಗುತ್ತದೆ ನಿಜ. ಈ ಭಯ ಸುನಿಲ್​ಗೂ ಇತ್ತು. ಆದರೆ ಇದನ್ನು ಅವರು ಹೇಗೆ ಎದುರಿಸಿದರು ಎನ್ನುವುದನ್ನು ವಿವರಿಸಿದ್ಧಾರೆ. ಸಾಮಾಜಿಕ ಜಾಲತಾಣದಲ್ಲಿ ಇವರ ಪೋಸ್ಟ್​ ಇದೀಗ ವೈರಲ್ ಆಗುತ್ತಿದೆ. ನಟ ರಜಿನೀಕಾಂತ್ ಅವರೊಂದಿಗೆ ಕೆಲಸ ಮಾಡುವಾಗ ತಾನು ಹೇಗೆ ಭಯದಿಂದ ತಟಸ್ಥಗೊಂಡಿದ್ದೆ ಎನ್ನುವುದನ್ನೂ ಈ ಪೋಸ್ಟ್​​ನಲ್ಲಿ ವಿವರಿಸಿದ್ಧಾರೆ.

‘ಭಯ ಎನ್ನುವುದು ಯಾರಿಗೂ ವಿನಾಯಿತಿ ಕೊಡುವುದಿಲ್ಲ. ನಮ್ಮ ವೃತ್ತಿಯ ವಿಷಯದಲ್ಲಿ ಇರಬಹುದು ಅಥವಾ ವೈಯಕ್ತಿಕ ಜೀವನದಲ್ಲಿ ಇರಬಹುದು, ನಾವೆಲ್ಲರೂ ಒಂದಿಲ್ಲಾ ಒಂದು ಘಟ್ಟದಲ್ಲಿ ಈ ಭಯದಿಂದ ತತ್ತರಿಸಿರುತ್ತೇವೆ. ಆದರೆ ಈ ಭಯವನ್ನು ನಿರ್ಲಕ್ಷಿಸದೆ ಇದನ್ನು ‘ಟಿಕೆಟ್​​’ ನಂತೆ ಸ್ವೀಕರಿಸಿದರೆ ಅದು ನಮ್ಮ ಯಶಸ್ಸಿಗೆ ಕಾರಣವಾಗಬಹುದು. ‘ಹೇಯ್ ಇಲ್ಲಿ ಗಮನಿಸು ದೊಡ್ಡದೇನೋ ಘಟಿಸಲಿದೆ’ ಎಂಬ ಸೂಚನೆಯನ್ನು ಈ ಭಯವು ಕೊಡುತ್ತದೆ. ಆಗ ದೃಢಮನಸ್ಸಿನಿಂದ ಮುನ್ನುಗ್ಗಬೇಕು. ಇದನ್ನು ನಾನು ಸಿನೆಮಾ ಮತ್ತು ಉದ್ಯಮ ಎರಡೂ ಕ್ಷೇತ್ರಗಳಲ್ಲೂ ಅನುಭವಿಸಿದ್ದೇನೆ. ಖಂಡಿತ ಭಯವು ಕೆಟ್ಟದ್ದಲ್ಲ.’

ಇದನ್ನೂ ಓದಿ

ಈ ಪೋಸ್ಟ್​ ಅನ್ನು ಸುನೀಲ್​ ಆ. 8ರಂದು ಹಂಚಿಕೊಂಡಿದ್ದಾರೆ. ಈತನಕ ಸುಮಾರು 10,000 ಜನರು ಲೈಕ್ ಮಾಡಿದ್ದು ಸುಮಾರು 600 ಜನರು ಪ್ರತಿಕ್ರಿಯಿಸಿದ್ಧಾರೆ. ಅನೇಕರು ಸುನೀಲ್​ ಅವರ ವಿಚಾರಗಳಿಗೆ ಪ್ರತಿಕ್ರಿಯಿಸಿದ್ದಾರೆ. ಸುನೀಲ್​ ಸರ್​ ಭಯಗೊಳ್ಳುತ್ತಾರೆ ಎನ್ನುವುದು ನಂಬಲಸಾಧ್ಯ. ಆದರೆ ಅದನ್ನು ಮೀರಿ ಅಗಾಧವಾದದ್ದನ್ನು ಸಾಧಿಸಲು ಭಯ ಎನ್ನುವುದು ಟಿಕೆಟ್ ಇದ್ದಂತೆ ಎಂದು ಹೇಳಿದ್ದರ ಬಗ್ಗೆ ಅಪಾರ ಹೆಮ್ಮೆ ಉಂಟಾಗುತ್ತಿದೆ ಎಂದಿದ್ದಾರೆ ಒಬ್ಬರು.

ಭಯ ಎಂದರೆ ಅಪಾಯ. ಎಲ್ಲ ಸಂದರ್ಭಗಳಲ್ಲಿಯೂ ಇದನ್ನು ನಕಾರಾತ್ಮಕವಾಗಿ ನೋಡಬಾರದು. ಸೂಕ್ತ ರೀತಿಯಲ್ಲಿ ಇದಕ್ಕೆ ತೆರೆದುಕೊಂಡರೆ ದೀರ್ಘಾವಧಿಯಲ್ಲಿ ಇದು ಒಳ್ಳೆಯ ಫಲಿತಾಂಶವನ್ನು ನೀಡುತ್ತದೆ ಎಂದಿದ್ದಾರೆ ಇನ್ನೊಬ್ಬರು. ನನ್ನ ತಲೆಯಲ್ಲಿದ್ದ ಕೆಲವು ಆಲೋಚನೆಗಳನ್ನು ಹೊರಹಾಕಲು ನಿಮ್ಮ ಈ ಪೋಸ್ಟ್​ ಪ್ರೇರಣೆಯಾಗಿದೆ ಎಂದಿದ್ದಾರೆ ಮತ್ತೊಬ್ಬರು.

ಭಯವನ್ನು ಸಂಕೇತ ಸಂಕೇತದಂತೆ ಸ್ವೀಕರಿಸಿ, ಅದರೆಡೆ ಹೆಚ್ಚು ಗಮನ ಹರಿಸಿ. ಏಕೆಂದರೆ ಇದು ನಿಮ್ಮ ಬೆಳವಣಿಗೆಯ ಹಂತಕ್ಕೆ ಬುನಾದಿಯಾಗುವಂಥದ್ದು ಎಂದಿದ್ದಾರೆ ಇನ್ನೊಬ್ಬರು. ನೀವು ಹೇಳಿದ್ದು ಸತ್ಯ, ನನ್ನ 54ನೇ ವಯಸ್ಸಿನಲ್ಲಿ ನಾನು ಒಂದು ಸ್ಟಾರ್ಟ್​ಅಪ್​ ಶುರುಮಾಡಿದೆ. ಆಗ ಇದ್ದ ಭಯ ಈಗಿಲ್ಲ. ಕಂಪೆನಿ ಉತ್ತಮವಾಗಿ ಸಾಗುತ್ತಿದೆ ಎಂದಿದ್ದಾರೆ ಮತ್ತೊಬ್ಬರು.

ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

 

Published On – 3:06 pm, Wed, 9 August 23

ತಾಜಾ ಸುದ್ದಿ

Leave A Reply

Your email address will not be published.