EBM News Kannada
Leading News Portal in Kannada

‘ಸಪ್ತಸಾಗರದಾಚೆ ಎಲ್ಲೊ’ ಸಿನಿಮಾದ ಶೀರ್ಷಿಕೆ ಗೀತೆ ಬಿಡುಗಡೆ: ನದಿಗಾಗಿ ಕಾಯುತ್ತಿರುವ ರಕ್ಷಿತ್ ಶೆಟ್ಟಿ – Kannada News | Rakshit Shetty Starrer Sapta Sagaradache Yello Movie Song Released

0


SSY: ರಕ್ಷಿತ್ ಶೆಟ್ಟಿ ನಟನೆಯ ‘ಸಪ್ತ ಸಾಗರದಾಚೆ ಯೆಲ್ಲೊ’ ಸಿನಿಮಾದ ಶೀರ್ಷಿಕೆ ಗೀತೆ ಇಂದು (ಆಗಸ್ಟ್ 08) ಬಿಡುಗಡೆ ಆಗಿದೆ.

'ಸಪ್ತಸಾಗರದಾಚೆ ಎಲ್ಲೊ' ಸಿನಿಮಾದ ಶೀರ್ಷಿಕೆ ಗೀತೆ ಬಿಡುಗಡೆ: ನದಿಗಾಗಿ ಕಾಯುತ್ತಿರುವ ರಕ್ಷಿತ್ ಶೆಟ್ಟಿ

ಸಪ್ತ ಸಾಗರದಾಚೆ ಎಲ್ಲೊ

ರಕ್ಷಿತ್ ಶೆಟ್ಟಿ (Rakshit Shetty) ನಟನೆಯ ‘ಸಪ್ತ ಸಾಗರದಾಚೆ ಎಲ್ಲೊ‘ (Sapta Sagaradaache Yello) ಸಿನಿಮಾ ಕನ್ನಡದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿದೆ. 100ಕ್ಕೂ ಹೆಚ್ಚು ದಿನಗಳ ಕಾಲ ಈ ಸಿನಿಮಾದ ಶೂಟಿಂಗ್ ನಡೆಸಲಾಗಿತ್ತು, ಹಲವು ಶೇಡ್​ಗಳಲ್ಲಿ ‘ಸಪ್ತ ಸಾಗರದಾಚೆ ಎಲ್ಲೊ’ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ‘ಸಪ್ತ ಸಾಗರದಾಚೆ ಎಲ್ಲೊ’ ಸಿನಿಮಾದ ಟೈಟಲ್ ಸಾಂಗ್ ಇಂದು ಬಿಡುಗಡೆ ಆಗಿದ್ದು, ಹಾಡಿನ ಸಾಹಿತ್ಯದ ಜೊತೆಗೆ ನೀಲಿ ಬಣ್ಣದ ದಾರವೂ ಗಮನ ಸೆಳೆಯುತ್ತಿದೆ.

‘ನದಿಯೇ ನಿನಗಾಗಿ ನಾ ಕಾಯುವೆ’ ಎಂದು ಪ್ರಾರಂಭವಾಗುವ ಈ ಹಾಡು ‘ಸಪ್ತ ಸಾಗರದಾಚೆ ಎಲ್ಲೊ’ ಸಿನಿಮಾದ ಮೊದಲ ಭಾಗದ ಟೈಟಲ್ ಟ್ರ್ಯಾಕ್ ಆಗಿದೆ. ಹಾಡಿಗೆ ವಿಡಿಯೋ ಆಗಿ ಬಳಸಿರುವ ನೀಲಿ ಬಣ್ಣದ ದಾರದುಂಡೆಗಳ ವಿಡಿಯೋ ಹಾಡಿಗೆ ವಿಶೇಷ ಅರ್ಥವನ್ನು ನೀಡುತ್ತಿವೆ. ಜೊತೆಗೆ ಈ ಸಿನಿಮಾ ಭಾವಗಳ ಬಂಧವಾಗಿರಲಿದೆ ಎಂಬುದನ್ನು ಸೂಚ್ಯವಾಗಿ ಹೇಳಿದಂತಿದೆ.

ಈಗ ಬಿಡುಗಡೆ ಆಗಿರುವ ಹಾಡನ್ನು ಕಪಿಲ್ ಕಪಿಲನ್ ಹಾಡಿದ್ದಾರೆ. ಸಾಹಿತ್ಯ ಬರೆದಿರುವುದು ಧನಂಜಯ್ ರಂಜನ್, ಸಂಗೀತ ನೀಡಿರುವುದು ಚರಣ್​ರಾಜ್. ಹಾಡು ರಕ್ಷಿತ್ ಶೆಟ್ಟಿಯವರು ಪರಮವಃ ಯೂಟ್ಯೂಬ್​ ಚಾನೆಲ್​ನಲ್ಲಿ ಬಿಡುಗಡೆ ಆಗಿದೆ. ಬಿಡುಗಡೆ ಆದ ಕೆಲವೇ ಗಂಟೆಗಳಲ್ಲಿ ಹಲವರು ಹಾಡನ್ನು ನೋಡಿದ್ದು ನಿಧಾನಕ್ಕೆ ವೈರಲ್ ಆಗುತ್ತಿದೆ.

‘ಸಪ್ತ ಸಾಗರದಾಚೆ ಎಲ್ಲೊ’ ಸಿನಿಮಾವನ್ನು ಹೇಮಂತ್ ರಾವ್ ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ರಕ್ಷತ್ ಶೆಟ್ಟಿ ಜೊತೆಗೆ ಇಬ್ಬರು ನಾಯಕಿಯರಿದ್ದಾರೆ. ನಟಿ ರುಕ್ಮಿಣಿ ವಸಂತ್ ಹಾಗೂ ಚೈತ್ರಾ ಆಚಾರ್ ಇಬ್ಬರೂ ‘ಸಪ್ತ ಸಾಗರದಾಚೆ ಎಲ್ಲೊ’ ಸಿನಿಮಾದಲ್ಲಿ ನಟಿಸಿದ್ದಾರೆ. ನವಿರಾದ ಪ್ರೇಮಕತೆಯನ್ನು ಈ ಸಿನಿಮಾ ಒಳಗೊಂಡಿದೆ.

80-90 ರ ದಶಕದಲ್ಲಿ ನಡೆಯುವ ಕತೆಯನ್ನು ‘ಸಪ್ತ ಸಾಗರದಾಚೆ ಎಲ್ಲೊ’ ಸಿನಿಮಾ ಒಳಗೊಂಡಿದೆ. ಯುವ ಪ್ರೇಮಿಯೊಬ್ಬ ಅನಿವಾರ್ಯವಾಗಿ ತನ್ನ ಪ್ರೇಮಿಯನ್ನು ಬಿಟ್ಟು ವಿದೇಶಕ್ಕೆ ಉದ್ಯೋಗಕ್ಕೆ ತೆರಳಲೇ ಬೇಕಾದ ಸ್ಥಿತಿ ಬರುತ್ತದೆ ಆ ನಂತರ ಅಲ್ಲಿ ಅವನಿಗೆ ಏನೇನು ಸನ್ನಿವೇಶಗಳು ಎದುರಾಗುತ್ತವೆ, ತನ್ನ ಪ್ರೇಮವನ್ನು ಆ ಯುವಕ ಹೇಗೆ ಉಳಿಸಿಕೊಳ್ಳುತ್ತಾನೆ ಎಂಬಿತ್ಯಾದಿ ಕತೆಯನ್ನು ‘ಸಪ್ತ ಸಾಗರದಾಚೆ ಎಲ್ಲೊ’ ಸಿನಿಮಾ ಒಳಗೊಂಡಿದೆ.

ಸಿನಿಮಾದ ಬಗ್ಗೆ ಬಹಳ ನಿರೀಕ್ಷೆ ಇದೆ. ಸಿನಿಮಾದಲ್ಲಿ ಪೋಸ್ಟರ್ ಹಾಗೂ ಟೀಸರ್​ಗಳು ಈಗಾಗಲೇ ಬಹುವಾಗಿ ಗಮನ ಸೆಳೆದಿವೆ. ನವಿರಾದ ಪ್ರೇಮಕತೆಯನ್ನು ಈ ಸಿನಿಮಾ ಒಳಗೊಂಡಿರುವುದು ಟೀಸರ್ ಹಾಗೂ ಪೋಸ್ಟರ್​ನಿಂದ ತಿಳಿದು ಬರುತ್ತಿದೆ. ಈ ಸಿನಿಮಾ ಎರಡು ಭಾಗಗಳಲ್ಲಿ ಬಿಡುಗಡೆ ಆಗುತ್ತಿದೆ. ಸಿನಿಮಾದ ಮೊದಲ ಭಾಗ ಸೆಪ್ಟೆಂಬರ್ 1 ರಂದು ತೆರೆಗೆ ಬರುತ್ತಿದೆ. ಅದಾದ ಒಂದು ತಿಂಗಳ ಬಳಿಕ ಎರಡನೇ ಭಾಗ ಬಿಡುಗಡೆ ಆಗಲಿದೆ.

ತಾಜಾ ಸುದ್ದಿ

Leave A Reply

Your email address will not be published.