ದೇಹದ ತೂಕ ಇಳಿಸಿಕೊಳ್ಳೋಕೆ ಪ್ರಯತ್ನಿಸಿದ್ದು ಸ್ಪಂದನಾಗೆ ಮುಳುವಾಯ್ತಾ? ಗೆಳತಿ ಹೇಳೋದೇನು? – Kannada News | Spandana Vijay Raghavendra Death: Friend Nethra Pallavi talks about weight loss
ಸೆಲೆಬ್ರಿಟಿಗಳಿಗೆ ಫಿಟ್ನೆಸ್ ಬಗ್ಗೆ ಹೆಚ್ಚು ಕಾಳಜಿ ಇರುತ್ತದೆ. ಅದಕ್ಕಾಗಿ ಹಲವು ಬಗೆಯ ಸೂತ್ರಗಳನ್ನು ಅವರು ಪಾಲಿಸುತ್ತಾರೆ. ಅದರಿಂದ ಆರೋಗ್ಯದ ಮೇಲೆ ಕೆಲವೊಮ್ಮೆ ಪರಿಣಾಮ ಬೀರುವುದೂ ಉಂಟು. ಯಾವುದೇ ಸೆಲೆಬ್ರಿಟಿ ಹೃದಯಾಘಾತ (Heart Attack) ಅಥವಾ ಇತರೆ ಕಾರಣದಿಂದ ನಿಧನರಾದಾಗ ಇಂಥ ಅನುಮಾನ ಮೂಡುತ್ತದೆ. ವಿಜಯ್ ರಾಘವೇಂದ್ರ (Vijay Raghavendra) ಅವರ ಪತ್ನಿ ಸ್ಪಂದನಾ ನಿಧನದ ಬಳಿಕವೂ ಕೆಲವರ ಮನದಲ್ಲಿ ಈ ಕುರಿತು ಪ್ರಶ್ನೆ ಉದ್ಭವ ಆಯಿತು. ಅದಕ್ಕೆ ಸ್ಪಂದನಾ ಅವರ ಗೆಳತಿ ನೇತ್ರಾ ಪಲ್ಲವಿ ಉತ್ತರ ನೀಡಿದ್ದಾರೆ. ‘ಕಾಲೇಜು ದಿನಗಳಿಂದಲೂ ಆಕೆ ವಿಪರೀತ ದಪ್ಪ ಇರಲಿಲ್ಲ. ತೂಕ ಕಡಿಮೆ ಮಾಡಿಕೊಂಡರೆ ತೊಂದರೆ ಆಗುತ್ತೆ ಎಂಬುದರಲ್ಲಿ ನನಗೆ ನಂಬಿಕೆ ಇಲ್ಲ. ಸ್ಪಂದನಾ (Spandana Vijay Raghavendra) ನಿಧನಕ್ಕೆ ಅದು ಕಾರಣ ಅಲ್ಲ. ಆ ಬಗ್ಗೆ ಇರುವ ಗಾಸಿಪ್ಗಳೆಲ್ಲ ನಾನ್-ಸೆನ್ಸ್’ ಎಂದು ನೇತ್ರಾ ಪಲ್ಲವಿ ಹೇಳಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.