EBM News Kannada
Leading News Portal in Kannada

ಆ ಒಂದು ವಿಚಾರದಲ್ಲಿ ನಿರ್ಧಾರ ತೆಗೆದುಕೊಳ್ಳಲು ಆಗದೇ ಒದ್ದಾಡುತ್ತಿದ್ದಾರೆ ‘ಪುಷ್ಪ 2’ ನಿರ್ದೇಶಕ ಸುಕುಮಾರ್ – Kannada News | Pushpa 2 Movie Director Sukumar Worried about His upcoming Movie special song

0


‘ಪುಷ್ಪ 2’ ವಿಚಾರದಲ್ಲಿ ಎಲ್ಲವೂ ಅಂದುಕೊಂಡಂತೆ ನಡೆಯುತ್ತಿಲ್ಲ ಎನ್ನಲಾಗಿದೆ. ‘ಪುಷ್ಪ’ ರಿಲೀಸ್ ಆದ ಬೆನ್ನಲ್ಲೇ ‘ಪುಷ್ಪ 2’ ಚಿತ್ರದ ಕೆಲಸ ಆರಂಭ ಆಗಬೇಕಿತ್ತು. ಆದರೆ, ಸ್ಕ್ರಿಪ್ಟ್​ನಲ್ಲಿ ಬದಲಾವಣೆ ಮಾಡಿಕೊಂಡಿದ್ದರಿಂದ ಶೂಟಿಂಗ್ ಆರಂಭ ಒಂದು ವರ್ಷ ತಡವಾಯಿತು.

ಆ ಒಂದು ವಿಚಾರದಲ್ಲಿ ನಿರ್ಧಾರ ತೆಗೆದುಕೊಳ್ಳಲು ಆಗದೇ ಒದ್ದಾಡುತ್ತಿದ್ದಾರೆ ‘ಪುಷ್ಪ 2’ ನಿರ್ದೇಶಕ ಸುಕುಮಾರ್

ಸುಕುಮಾರ್-ಅಲ್ಲು ಅರ್ಜುನ್

‘ಪುಷ್ಪ’ ಚಿತ್ರ (Pushpa Movie) ಮಾಡಿದ ಸಾಧನೆ ತುಂಬಾನೇ ದೊಡ್ಡದು. ದೇಶಾದ್ಯಂತ ಈ ಸಿನಿಮಾ 300+ ಕೋಟಿ ರೂಪಾಯಿ ಗಳಿಕೆ ಮಾಡಿ ಬೀಗಿತ್ತು. ದೇಶಾದ್ಯಂತ ಈ ಸಿನಿಮಾ ಸೃಷ್ಟಿಸಿದ ಸಂಚಲನ ಸಾಮಾನ್ಯದ್ದಲ್ಲ. ಈ ಚಿತ್ರಕ್ಕೆ ಸೀಕ್ವೆಲ್ ತಯಾರಾಗುತ್ತಿದೆ. ‘ಪುಷ್ಪ’ ಚಿತ್ರಕ್ಕೆ ನಿರೀಕ್ಷೆಗೂ ಮೀರಿದ ಯಶಸ್ಸು ಸಿಕ್ಕಿರುವುದರಿಂದ ‘ಪುಷ್ಪ 2’ ಮೇಲೆ ಭಾರೀ ನಿರೀಕ್ಷೆ ಸೃಷ್ಟಿ ಆಗಿದೆ. ಇದರ ಜೊತೆಗೆ ಸೀಕ್ವೆಲ್ ಬಗ್ಗೆ ಊಹಾಪೋಹಗಳು ಹೆಚ್ಚಿವೆ. ಸದ್ಯ ಸಿನಿಮಾದ ಕೆಲಸಗಳು ಆಮೆ ವೇಗದಲ್ಲಿ ಸಾಗುತ್ತಿವೆ. ಇದರ ಜೊತೆ ಒಂದು ಅಚ್ಚರಿಯ ವಿಚಾರ ಕೇಳಿ ಬಂದಿದೆ. ಸುಕುಮಾರ್ (Sukumar) ಅವರಿಗೆ ಆ ಒಂದು ವಿಚಾರದಲ್ಲಿ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲವಂತೆ.

‘ಪುಷ್ಪ 2’ ವಿಚಾರದಲ್ಲಿ ಎಲ್ಲವೂ ಅಂದುಕೊಂಡಂತೆ ನಡೆಯುತ್ತಿಲ್ಲ ಎನ್ನಲಾಗಿದೆ. ‘ಪುಷ್ಪ’ ರಿಲೀಸ್ ಆದ ಬೆನ್ನಲ್ಲೇ ‘ಪುಷ್ಪ 2’ ಚಿತ್ರದ ಕೆಲಸ ಆರಂಭ ಆಗಬೇಕಿತ್ತು. ಆದರೆ, ಸ್ಕ್ರಿಪ್ಟ್​ನಲ್ಲಿ ಬದಲಾವಣೆ ಮಾಡಿಕೊಂಡಿದ್ದರಿಂದ ಶೂಟಿಂಗ್ ಆರಂಭ ಒಂದು ವರ್ಷ ತಡವಾಯಿತು. ನಂತರ ಹಲವು ಕಾರಣದಿಂದ ಸಿನಿಮಾ ಕೆಲಸಗಳು ವಿಳಂಬ ಆಗುತ್ತಿವೆ. ಶೂಟಿಂಗ್ ಸ್ವಲ್ಪ ತಡವಾದರೂ ತೊಂದರೆ ಇಲ್ಲ ಸಿನಿಮಾ ಅಚ್ಚುಕಟ್ಟಾಗಿ ಮೂಡಿಬರಬೇಕು ಎಂಬುದು ಸುಕುಮಾರ್ ಲೆಕ್ಕಾಚಾರ. ಈ ಮಧ್ಯೆ ಸುಕುಮಾರ್ ಅವರು ಕೆಲವು ದಿನಗಳಿಂದ ಚಿಂತೆಗೀಡಾಗಿದ್ದ ಒಂದು ವಿಷಯವಿದೆ. ಅದುವೇ ಸ್ಪೆಷಲ್ ಸಾಂಗ್.

ಸುಕುಮಾರ್ ಅವರಿಗೆ ವಿಶೇಷ ಹಾಡುಗಳ ಬಗ್ಗೆ ಎಲ್ಲಿಲ್ಲದ ಪ್ರೀತಿ. ಅವರು ಪ್ರತಿ ಚಿತ್ರದಲ್ಲಿ ಸ್ಪೆಷಲ್ ಸಾಂಗ್ ಇಡುತ್ತಾರೆ. ಅವರು ಮಾಡಿರುವ ಬಹುತೇಕ ಸಿನಿಮಾಗಳಲ್ಲಿ ಐಟಂ ಸಾಂಗ್ ಇದೆ. ‘ಪುಷ್ಪ’ ಸಿನಿಮಾದಲ್ಲಿ ಸಮಂತಾ ಅವರು ‘ಹೂ ಅಂತೀಯಾ ಮಾವ..’ ಹಾಡಿಗೆ ಸಖತ್ ಆಗಿ ಹೆಜ್ಜೆ ಹಾಕಿದ್ದರು. ಈಗ ‘ಪುಷ್ಪ 2’ ಚಿತ್ರದಲ್ಲಿ ವಿಶೇಷ ಹಾಡನ್ನು ಇಡಲು ಸುಕುಮಾರ್ ಪ್ಲ್ಯಾನ್ ಮಾಡಿಕೊಂಡಿದ್ದಾರೆ.  ‘ಪುಷ್ಪ’ ಚಿತ್ರದಲ್ಲಿನ ಸಮಂತಾ ಹಾಕಿದ ಸ್ಟೆಪ್ಸ್ ಸಖತ್ ಆಗಿತ್ತು. ಅವರ ಎನರ್ಜಿಗೆ ಸರಿಸಾಟಿಯಾಗಿ ಹೆಜ್ಜೆ ಹಾಕುವ ಮತ್ತೊಂದು ನಟಿಯನ್ನು ಹುಡುಕುವ ಸವಾಲು ಸುಕುಮಾರ್​ಗೆ ಇದೆ. ‘ಪುಷ್ಪ 2’ ಚಿತ್ರದಲ್ಲಿ ಹೆಜ್ಜೆ ಹಾಕಲು ಸಮಂತಾಗೆ ಚಾನ್ಸ್ ನೀಡಲಾಗಿತ್ತು. ಆದರೆ, ಅವರು ಇದನ್ನು ಒಪ್ಪಿಲ್ಲ. ಕನ್ನಡತಿ ಶ್ರೀಲೀಲಾಗೂ ಚಾನ್ಸ್ ಸಿಕ್ಕಿತ್ತು. ಆದರೆ, ಅವರು ಈ ಆಫರ್​ನ ತಿರಸ್ಕರಿಸಿದ್ದಾರೆ ಎನ್ನಲಾಗುತ್ತಿದೆ. ಚಿತ್ರರಂಗದಲ್ಲಿ ಉತ್ತುಂಗದಲ್ಲಿರುವಾಗ ವಿಶೇಷ ಹಾಡಿಗೆ ಹೆಜ್ಜೆ ಹಾಕೋದು ಬೇಡ ಅನ್ನೋದು ಅವರ ನಿರ್ಧಾರ.

ತಮನ್ನಾ ಅವರು ಸಖತ್ ಆಗಿ ಡ್ಯಾನ್ಸ್ ಮಾಡುತ್ತಾರೆ. ಆ ಆಯ್ಕೆಯೂ ಸುಕುಮಾರ್ ಬಳಿ ಇದೆ. ಆದರೆ, ಅವರು ಈಗಾಗಲೇ ಹಲವು ಸ್ಪೆಷಲ್ ಸಾಂಗ್​​ಗೆ ಹೆಜ್ಜೆ ಹಾಕಿದ್ದಾರೆ. ‘ಕಾವಾಲಾ..’ ಹಾಡು ಇತ್ತೀಚೆಗೆ ರಿಲೀಸ್ ಆಗಿ ಸೂಪರ್ ಹಿಟ್ ಆಗಿದೆ. ಈ ಕಾರಣದಿಂದ ಮತ್ತೆ ಅವರಿಗೆ ಚಾನ್ಸ್ ನೀಡಿದರೆ ಜನರು ಇದನ್ನು ಮೆಚ್ಚಿಕೊಳ್ಳದೇ ಇರಬಹುದು ಎನ್ನುವ ಭಯ ಸುಕುಮಾರ್​ಗೆ ಕಾಡಿದೆ.

‘ಪುಷ್ಪ 2’ ಚಿತ್ರದ ಬಗ್ಗೆ ಅಪ್​ಡೇಟ್​ ಸಿಕ್ಕಿಲ್ಲ ಎಂದು ಅಲ್ಲು ಅರ್ಜುನ್ ಫ್ಯಾನ್ಸ್ ಅಪ್ಸೆಟ್ ಆಗಿದ್ದಾರೆ. ಈ ಸಿನಿಮಾದ ಶೇ. 35ರಷ್ಟು ಶೂಟಿಂಗ್ ಮಾತ್ರ ಆಗಿದೆ ಎಂಬ ವಿಚಾರ ಅಭಿಮಾನಿಗಳ ಚಿಂತೆಗೆ ಕಾರಣ ಆಗಿದೆ. ಸೀಕ್ವೆಲ್​ಗೆ ಇರುವ ಕ್ರೇಜ್ ದೂರವಾಗಬಹುದು ಎನ್ನುವ ಭಯ ಅಭಿಮಾನಿಗಳಲ್ಲಿದೆ. ಅಲ್ಲು ಅರ್ಜುನ್​ಗೆ ಜೊತೆಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಫಹಾದ್ ಫಾಸಿಲ್ ಮೊದಲಾದ ಸ್ಟಾರ್​ಗಳು ಚಿತ್ರದಲ್ಲಿ ನಟಿಸಿದ್ದಾರೆ. ಮೈತ್ರಿ ಮೂವೀ ಮೇಕರ್ಸ್ ಚಿತ್ರವನ್ನು ನಿರ್ಮಿಸುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ತಾಜಾ ಸುದ್ದಿ

Leave A Reply

Your email address will not be published.