‘ದೇಹದ ತೂಕ ಮತ್ತು ಹೃದಯಾಘಾತದ ಬಗ್ಗೆ ಚರ್ಚೆ ಮಾಡೋಕೆ ಆಗಲ್ಲ’: ಸ್ಪಂದನಾ ನಿಧನಕ್ಕೆ ಸೃಜನ್ ಲೋಕೇಶ್ ಪ್ರತಿಕ್ರಿಯೆ – Kannada News | Spandana Vijay Raghavendra Heart Attack: Srujan Lokesh express his opinion about weight loss
ದೇಹದ ತೂಕ ಮತ್ತು ಹೃದಯಾಘಾತದ (Heart Attack) ನಡುವೆ ಸಂಬಂಧ ಇದೆಯೇ ಎಂಬ ಚರ್ಚೆ ಯಾವಾಗಲೂ ನಡೆಯುವಂಥದ್ದು. ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ (Spandana Vijay Raghavendra) ನಿಧನದ ಬಳಿಕ ಮತ್ತೆ ಅದೇ ಚರ್ಚೆ ಜೋರಾಗಿದೆ. ಸ್ಪಂದನಾ ಅವರು ದೇಹದ ತೂಕ ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸಿದ್ದರು ಎಂಬ ಅಂತೆ-ಕಂತೆಗಳು ಕೇಳಿಬಂದಿವೆ. ಈ ಬಗ್ಗೆ ನಟ, ನಿರೂಪಕ ಸೃಜನ್ ಲೋಕೇಶ್ (Srujan Lokesh) ಅವರು ಮಾತನಾಡಿದ್ದಾರೆ. ‘ದೇಹದ ತೂಕಕ್ಕೂ ಹೃದಯಾಘಾತಕ್ಕೂ ಸಂಬಂಧ ಇದೆ ಎಂಬ ಚರ್ಚೆ ಬಗ್ಗೆ ನನಗೆ ಆಕ್ಷೇಪ ಇದೆ. ಆರೋಗ್ಯಕರವಾಗಿ ಇರಬೇಕಾಗಿದ್ದು ಅಗತ್ಯ. ಅದು ಜೀವನ ಶೈಲಿ. ಫಿಟ್ನೆಸ್ ಇಲ್ಲದಿದ್ದರೆ ನಾವು ಆ್ಯಕ್ಟೀವ್ ಆಗಿರಲು ಸಾಧ್ಯವಿಲ್ಲ. ಅದರಿಂದಲೇ ನಿಧನರಾದರು ಅಂತ ಚರ್ಚೆ ಮಾಡೋಕೆ ಆಗಲ್ಲ. ಅಷ್ಟು ಫಿಟ್ ಆಗಿದ್ದ ಪುನೀತ್ ರಾಜ್ಕುಮಾರ್ ಅವರಿಗೆ ಯಾಕೆ ಹೀಗಾಯಿತು. ಏನೂ ಮಾಡದೇ ಇರುವವರ 90 ವರ್ಷ ಬದುಕುತ್ತಾರಲ್ಲ ಅದು ಹೇಗೆ? ಈ ವಿಚಾರಗಳ ಬಗ್ಗೆ ಈಗ ಅಂತಿಮ ನಿರ್ಧಾರಕ್ಕೆ ಬರೋದು ಸರಿಯಲ್ಲ ಅಂತ ನನಗೆ ಅನಿಸುತ್ತದೆ’ ಎಂದು ಸೃಜನ್ ಲೋಕೇಶ್ ಹೇಳಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.