ಮಹೇಶ್ ಬಾಬು ಬರ್ತ್ಡೇ ದಿನ ಅಭಿಮಾನಿಗಳಿಗೆ ಸಿಗಲಿದೆ ಬರೀ ನಿರಾಸೆ – Kannada News | Mahesh Babu Birthday Bad News For Mahesh Babu Fans No Song Will be release on superstar Birthday
Mahesh Babu Birthday: ಈವರೆಗೆ ‘ಗುಂಟೂರು ಖಾರಂ’ ಸಿನಿಮಾದ ಒಂದೆರಡು ಪೋಸ್ಟರ್ ರಿಲೀಸ್ ಆಗಿದ್ದು, ಟೈಟಲ್ ಅನಾವರಣ ಆಗಿದ್ದು ಹೊರತುಪಡಿಸಿದರೆ ಸಿನಿಮಾ ತಂಡದಿಂದ ದೊಡ್ಡ ಅಪ್ಡೇಟ್ ಎಂದು ಯಾವುದೂ ಸಿಕ್ಕಿಲ್ಲ.
ಮಹೇಶ್ ಬಾಬು
ಮಹೇಶ್ ಬಾಬು (Mahesh Babu) ಅವರಿಗೆ ಬುಧವಾರ (ಆಗಸ್ಟ್ 9) ಬರ್ತ್ಡೇ. ಈಗಾಗಲೇ ಅಭಿಮಾನಿಗಳ ವಲಯದಲ್ಲಿ ಇದಕ್ಕೆ ಸಿದ್ಧತೆ ನಡೆದಿದೆ. ಅದ್ದೂರಿಯಾಗಿ ನಟನ ಬರ್ತ್ಡೇ ಸೆಲೆಬ್ರೇಷನ್ ಮಾಡಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಮತ್ತೊಂದು ಕಡೆ ಕೆಲವು ಸಾಮಾಜಿಕ ಕೆಲಸಗಳು ಕೂಡ ಆಗಲಿವೆ. ಹೀಗಿರುವಾಗಲೇ ಮಹೇಶ್ ಬಾಬು ಅಭಿಮಾನಿಗಳಿಗೆ ಬರ್ತ್ಡೇ ದಿನ ನಿರಾಸೆ ಆಗುವ ಸಾಧ್ಯತೆ ಇದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಒಂದು ಹರಿದಾಡಿದೆ. ಈ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ.
ಮಹೇಶ್ ಬಾಬು ಅವರು ತ್ರಿವಿಕ್ರಂ ಶ್ರೀನಿವಾಸ್ ನಿರ್ದೇಶನದ ‘ಗುಂಟೂರು ಖಾರಂ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಕಳೆದ ವರ್ಷದ ಆರಂಭದಲ್ಲಿ ಮಹೇಶ್ ಬಾಬು ನಟನೆಯ ‘ಸರ್ಕಾರು ವಾರಿ ಪಾಟ’ ಸಿನಿಮಾ ರಿಲೀಸ್ ಆಯಿತು. ಅದಾದ ಬಳಿಕ ಒಪ್ಪಿಕೊಂಡ ಸಿನಿಮಾ ಇದು. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಸಿನಿಮಾ ಈಗಾಗಲೇ ರಿಲೀಸ್ ಆಗಬೇಕಿತ್ತು. ಆದರೆ, ವಿಳಂಬ ಆಗುತ್ತಲೇ ಬಂತು. ಇದು ಮಹೇಶ್ ಬಾಬು ಅಭಿಮಾನಿಗಳಿಗೆ ಬೇಸರ ತಂದಿದೆ. ಒಂದೆರಡು ಪೋಸ್ಟರ್ ರಿಲೀಸ್ ಆಗಿದ್ದು, ಟೈಟಲ್ ಅನಾವರಣ ಆಗಿದ್ದು ಹೊರತುಪಡಿಸಿದರೆ ಸಿನಿಮಾ ತಂಡದಿಂದ ದೊಡ್ಡ ಅಪ್ಡೇಟ್ ಎಂದು ಯಾವುದೂ ಸಿಕ್ಕಿಲ್ಲ.
ಮಹೇಶ್ ಬಾಬು ಅವರು ಜನ್ಮದಿನಕ್ಕೆ ಚಿತ್ರತಂಡದಿಂದ ಸಾಂಗ್ ರಿಲೀಸ್ ಆಗಲಿದೆ ಎನ್ನುವ ಮಾಹಿತಿ ಹರಿದಾಡಿತ್ತು. ಆದರೆ, ಅದು ಸುಳ್ಳು. ಮಹೇಶ್ ಬಾಬು ಬರ್ತ್ಡೇಗೆ ರಿಲೀಸ್ ಆಗೋದು ಕೇವಲ ಒಂದು ಪೋಸ್ಟರ್ ಮಾತ್ರ. ಈ ವಿಚಾರ ಕೇಳಿ ಅಭಿಮಾನಿಗಳಿಗೆ ನಿರಾಸೆ ಆಗಿದೆ. ಈ ಚಿತ್ರಕ್ಕೆ ತಮನ್ ಅವರು ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಅವರ ಸಂಯೋಜನೆ ಮಹೇಶ್ ಬಾಬುಗೆ ಇಷ್ಟವಾಗುತ್ತಿಲ್ಲ. ಈವರೆಗೆ ಮಹೇಶ್ ಬಾಬು ಟ್ಯೂನ್ ಕೂಡ ಫೈನಲ್ ಮಾಡಿಲ್ಲ ಎಂದು ತಿಳಿದು ಬಂದಿದೆ.
ಮಹೇಶ್ ಬಾಬು ಹಾಗೂ ತಮನ್ ಮಧ್ಯೆ ಯಾವುದೂ ಸರಿ ಇಲ್ಲ ಎಂದು ಈ ಮೊದಲಿನಿಂದಲೂ ಕೇಳಿ ಬರುತ್ತಲೇ ಇದೆ. ಹೀಗಿರುವಾಗ ಸಾಂಗ್ ರಿಲೀಸ್ ಆಗಲು ಹೇಗೆ ಸಾಧ್ಯ ಎಂಬುದು ಅನೇಕರ ಪ್ರಶ್ನೆ. ‘ಸರ್ಕಾರು ವಾರಿ ಪಾಟ’ ಸಿನಿಮಾದ ‘ಮಾ ಮಾ ಮಹೇಶ್..’ ಹಾಡು ಸೂಪರ್ ಹಿಟ್ ಆಯಿತು. ಈ ರೀತಿಯ ಟ್ಯೂನ್ನ ತಮನ್ ಅವರಿಂದ ಮಹೇಶ್ ಬಾಬು ನಿರೀಕ್ಷಿಸುತ್ತಿದ್ದಾರೆ. ಆದರೆ, ಈ ನಿರೀಕ್ಷೆಯ ಮಟ್ಟ ತಲುಪಲು ತಮನ್ಗೆ ಸಾಧ್ಯವಾಗುತ್ತಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ