EBM News Kannada
Leading News Portal in Kannada

Seetha Raama Serial: ಸೀತಾಳ ಚಿಂತೆ ನೋಡಿ ಶ್ರೀರಾಮನ ಮನಸ್ಸು ಮರುಗಿದೆ! ಕಷ್ಟಕ್ಕೆ ಹೆಗಲು ಕೊಡುವ ಅವನ ನಿರ್ಧಾರ ಬಲವಾಗುತ್ತಾ? – Kannada News | Seetha Raama Serial Episode 17 Explainer; Ram Worries on Seeing Seetha Being Stressed pgt

0


‘ಸೀತಾ ರಾಮ’ ಧಾರಾವಾಹಿ ಸಂಚಿಕೆ 17: ಆಫೀಸ್ ನಿಂದ ಹೊರಟ ಸೀತಾಳನ್ನು ಹಿಂಬಾಲಿಸಿದ ರಾಮ್ ಅವಳ ಬಳಿ ಚಿಂತೆಗೆ ಕಾರಣ ಏನು? ಎಂದು ಕೇಳುತ್ತಾನೆ. ಆದರೆ ಎಷ್ಟು ಕೇಳಿದರೂ ಅದಕ್ಕೆ ಉತ್ತರಿಸದ ಸೀತಾ, ಸ್ವಲ್ಪ ಕೆಲಸ ಇದೆ ಎಂದು ಹೇಳಿ ಅಲ್ಲಿಂದ ರುದ್ರ ಪ್ರತಾಪನ ಆಫೀಸಿಗೆ ಬರುತ್ತಾಳೆ. ಮುಂದೇನಾಗಬಹುದು ಕಾದು ನೋಡಬೇಕಾಗಿದೆ.

‘ಸೀತಾ ರಾಮ’ (Seetha Raama Serial) ಧಾರಾವಾಹಿ ಸಂಚಿಕೆ 17: ಮನೆಗೆ ನೋಟಿಸ್ ಬಂದಿರುವ ವಿಚಾರ ತಿಳಿದಿರುವ ಅಜ್ಜ ಮತ್ತು ಸಿಹಿಗೆ ಅಜ್ಜಿಗೆ ಹೇಳಿಕೊಳ್ಳಲಾಗದ ಕಸಿವಿಸಿ. ಇನ್ನು ರಾಮ್ ಮನೆಯಲ್ಲಿ ಭಾರ್ಗವಿಗೆ ಆಫೀಸ್ ನಲ್ಲಿ ನಡೆಯುತ್ತಿರುವ ವಿಚಾರವನ್ನು ತನ್ನಿಂದ ಮುಚ್ಚಿಡುತ್ತಿದ್ದಾರೆ ಎಂಬ ಸಂಶಯ. ಅದಕ್ಕಾಗಿಯೇ ರಾಮ್ ಬಳಿ ಕೊಕ್ಕಿ ಕೊಕ್ಕಿ ಕೇಳುತ್ತಾಳೆ. ಆದರೆ ಅದಕ್ಕೆ ಆಸ್ಪದ ಕೊಡದ ಅಶೋಕ್, ರಾಮ್ ನನ್ನ ಪ್ರತಿ ಬಾರಿಯೂ ಸತ್ಯ ಹೇಳದಂತೆ ತಡೆಯುತ್ತಾನೆ.

ಸತ್ಯನನ್ನು ಹೀಯಾಳಿಸಿದ ಭಾರ್ಗವಿ

ಯಾರಿಂದಲೂ ವಿಷಯ ತಿಳಿದುಕೊಳ್ಳಲಾಗದ ಭಾರ್ಗವಿ ಮಾವನ ಬಳಿ ಬರುತ್ತಾಳೆ. ಮಾತ್ರೆ ಕೊಡುವ ನೆಪದಲ್ಲಿ ಆಫೀಸ್ ನಲ್ಲಿ ಆಗುತ್ತಿರುವ ವಿಷಯ ತಿಳಿದುಕೊಳ್ಳುವ ಹಂಬಲ ಅವಳದ್ದು ಆದರೆ ತಾತ ಕೂಡ ಯಾವ ವಿಚಾರವನ್ನೂ ಹೇಳುವುದಿಲ್ಲ. ಇದನ್ನೆಲ್ಲಾ ದೂರದಲ್ಲಿ ನಿಂತು ಕೇಳಿಸಿಕೊಳ್ಳುತ್ತಿರುವ ರಾಮ್ ಚಿಕ್ಕಪ್ಪ ಸತ್ಯನನ್ನು ನೋಡಿ ತಾತ ಕೋಪಗೊಳ್ಳುತ್ತಾರೆ. ಅದನ್ನೆಲ್ಲಾ ನೋಡಿದ ಭಾರ್ಗವಿ ನೀನು ಈ ಮನೆಗೆ ಅಪಶಕುನಾ ಎಂದು ಸತ್ಯನನ್ನು ಹಿಯಾಳಿಸುತ್ತಾಳೆ.

ಬಕ ಪಕ್ಷಿಯಂತೆ ಕಾದು ಕುಳಿತ ರುದ್ರ ಪ್ರತಾಪ

ಇನ್ನು ಸೀತಾ ಬರುತ್ತಾಳೋ ಇಲ್ಲವೋ ಎಂದು ರುದ್ರ ಪ್ರತಾಪ, ಬಕ ಪಕ್ಷಿಯಂತೆ ಕಾದು ಕುಳಿತುಕೊಳ್ಳುತ್ತಾನೆ. ಕಮಿಶನ್ ಕೇಳಿದ ಸೀತಾಳ ಅತ್ತಿಗೆಗೂ ಬೈದು, ಅವಳು ಬಂದರೆ ಮಾತ್ರ ಹಣ ಕೊಡುವುದಾಗಿ ಹೇಳಿ ಅಲ್ಲಿಂದ ಕಳುಹಿಸುತ್ತಾನೆ. ಪ್ಲಾನ್ ಮಾಡಿ ಜಯ ಸಿಕ್ಕರೂ ದುಡ್ಡು ಸಿಗದ ಸೀತಾಳ ಅತ್ತಿಗೆ ಅಲ್ಲಿಂದ ನಡೆಯುತ್ತಾರೆ. ಇನ್ನು ಆಫೀಸ್ ಗೆ ಬರುವಾಗಲೇ ಸೀತಾ ಗಾಬರಿಯಿಂದ ಹೋಗುತ್ತಿರುವುದನ್ನು ನೋಡಿ ರಾಮ್ ಕೂಡ ಭಯದಿಂದ, ಸೀತಾಳ ಗೆಳತಿ ಪ್ರೀಯಾ ಬಳಿ ವಿಷಯ ಏನೆಂದು ಕೇಳುತ್ತಾನೆ. ಆದರೆ ಅವಳಿಗೂ ಆ ಬಗ್ಗೆ ಗೊತ್ತಿಲ್ಲದ ಕಾರಣ ರಾಮನಿಗೆ ವಿಷಯ ಏನೆಂದು ತಿಳಿಯುವುದಿಲ್ಲ. ಬಳಿಕ ಸೀತಾಳನ್ನು ಹಿಂಬಾಲಿಸಿದ ರಾಮ್ ಅವಳ ಬಳಿ ಚಿಂತೆಗೆ ಕಾರಣ ಏನು? ಎಂದು ಕೇಳುತ್ತಾನೆ. ಆದರೆ ಎಷ್ಟು ಕೇಳಿದರೂ ಅದಕ್ಕೆ ಉತ್ತರಿಸದ ಸೀತಾ, ಸ್ವಲ್ಪ ಕೆಲಸ ಇದೆ ಎಂದು ಹೇಳಿ ಅಲ್ಲಿಂದ ರುದ್ರ ಪ್ರತಾಪನ ಆಫೀಸಿಗೆ ಬರುತ್ತಾಳೆ. ಮುಂದೇನಾಗಬಹುದು ಕಾದು ನೋಡಬೇಕಾಗಿದೆ.

Published On – 10:28 pm, Tue, 8 August 23

ತಾಜಾ ಸುದ್ದಿ

Leave A Reply

Your email address will not be published.