EBM News Kannada
Leading News Portal in Kannada

ರಜನಿಕಾಂತ್​ ಸಿನಿಮಾದ ಅಬ್ಬರದಿಂದ ಮುಂದಕ್ಕೆ ಹೋಯ್ತು ಮಲಯಾಳಂ ಭಾಷೆಯ ‘ಜೈಲರ್​’ ಬಿಡುಗಡೆ ದಿನಾಂಕ – Kannada News | Malayalam Jailer movie release date postponed due to Rajinikanth starrer Tamil film crazy

0


Malayalam Jailer Movie Postponed: ಈ ಎರಡು ಚಿತ್ರಗಳ ನಡುವಿನ ಪೈಪೋಟಿಯನ್ನು ಗಂಭೀರವಾಗಿ ಪರಿಗಣಿಸಲಾಗಿತ್ತು. ಆದರೆ ಈಗ ರಜನಿಕಾಂತ್ ನಟನೆಯ ಚಿತ್ರಕ್ಕೆ ಮಲಯಾಳಂ ಭಾಷೆಯ ‘ಜೈಲರ್​’ ಸಿನಿಮಾ ದಾರಿ ಮಾಡಿಕೊಟ್ಟಿದೆ.

ರಜನಿಕಾಂತ್​ ಸಿನಿಮಾದ ಅಬ್ಬರದಿಂದ ಮುಂದಕ್ಕೆ ಹೋಯ್ತು ಮಲಯಾಳಂ ಭಾಷೆಯ ‘ಜೈಲರ್​’ ಬಿಡುಗಡೆ ದಿನಾಂಕ

ರಜನಿಕಾಂತ್​, ಮಲಯಾಳಂನ ‘ಜೈಲರ್​’ ಸಿನಿಮಾ ಪೋಸ್ಟರ್​

ಒಂದೇ ಹೆಸರಿನಲ್ಲಿ ಎರಡು ಸಿನಿಮಾ ತಯಾರಾದರೆ ಪ್ರೇಕ್ಷಕರಲ್ಲಿ ಗೊಂದಲ ಉಂಟಾಗುತ್ತದೆ. ಆ ಸಿನಿಮಾಗಳು ಒಂದೇ ದಿನ ಬಿಡುಗಡೆ ಆದರಂತೂ ಗೊಂದಲ ಮತ್ತಷ್ಟು ಹೆಚ್ಚಾಗುತ್ತದೆ. ತಮಿಳಿನ ‘ಜೈಲರ್​’ (Jailer Movie) ಮತ್ತು ಮಲಯಾಳಂ ಭಾಷೆಯ ‘ಜೈಲರ್​’ ಸಿನಿಮಾಗಳ ನಡುವೆ ಅಂಥದ್ದೇ ಪರಿಸ್ಥಿತಿ ನಿರ್ಮಾಣ ಆಗಿತ್ತು. ಈ ಎರಡೂ ಸಿನಿಮಾಗಳು ಒಂದೇ ದಿನಾಂಕದಲ್ಲಿ ಬಿಡುಗಡೆ ಆಗಲು ತಯಾರಾಗಿದ್ದವು. ಆದರೆ ಕೊನೇ ಕ್ಷಣದಲ್ಲಿ ಈ ಕ್ಲ್ಯಾಶ್​ ತಪ್ಪಿದೆ. ರಜನಿಕಾಂತ್​ (Rajinikanth) ನಟನೆಯ ‘ಜೈಲರ್​’ ಸಿನಿಮಾದ ಅಬ್ಬರಕ್ಕೆ ಮಲಯಾಳಂ ಭಾಷೆಯ ‘ಜೈಲರ್​’ ಚಿತ್ರದ ಬಿಡುಗಡೆ ದಿನಾಂಕ ಮುಂದೂಡಲ್ಪಟ್ಟಿದೆ. ಆ ಮೂಲಕ ಪ್ರೇಕ್ಷಕರಲ್ಲಿ ಮೂಡಿದ್ದ ಗೊಂದಲಕ್ಕೆ ತೆರೆ ಬಿದ್ದಿದೆ. ಮೊದಲಿನ ಪ್ಲ್ಯಾನ್​ ಪ್ರಕಾರವೇ ರಜನಿಕಾಂತ್​ ಅವರ ಸಿನಿಮಾ ಆಗಸ್ಟ್​ 10ರಂದು ಅದ್ದೂರಿಯಾಗಿ ತೆರೆ ಕಾಣಲಿದೆ.

ಮಲಯಾಳಂನ ‘ಜೈಲರ್’ ಸಿನಿಮಾಗೆ ಸಕ್ಕಿರ್ ಮದಥಿಲ್ ನಿರ್ದೇಶನ ಮಾಡಿದ್ದಾರೆ. ಇತ್ತ, ತಮಿಳಿನ ‘ಜೈಲರ್​’ ಸಿನಿಮಾವನ್ನು ನೆಲ್ಸನ್​ ನಿರ್ದೇಶಿಸಿದ್ದಾರೆ. ಎರಡರಲ್ಲಿ ಒಂದು ಸಿನಿಮಾದ ಟೈಟಲ್​ ಬದಲಾಗಬೇಕು ಎಂಬ ಒತ್ತಾಯ ಕೇಳಿಬಂದಿತ್ತು. ಆದರೆ ಅಂತಿಮವಾಗಿ ಮಲಯಾಳಂ ಭಾಷೆಯ ‘ಜೈಲರ್​’ ಸಿನಿಮಾದ ರಿಲೀಸ್​ ದಿನಾಂಕವನ್ನು ಮುಂದೂಡಿದ್ದರಿಂದ ಪ್ರೇಕ್ಷಕರ ಗೊಂದಲ ನಿವಾರಣೆ ಆಗಿದೆ. ಸದ್ಯಕ್ಕೆ ಟೈಟಲ್​ ವಿವಾದ ತಣ್ಣಗಾಗಿದೆ.

ಟೈಟಲ್​ ಬದಲಾಯಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಎರಡೂ ಸಿನಿಮಾ ತಂಡಗಳು ಕೋರ್ಟ್​ ಮೆಟ್ಟಿಲು ಏರಿವೆ. ರಜನಿಕಾಂತ್​ ಅವರ ಸಿನಿಮಾಗೆ ಹೋಲಿಸಿದರೆ ಮಲಯಾಳಂನ ‘ಜೈಲರ್​’ ಸಿನಿಮಾದ ಬಜೆಟ್​ ಬಹಳ ಚಿಕ್ಕದ್ದು. ಹಾಗಿದ್ದರೂ ಕೂಡ ಒಂದೇ ಶೀರ್ಷಿಕೆಯ 2 ಸಿನಿಮಾಗಳು ಒಂದೇ ದಿನ ರಿಲೀಸ್​ ಆಗುವುದು ಉತ್ತಮ ಬೆಳವಣಿಗೆ ಅಲ್ಲ. ಹಾಗಾಗಿ ಈ ಚಿತ್ರಗಳ ನಡುವಿನ ಪೈಪೋಟಿಯನ್ನು ಗಂಭೀರವಾಗಿ ಪರಿಗಣಿಸಲಾಗಿತ್ತು. ಈಗ ರಜನಿಕಾಂತ್ ಅವರ ಚಿತ್ರಕ್ಕೆ ಮಲಯಾಳಂ ಭಾಷೆಯ ‘ಜೈಲರ್​’ ಸಿನಿಮಾ ದಾರಿ ಮಾಡಿಕೊಟ್ಟಿದೆ.

ಕಾಲಿವುಡ್​ನ ‘ಜೈಲರ್​’ ಚಿತ್ರವು ಕನ್ನಡ, ತಮಿಳು, ಮಲಯಾಳಂ, ಹಿಂದಿ ಮತ್ತು ತೆಲುಗಿನಲ್ಲಿ ಬಿಡುಗಡೆ ಆಗಲಿದೆ. ಈ ಸಿನಿಮಾದಲ್ಲಿ ರಜನಿಕಾಂತ್​ ಮಾತ್ರವಲ್ಲದೇ ಜಾಕಿ ಶ್ರಾಫ್​, ಶಿವರಾಜ್​ಕುಮಾರ್​, ಮೋಹನ್​ಲಾಲ್​ ಮುಂತಾದವರು ನಟಿಸಿದ್ದಾರೆ. ಆ ಕಾರಣದಿಂದ ಹೆಚ್ಚು ಹೈಪ್​ ಕ್ರಿಯೇಟ್​ ಆಗಿದೆ. ಈಗಾಗಲೇ ಬುಕಿಂಗ್​ ಓಪನ್​ ಆಗಿದ್ದು, ಅನೇಕ ಕಡೆಗಳಲ್ಲಿ ಟಿಕೆಟ್​ ಸೋಲ್ಡ್​ ಔಟ್​ ಆಗಿದೆ. ಮೊದಲ ದಿನ ಬಾಕ್ಸ್​ ಆಫೀಸ್​ನಲ್ಲಿ ಈ ಸಿನಿಮಾ ಧೂಳೆಬ್ಬಿಸುವ ಸಾಧ್ಯತೆ ದಟ್ಟವಾಗಿದೆ. ತಮನ್ನಾ ಭಾಟಿಯಾ ಹೆಜ್ಜೆ ಹಾಕಿದ ‘ಕಾವಾಲಾ..’ ಹಾಡು ಸೂಪರ್​ ಹಿಟ್​ ಆಗಿದ್ದು ಕೂಡ ‘ಜೈಲರ್​’ ಮೇಲಿನ ನಿರೀಕ್ಷೆ ಹೆಚ್ಚಲು ಕಾರಣ ಆಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ತಾಜಾ ಸುದ್ದಿ



Leave A Reply

Your email address will not be published.