EBM News Kannada
Leading News Portal in Kannada

Bigg Boss Kannada: ಸೆಪ್ಟೆಂಬರ್​ನಲ್ಲಿ ಶುರುವಾಗಲಿದೆ ಬಿಗ್​ಬಾಸ್ ಕನ್ನಡ – Kannada News | Bigg Boss Kannada Season 10 and OTT 2 Work Starts

0


Bigg Boss: ಬಿಗ್​ಬಾಸ್ 10ನೇ ಸೀಸನ್ ಹಾಗೂ ಒಟಿಟಿಯ ಎರಡನೇ ಸೀಸನ್ ಶೀಘ್ರವೇ ಪ್ರಾರಂಭವಾಗಲಿದೆ.

ಬಿಗ್​ಬಾಸ್ ಕನ್ನಡ

ಕನ್ನಡ ಟಿವಿ ಲೋಕದ ಅತ್ಯಂತ ಜನಪ್ರಿಯ ಶೋ ಬಿಗ್​ಬಾಸ್ (Bigg Boss) ಕನ್ನಡ. ಈ ವರೆಗೆ ಒಂಬತ್ತು ಸೀಸನ್​ಗಳು ಪ್ರಸಾರವಾಗಿವೆ. ಬಿಗ್​ಬಾಸ್ ಪ್ರಸಾರವಾದ ಪ್ರತಿಬಾರಿ ಪರ-ವಿರೋಧ ಚರ್ಚೆಗಳು ಇರುತ್ತವೆಯಾದರೂ ಜನರು ನೋಡುವುದಂತೂ ಬಿಟ್ಟಿಲ್ಲ. ಬಿಗ್​ಬಾಸ್ ಸೀಸನ್ 9ರಲ್ಲಿ ನಟ, ರೇಡಿಯೋ ಜಾಕಿ ರೂಪೇಶ್ ಶೆಟ್ಟಿ ವಿಜೇತರಾಗಿದ್ದರು, ಚೆನ್ನಾಗಿ ಆಡಿದ್ದ ರಾಕೇಶ್ ಅಡಿಗ ರನ್ನರ್ ಅಪ್ ಆಗಿದ್ದರು. ಕಳೆದ ಬಾರಿ ಬಿಗ್​ಬಾಸ್ ಒಟಿಟಿ ಮೊದಲ ಸೀಸನ್ ಸಹ ಪ್ರಾರಂಭವಾಗಿದ್ದು ಅದನ್ನೂ ಕೂಡ ಸುದೀಪ್ (Sudeep) ಅವರೇ ನಿರೂಪಣೆ ಮಾಡಿದ್ದರು. ಇದೀಗ ಮತ್ತೊಮ್ಮೆ ಬಿಗ್​ಬಾಸ್​ ಬರಲು ಸಜ್ಜಾಗಿದೆ.

‘ವಿಕ್ರಾಂತ್ ರೋಣ’ ಸಿನಿಮಾ ಬಳಿಕ ದೊಡ್ಡ ಗ್ಯಾಪ್ ತೆಗೆದುಕೊಂಡ ನಟ ಸುದೀಪ್ ಇದೀಗ ಹೊಸ ಸಿನಿಮಾದ ಚಿತ್ರೀಕರಣ ಶುರು ಮಾಡಿದ್ದಾರೆ. ತಮ್ಮ 46ನೇ ಸಿನಿಮಾದ ಚಿತ್ರೀಕರಣವನ್ನು ಚೆನ್ನೈನ ಮಹಾಬಲಪುರಂನಲ್ಲಿ ಸುದೀಪ್ ಮಾಡುತ್ತಿದ್ದು, ಈ ಸಿನಿಮಾದ ಚಿತ್ರೀಕರಣ ಮುಗಿಸಿದ ಬಳಿಕ ಬಿಗ್​ಬಾಸ್​ಹೊಸ ಸೀಸನ್ ಪ್ರಾರಂಭ ಮಾಡಲಿದ್ದಾರೆ ಎನ್ನಲಾಗುತ್ತಿದೆ.

ಹಲವು ವರ್ಷಗಳ ಕಾಲ ಬಿಗ್​ಬಾಸ್ ಆಯೋಜನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಪರಮೇಶ್ವರ್ ಗುಂಡಕಲ್ ಈ ಬಾರಿ ಬಿಗ್​ಬಾಸ್ ರಿಯಾಲಿಟಿ ಶೋನ ಭಾಗವಾಗಿರುವುದಿಲ್ಲ. ಅದು ಮಾತ್ರವೇ ಅಲ್ಲದೆ ಈ ಬಾರಿ ಬಿಗ್​ಬಾಸ್ ಒಟಿಟಿ ಎರಡನೇ ಸೀಸನ್ ಹಾಗೂ ಬಿಗ್​ಬಾಸ್ ಸೀಸನ್ 10 ಎರಡೂ ಸಹ ಒಂದರ ಬಳಿಕ ಒಂದು ನಡೆಸಬೇಕಿರುವುದು ಸಹ ಸವಾಲಿನ ಕೆಲವೇ ಆಗಿದೆ.

ಕೆಲವು ಮೂಲಗಳ ಪ್ರಕಾರ ಈಗಾಗಲೇ ಬಿಗ್​ಬಾಸ್ ಹೊಸ ಸೀಸನ್​ಗೆ ತಯಾರಿ ಆರಂಭವಾಗಿದೆ. ಸ್ಪರ್ಧಿಗಳ ಹುಡುಕಾಟ, ಸಂದರ್ಶನ, ಚರ್ಚೆ, ಒಪ್ಪಂದ ಕಾರ್ಯಗಳು ಚಾಲ್ತಿಯಲ್ಲಿವೆ. ಆ ನಂತರ ಹೊಸ ಸೆಟ್ ನಿರ್ಮಾಣ ಹಾಗೂ ಚಿತ್ರೀಕರಣಗಳು ಪ್ರಾರಂಭಗೊಳ್ಳಲಿವೆ. ಹಿಂದಿ ಮಾದರಿಯಲ್ಲಿಯೇ ಬಿಗ್​ಬಾಸ್ ಟಿವಿ ಸೀಸನ್ ನಡೆದ ಬಳಿಕ ಬಿಗ್​ಬಾಸ್ ಒಟಿಟಿ ಸೀಸನ್ 2ರ ಆರಂಭ ಆಗುವ ಸಾಧ್ಯತೆ ಇದೆ.

ನಟ ಸುದೀಪ್ ಪ್ರಸ್ತುತ ‘ಕಿಚ್ಚ 46’ ಸಿನಿಮಾದ ಚಿತ್ರೀಕರಣದಲ್ಲಿದ್ದಾರೆ ಆದರೆ ಸಿನಿಮಾದ ಚಿತ್ರೀಕರಣ ಮುಗಿದ ಬಳಿಕ ಅನುಪ್ ಭಂಡಾರಿಯ ಹೊಸ ಸಿನಿಮಾದ ಚಿತ್ರೀಕರಣ ಆರಂಭಿಸಲಿದ್ದಾರೆ. ಅವರೇ ಹೇಳಿಕೊಂಡಿರುವ ಪ್ರಕಾರ ಅವರ 50ನೇ ಸಿನಿಮಾ ವರೆಗೂ ಅವರು ಸತತವಾಗಿ ಬ್ಯುಸಿಯಾಗಿರುವುದು ಮಾತ್ರವಲ್ಲ ಸಾಲಾಗಿ ಸಿನಿಮಾಗಳು ಸಹ ಒಪ್ಪಿಗೆ ಆಗಿಬಿಟ್ಟಿವೆ. ಇವುಗಳ ನಡುವೆಯೇ ಬಿಗ್​ಬಾಸ್ ರಿಯಾಲಿಟಿ ಶೋ ಸಹ ನಡೆಯಲಿದೆ.

ತಾಜಾ ಸುದ್ದಿ

Leave A Reply

Your email address will not be published.