EBM News Kannada
Leading News Portal in Kannada

ರಜನಿಕಾಂತ್ ಜೊತೆ ಪವರ್​​ಫುಲ್ ಆಗಿ ಕಾಣಿಸಿಕೊಂಡ ನಟ ಶಿವರಾಜ್​ಕುಮಾರ್​ – Kannada News | Jailer movie poster featuring Rajinikanth and Shivarajkumar goes viral

0


ಶಿವರಾಜ್​ಕುಮಾರ್​ ‘ಜೈಲರ್’ ಸಿನಿಮಾ ತಂಡ ಸೇರಿಕೊಂಡಾಗಲೇ ಚಿತ್ರದ ಬಗ್ಗೆ ನಿರೀಕ್ಷೆ ಸೃಷ್ಟಿ ಆಗಿತ್ತು. ಚಿತ್ರದ ಪೋಸ್ಟರ್ ಹಾಗೂ ಟ್ರೇಲರ್ ಆ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ.

ರಜನಿಕಾಂತ್​, ಶಿವರಾಜ್​ಕುಮಾರ್​

ರಜನಿಕಾಂತ್ (Rajinikanth) ನಟನೆಯ ‘ಜೈಲರ್’ ಸಿನಿಮಾದ (Jailer Movie) ರಿಲೀಸ್​​ಗೆ​ ಇನ್ನು ಕೆಲವೇ ದಿನಗಳು ಬಾಕಿ ಇವೆ. ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಈ ಚಿತ್ರಕ್ಕೆ ಭರ್ಜರಿ ಹೈಪ್ ಸೃಷ್ಟಿ ಆಗಿದೆ. ಕರ್ನಾಟಕದಲ್ಲಿ ಈ ಚಿತ್ರಕ್ಕೆ ಕ್ರೇಜ್ ಸೃಷ್ಟಿ ಆಗಲು ಕಾರಣ ಶಿವರಾಜ್​ಕುಮಾರ್​ (Shivarajkumar) ಕೂಡ ಪ್ರಮುಖ ಕಾರಣ. ಈ ಚಿತ್ರದಲ್ಲಿ ಅವರು ಮುಖ್ಯ ಪಾತ್ರ ಒಂದಕ್ಕೆ ಬಣ್ಣ ಹಚ್ಚಿದ್ದಾರೆ. ಈ ಸಿನಿಮಾ ಕಣ್ತುಂಬಿಕೊಳ್ಳಲು ಫ್ಯಾನ್ಸ್ ಕಾದಿದ್ದಾರೆ. ಸಿನಿಮಾ ರಿಲೀಸ್​ಗೆ ಕೆಲವೇ ದಿನಗಳು ಬಾಕಿ ಇರುವಾಗ ಪವರ್​ಫುಲ್​ ಪೋಸ್ಟರ್ ಒಂದನ್ನು ರಿಲೀಸ್ ಮಾಡಲಾಗಿದೆ.

ಶಿವರಾಜ್​ಕುಮಾರ್​ ‘ಜೈಲರ್’ ಸಿನಿಮಾ ತಂಡ ಸೇರಿಕೊಂಡಾಗಲೇ ಚಿತ್ರದ ಬಗ್ಗೆ ನಿರೀಕ್ಷೆ ಸೃಷ್ಟಿ ಆಗಿತ್ತು. ಚಿತ್ರದ ಪೋಸ್ಟರ್ ಹಾಗೂ ಟ್ರೇಲರ್ ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿತ್ತು. ಇತ್ತೀಚೆಗೆ ಚಿತ್ರದ ಟ್ರೇಲರ್ ರಿಲೀಸ್ ಮಾಡಲಾಗಿದೆ. ಆದರೆ, ಅದರಲ್ಲಿ ಶಿವರಾಜ್​ಕುಮಾರ್​ ಅವರ ಪಾತ್ರ ಕಾಣಿಸಲೇ ಇಲ್ಲ. ಇದು ಅನೇಕರ ಬೇಸರಕ್ಕೆ ಕಾರಣ ಆಗಿತ್ತು. ಈ ಬೇಸರ ಹೋಗಿಸುವ ರೀತಿಯಲ್ಲಿ ಪೋಸ್ಟರ್ ರಿಲೀಸ್ ಮಾಡಲಾಗಿದೆ.

ಒಂದು ಕಡೆಯಲ್ಲಿ ರಜನಿಕಾಂತ್ ಇದ್ದಾರೆ. ಮತ್ತೊಂದು ಕಡೆಯಲ್ಲಿ ಶಿವರಾಜ್​ಕುಮಾರ್​ ನಿಂತಿದ್ದಾರೆ. ಇಬ್ಬರೂ ಒಬ್ಬರನ್ನೊಬ್ಬರು ನೋಡಿಕೊಳ್ಳುತ್ತಿದ್ದಾರೆ. ಕಪ್ಪು-ಬಿಳುಪು ಶೈಲಿಯಲ್ಲಿ ಈ ಪೋಸ್ಟರ್ ಮೂಡಿ ಬಂದಿದೆ. ಈ ಪೋಸ್ಟರ್​ಗೆ ‘ಮೊಟ್ಟ ಮೊದಲ ಬಾರಿಗೆ ಇಬ್ಬರನ್ನೂ ಒಟ್ಟಿಗೆ ನೋಡಲು ರೆಡಿ ಆಗಿ’ ಎನ್ನುವ ಕ್ಯಾಪ್ಶನ್ ನೀಡಲಾಗಿದೆ. ಸಿನಿಮಾದಲ್ಲಿ ಇವರ ಕಾಂಬಿನೇಷನ್ ಯಾವ ರೀತಿಯಲ್ಲಿ ಇರಲಿದೆ ಎಂಬುದು ಇನ್ನೂ ಗುಟ್ಟಾಗಿಯೇ ಇದೆ.

ಶಿವರಾಜ್​ಕುಮಾರ್​ ಹಾಗೂ ರಜನಿಕಾಂತ್ ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಬ್ಯುಸಿ ಆಗಿದ್ದಾರೆ. ರಜನಿ ಅವರು ತಮಿಳು ಚಿತ್ರರಂಗದಲ್ಲಿ ಬ್ಯುಸಿ ಇದ್ದರೆ, ಶಿವಣ್ಣ ಕನ್ನಡದಲ್ಲಿ ನಟಿಸೋದರಲ್ಲಿ ಬ್ಯುಸಿ ಇದ್ದರು. ‘ಜೈಲರ್’ ಸಿನಿಮಾದಿಂದ ಇಬ್ಬರೂ ಒಟ್ಟಿಗೇ ನಟಿಸುವ ಅವಕಾಶ ಸಿಕ್ಕಿದೆ. ಆಗಸ್ಟ್ 10ರಂದು ಸಿನಿಮಾ ವಿಶ್ವಾದ್ಯಂತ ರಿಲೀಸ್ ಆಗುತ್ತಿದೆ.

ರಜನಿಕಾಂತ್ ಅವರು ‘ಜೈಲರ್’ ಸಿನಿಮಾದಲ್ಲಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಶಿವರಾಜ್​ಕುಮಾರ್​, ಮೋಹನ್​ಲಾಲ್ ಮೊದಲಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ತಮನ್ನಾ ಹೆಜ್ಜೆ ಹಾಕಿದ ‘ಕಾವಾಲಾ..’ ಹಾಡು ಸೂಪರ್ ಹಿಟ್ ಆಗಿದೆ. ಈ ಚಿತ್ರಕ್ಕೆ ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ಬುಕಿಂಗ್ ಓಪನ್ ಆಗಿದೆ. ಬೆಂಗಳೂರು ಒಂದರಲ್ಲೇ ಈ ಚಿತ್ರಕ್ಕೆ 850ಕ್ಕೂ ಅಧಿಕ ಶೋಗಳು ಸಿಕ್ಕಿವೆ. ಕನ್ನಡಕ್ಕೆ ಕೇವಲ ಐದು ಶೋ ನೀಡಲಾಗಿದ್ದು, ಸಾಕಷ್ಟು ಮಂದಿ ಅಪಸ್ವರ ತೆಗೆದಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ತಾಜಾ ಸುದ್ದಿ



Leave A Reply

Your email address will not be published.