‘ಜೈಲರ್’ ಬಿಡುಗಡೆ ಪ್ರಯುಕ್ತ ಆ.10ರಂದು ರಜೆ ಘೋಷಿಸಿದ ಖಾಸಗಿ ಕಂಪನಿಗಳು; ಅಬ್ಬಬ್ಬಾ ಇದು ರಜನಿಕಾಂತ್ ಹವಾ – Kannada News | Private company in Chennai and Bengaluru declares holiday on 10th August due to Jailer movie release
Jailer Movie: ಬಹುದಿನಗಳ ಬಳಿಕ ರಜನಿಕಾಂತ್ ಅವರು ದೊಡ್ಡ ಪರದೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಆ ಕಾರಣದಿಂದ ‘ಜೈಲರ್’ ಸಿನಿಮಾ ಮೇಲೆ ನಿರೀಕ್ಷೆ ಜೋರಾಗಿದೆ. ಈ ಚಿತ್ರದ ರಿಲೀಸ್ ಪ್ರಯುಕ್ತ ಕೆಲವು ಖಾಸಗಿ ಕಂಪನಿಗಳು ರಜೆ ಘೋಷಿಸಿವೆ.
ರಜನಿಕಾಂತ್
ನಟ ರಜನಿಕಾಂತ್ (Rajinikanth) ಅವರಿಗೆ ಇರುವ ಅಭಿಮಾನಿ ಬಳಗದ ಬಗ್ಗೆ ಹೊಸದಾಗಿ ಹೇಳಬೇಕಾಗಿದ್ದಿಲ್ಲ. ಬಾಲಕರಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ರಜನಿಕಾಂತ್ ನಟನೆಯ ಸಿನಿಮಾಗಳನ್ನು ಇಷ್ಟಪಡುತ್ತಾರೆ. ಅವರ ಪ್ರತಿ ಸಿನಿಮಾಗಳು ಬಿಡುಗಡೆ ಆದಾಗಲೂ ಹಬ್ಬದ ವಾತಾವರಣ ನಿರ್ಮಾಣ ಆಗುತ್ತದೆ. ಹಬ್ಬ ಎಂದಮೇಲೆ ರಜೆ ಇಲ್ಲದಿದ್ದರೆ ಹೇಗೆ? ಖಂಡಿತ ಇರಲೇಬೇಕು. ಆಗಸ್ಟ್ 10ರಂದು ರಜನಿಕಾಂತ್ ನಟನೆಯ ‘ಜೈಲರ್’ ಸಿನಿಮಾ (Jailer Movie) ಬಿಡುಗಡೆ ಆಗುತ್ತಿದೆ. ಈ ಪ್ರಯುಕ್ತ ಕೆಲವು ಖಾಸಗಿ ಕಂಪನಿಗಳು ರಜೆ ಘೋಷಣೆ ಮಾಡಿವೆ. ರಜನಿಕಾಂತ್ ಅವರ ಸಿನಿಮಾಗಳಿಂದ ಮಾತ್ರ ಈ ರೀತಿ ಹವಾ ಸೃಷ್ಟಿಸಲು ಸಾಧ್ಯ ಎಂದು ಫ್ಯಾನ್ಸ್ ಹಿರಿಹಿರಿ ಹಿಗ್ಗುತ್ತಿದ್ದಾರೆ. ಬಹುನಿರೀಕ್ಷಿತ ‘ಜೈಲರ್’ ಸಿನಿಮಾದಲ್ಲಿ ಶಿವರಾಜ್ಕುಮಾರ್ (Shivarajkumar) ಕೂಡ ನಟಿಸಿದ್ದಾರೆ. ಹಾಗಾಗಿ ಕರ್ನಾಟಕದಲ್ಲೂ ಈ ಸಿನಿಮಾದ ಬಗ್ಗೆ ಹೈಪ್ ಹೆಚ್ಚಿದೆ.
ಖಾಸಗಿ ಕಂಪನಿಯೊಂದು ತನ್ನ ಉದ್ಯೋಗಿಗಳಿಗೆ ರಜೆ ನೀಡಿರುವ ಆದೇಶ ಪತ್ರದ ಫೋಟೋ ವೈರಲ್ ಆಗಿದೆ. ‘ಆಗಸ್ಟ್ 10ರಂದು ರಜನಿಕಾಂತ್ ಅಭಿನಯದ ಜೈಲರ್ ಸಿನಿಮಾ ಬಿಡುಗಡೆ ಪ್ರಯುಕ್ತ ನಾವು ರಜೆ ಘೋಷಿಸಿದ್ದೇವೆ. ಉಚಿತ ಟಿಕೆಟ್ ಕೂಡ ನೀಡುತ್ತಿದ್ದೇವೆ. ನಮ್ಮ ತಾತನ ಕಾಲಕ್ಕೆ, ತಂದೆಯ ಕಾಲಕ್ಕೆ, ನಮ್ಮ ಕಾಲಕ್ಕೆ, ನಮ್ಮ ಮಕ್ಕಳ ಮತ್ತು ಮೊಮ್ಮಕ್ಕಳ ಕಾಲಕ್ಕೆ ಒಬ್ಬರೇ ಸೂಪರ್ ಸ್ಟಾರ್’ ಎಂದು ಬರೆದಿರುವ ನೋಟೀಸ್ ವೈರಲ್ ಆಗಿದೆ. ಈ ಕಂಪನಿಯ ಚೆನೈ, ಬೆಂಗಳೂರು ಮುಂತಾದ ಪ್ರದೇಶಗಳ ಶಾಖೆಗಳಿಗೂ ರಜೆ ಅನ್ವಯ ಆಗುತ್ತದೆ ಎಂದು ಈ ನೋಟೀಸ್ನಲ್ಲಿ ತಿಳಿಸಲಾಗಿದೆ.
Offices started announcing holiday for #Jailer release 😎🥳
The #SuperstarRajinikanth phenomenon and the only actor in the world who can bring the country to standstill🥳❤️😍#Rajinikanth#Thalaivar170#JailerFromAug10 #JailerAudioLaunch #JailerShowcase #Kaavaalaa #Thalaivar pic.twitter.com/BMLztdAiRO
— Achilles (@Searching4ligh1) August 4, 2023
ಬಹುದಿನಗಳ ಬಳಿಕ ರಜನಿಕಾಂತ್ ಅವರು ದೊಡ್ಡ ಪರದೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಅವರು ನಟಿಸಿದ ‘ಅಣ್ಣಾತೆ’ ಸಿನಿಮಾ 2021ರ ನವೆಂಬರ್ನಲ್ಲಿ ತೆರೆಕಂಡಿತ್ತು. ಆ ಬಳಿಕ ಬಿಡುಗಡೆ ಆಗುತ್ತಿರುವ ಚಿತ್ರವೇ ‘ಜೈಲರ್’. ಹಾಗಾಗಿ ನಿರೀಕ್ಷೆ ಜೋರಾಗಿದೆ. ಈ ಸಿನಿಮಾದ ‘ಕಾವಾಲಾ..’ ಹಾಡು ಈಗಾಗಲೇ ಸೂಪರ್ ಹಿಟ್ ಆಗಿದೆ. ಈ ಹಾಡಿನಲ್ಲಿ ರಜನಿಕಾಂತ್ ಜೊತೆ ತಮನ್ನಾ ಭಾಟಿಯಾ ಅವರು ಬಿಂದಾಸ್ ಆಗಿ ಕುಣಿಸಿದ್ದಾರೆ. ಯೂಟ್ಯೂಬ್ನಲ್ಲಿ ಈ ಹಾಡು ಕೋಟ್ಯಂತರ ಬಾರಿ ವೀಕ್ಷಣೆ ಕಂಡಿದೆ.
ನೆಲ್ಸನ್ ಅವರು ‘ಜೈಲರ್’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಸನ್ ಪಿಕ್ಚರ್ಸ್ ಮೂಲಕ ಅದ್ದೂರಿಯಾಗಿ ಈ ಸಿನಿಮಾ ನಿರ್ಮಾಣ ಆಗಿದೆ. ಅನಿರುದ್ಧ್ ರವಿಚಂದರ್ ಅವರು ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ. ರಮ್ಯಾ ಕೃಷ್ಣನ್, ಜಾಕಿ ಶ್ರಾಫ್, ಮೋಹನ್ಲಾಲ್, ಶಿವರಾಜ್ಕುಮಾರ್ ಮುಂತಾದ ಘಟಾನುಘಟಿಗಳು ಈ ಚಿತ್ರದಲ್ಲಿ ನಟಿಸಿರುವುದರಿಂದ ಸಹಜವಾಗಿಯೇ ನಿರೀಕ್ಷೆ ಹೆಚ್ಚಿದೆ. ಈಗಾಗಲೇ ಬುಕಿಂಗ್ ಓಪನ್ ಆಗಿದ್ದು, ಅನೇಕ ಶೋಗಳ ಟಿಕೆಟ್ಗಳು ಸೋಲ್ಡ್ ಔಟ್ ಆಗಿವೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.