EBM News Kannada
Leading News Portal in Kannada

‘ಸ್ವಾತಿ ಮುತ್ತಿನ ಮಳೆ ಹನಿಯೇ’ ವಿಡಿಯೋ ಹಂಚಿಕೊಂಡ ಆಪಲ್ ಬಾಕ್ಸ್: ಮುನಿಸು ಮರೆತರೇ ರಮ್ಯಾ? – Kannada News | Raj B Sheety’s Swathi Mutthina Male Haniye Movie Behind The Scenes Video Shared By Ramya’s Production Company

0


Ramya-Raj B Shetty: ರಮ್ಯಾ ನಿರ್ಮಾಣ ಮಾಡಿ ರಾಜ್ ಬಿ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾದ ವಿಡಿಯೋ ಒಂದನ್ನು ರಮ್ಯಾರ ಆಪಲ್ ಬಾಕ್ಸ್ ಶೇರ್ ಮಾಡಿದೆ.

'ಸ್ವಾತಿ ಮುತ್ತಿನ ಮಳೆ ಹನಿಯೇ' ವಿಡಿಯೋ ಹಂಚಿಕೊಂಡ ಆಪಲ್ ಬಾಕ್ಸ್: ಮುನಿಸು ಮರೆತರೇ ರಮ್ಯಾ?

ರಾಜ್ ಬಿ ಶೆಟ್ಟಿ-ರಮ್ಯಾ

ರಾಜ್ ಬಿ ಶೆಟ್ಟಿ (Raj B Shetty) ನಟಿಸಿ ನಿರ್ದೇಶನ ಮಾಡಿರುವ ‘ಟೋಬಿ’ ಸಿನಿಮಾ ಆಗಸ್ಟ್ 25ರಂದು ಬಿಡುಗಡೆ ಆಗಲಿದೆ. ಸಿನಿಮಾದ ಪ್ರಚಾರ ಜೋರಾಗಿ ನಡೆದಿದೆ. ಆದರೆ ‘ಟೋಬಿ’ ಸಿನಿಮಾಕ್ಕೆ ಮುನ್ನ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾದ ಚಿತ್ರೀಕರಣವನ್ನು ರಾಜ್ ಬಿ ಶೆಟ್ಟಿ ಮುಗಿಸಿದ್ದರು. ಆದರೆ ಅದರ ನಂತರ ಶುರು ಮಾಡಿದ ‘ಟೋಬಿ’ ಸಿನಿಮಾ ಮೊದಲು ಬಿಡುಗಡೆ ಆಗುತ್ತಿದೆ. ಇದಕ್ಕೆ ರಮ್ಯಾ (Ramya) ಹಾಗೂ ರಾಜ್ ಬಿ ಶೆಟ್ಟಿ ನಡುವಿನ ಭಿನ್ನಾಭಿಪ್ರಾಯವೇ ಕಾರಣ ಎಂಬ ಮಾತುಗಳು ಕೇಳಿ ಬಂದಿದ್ದವು. ಇದೀಗ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾದ ಅಪ್​ಡೇಟ್ ಒಂದನ್ನು ರಮ್ಯಾರ ನಿರ್ಮಾಣ ಸಂಸ್ಥೆ ಹಂಚಿಕೊಂಡಿದೆ.

ಹಲವು ವರ್ಷಗಳ ಬಳಿಕ ಚಿತ್ರರಂಗಕ್ಕೆ ಮರಳಿರುವ ನಟಿ ರಮ್ಯಾ, ಆಪಲ್ ಬಾಕ್ಸ್ ಹೆಸರಿನ ನಿರ್ಮಾಣ ಸಂಸ್ಥೆ ಮೂಲಕ ಚಿತ್ರನಿರ್ಮಾಣಕ್ಕೆ ಇಳಿದಿದ್ದಾರೆ. ತಮ್ಮ ನಿರ್ಮಾಣ ಸಂಸ್ಥೆಯ ಮೊದಲ ಸಿನಿಮಾಕ್ಕೆ ರಾಜ ಬಿ ಶೆಟ್ಟಿಯನ್ನು ನಾಯಕ ಹಾಗೂ ನಿರ್ದೇಶಕನನ್ನಾಗಿ ಆಯ್ಕೆ ಮಾಡಿದ್ದರು ರಮ್ಯಾ. ಅಂತೆಯೇ ರಾಜ್ ಬಿ ಶೆಟ್ಟಿ ಸಹ ಸಿನಿಮಾವನ್ನು ಮುಗಿಸಿಕೊಟ್ಟಿದ್ದಾರೆ.

ಇದೀಗ ಆಪಲ್ ಬಾಕ್ಸ್ ಸೋಷಿಯಲ್ ಮೀಡಿಯಾ ಮೂಲಕ ‘ಸ್ವಾಮಿ ಮುತ್ತಿನ ಮಳೆ ಹನಿಯೇ’ ಸಿನಿಮಾ ಚಿತ್ರೀಕರಣದ ಬಿಹೈಂಡ್ ದಿ ಸೀನ್ಸ್ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ನಿರ್ದೇಶಕ ರಾಜ್ ಬಿ ಶೆಟ್ಟಿ ಇನ್ನಿತರೆ ನಟ ಹಾಗೂ ತಂತ್ರಜ್ಞರು ಸಿನಿಮಾಕ್ಕಾಗಿ ಪಟ್ಟ ಕಷ್ಟವನ್ನು ವಿಡಿಯೋನಲ್ಲಿ ತೋರಿಸಲಾಗಿದೆ. ಆದರೆ ನಾಯಕಿಯನ್ನು ಮಾತ್ರ ಸರಿಯಾಗಿ ತೋರಿಸದೆ ಕುತೂಹಲ ಕಾಯ್ದುಕೊಳ್ಳಲಾಗಿದೆ.

‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾವು ಪ್ರೇಮಕತೆಯಾಗಿದ್ದು ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿ ಎದುರು ನಾಯಕಿಯಾಗಿ ಸಿರಿ ನಟಿಸಿದ್ದಾರೆ. ಅಸಲಿಗೆ ರಮ್ಯಾ ಅವರೇ ಈ ಸಿನಿಮಾದ ನಾಯಕಿ ಆಗಬೇಕಿತ್ತು. ಆದರೆ ಅದು ಸಾಧ್ಯವಾಗಲಿಲ್ಲ ಆದರೆ ಈ ಸಿನಿಮಾವನ್ನು ರಮ್ಯಾ ಅವರೇ ನಿರ್ಮಾಣ ಮಾಡಿದ್ದಾರೆ.

ಆದರೆ ರಾಜ್ ಬಿ ಶೆಟ್ಟಿ ಹಾಗೂ ನಿರ್ಮಾಪಕಿ ರಮ್ಯಾ ನಡುವೆ ಮನಸ್ಥಾಪ ಏರ್ಪಟ್ಟ ಕಾರಣ ಸಿನಿಮಾ ಬಿಡುಗಡೆ ತಡವಾಗುತ್ತಿದೆ ಎನ್ನಲಾಗುತ್ತಿದೆ. ಇಬ್ಬರಿಗೂ ಮನಸ್ಥಾಪ ಏರ್ಪಟ್ಟಿರುವುದು ಬಹುತೇಕ ಖಾತ್ರಿಯಾಗಿದೆ. ರಾಜ್ ಬಿ ಶೆಟ್ಟಿ ಸಹ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾದ ಬಗ್ಗೆ ಅನ್ಯಮನಸ್ಕರಾಗಿ ಮಾತನಾಡುತ್ತಿದ್ದಾರೆ. ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾದ ವಿರುದ್ಧ ರಮ್ಯಾ ಪ್ರಕರಣ ದಾಖಲಿಸಿದಾಗಲೂ ರಾಜ್ ಬಿ ಶೆಟ್ಟಿ ‘ಹಾಸ್ಟೆಲ್ ಹುಡುಗರ’ ಪರವಾಗಿ, ರಮ್ಯಾಗೆ ಟಾಂಗ್​​ ನೀಡುವ ರೀತಿಯಲ್ಲಿಯೇ ಪೋಸ್ಟ್ ಹಂಚಿಕೊಂಡಿದ್ದರು.

ಆದರೆ ಕೊನೆಗೂ ಈಗ ಆಪಲ್​ ಬಾಕ್ಸ್ ಕಡೆಯಿಂದ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾದ ವಿಡಿಯೋ ಒಂದು ಬಿಡುಗಡೆ ಮಾಡಿದೆ. ಅಲ್ಲಿದೆ ನಿರ್ಮಾಣ ಸಂಸ್ಥೆ ತಮ್ಮ ಸಿನಿಮಾವನ್ನು ಮರೆತಿಲ್ಲ ಎಂಬುದಂತೂ ಖಾತ್ರಿಯಾಗಿದೆ. ಆದರೆ ಸಿನಿಮಾದ ಬಿಡುಗಡೆ ದಿನಾಂಕವನ್ನಾಗಲಿ, ಟೀಸರ್, ಟ್ರೈಲರ್ ಬಿಡುಗಡೆ ದಿನಾಂಕಗಳನ್ನಾಗಲಿ ಘೋಷಿಸಲಾಗಿಲ್ಲ.

ತಾಜಾ ಸುದ್ದಿ

Leave A Reply

Your email address will not be published.