EBM News Kannada
Leading News Portal in Kannada

ಸ್ಪಂದನ ವಿಜಯ್ ಅಕಾಲಿಕ ಸಾವು, ವಿಜಯ್ ರಾಘವೇಂದ್ರ ಮನೆಗೆ ಆಗಮಿಸಿದ ಬಿಜೆಪಿ ಶಾಸಕ ಮುನಿರತ್ನ ನಾಯ್ಡು – Kannada News | Spandana Vijay untimely death, MLA and film producer Munirathna Naidu visits Vijay Raghavendra’s residence

0


Arun Kumar Belly |

Updated on: Aug 07, 2023 | 1:13 PM


ಏತನ್ಮಧ್ಯೆ, ಕನ್ನಡ ಚಿತ್ರರಂಗಕ್ಕೆ ಸಂಬಂಧಪಟ್ಟವರು ರಾಜಕೀಯ ನಾಯಕರು ಸ್ಪಂದನ ಸಾವಿಗೆ ಶೋಕ ವ್ಯಕ್ತಪಡಿಸುತ್ತಿದ್ದಾರೆ ಮತ್ತು ವಿಜಯ್ ಮನೆಗೆ ಭೇಟಿ ನೀಡುತ್ತಿದ್ದಾರೆ.


ಬೆಂಗಳೂರು: ಸ್ಯಾಂಡಲ್ ವುಡ್ ನಟ ವಿಜಯ್ ರಾಘವೇಂದ್ರ (Vijay Raghavendra) ಪತ್ನಿ ಸ್ಪಂದನ ವಿಜಯ್ (Spandana Vijay) ಹಠಾತ್ ಸಾವು ಕನ್ನಡಿಗರಿಗೆ ಅದರಲ್ಲೂ ವಿಶೇಷವಾಗಿ ಚಿತ್ರರಂಗಕ್ಕೆ ಸಂಬಂಧಪಟ್ಟರಿಗೆ ಆಘಾತವನ್ನುಂಟು ಮಾಡಿದೆ. ವಿದೇಶ ಪ್ರವಾಸದಲ್ಲಿದ್ದ ಸ್ಪಂದನ ತೀವ್ರ ಹೃದಯಾಘಾತಕ್ಕೊಳಗಾಗಿ ಅಕಾಲಿಕ ಮರಣವನ್ನಪ್ಪಿದ್ದಾರೆ. ಕಡಿಮೆ ರಕ್ತದೊತ್ತಡದಿಂದಾಗಿ ಅವರು ಹೃದಯಾಘಾತಕ್ಕೊಳಗಾದರು ಅಂತ ವಿಜಯ ಸಹೋದರ ಮತ್ತು ಖ್ಯಾತ ನಟ ಮುರಳಿ ಹೇಳಿದ್ದಾರೆ. ಏತನ್ಮಧ್ಯೆ, ಕನ್ನಡ ಚಿತ್ರರಂಗಕ್ಕೆ ಸಂಬಂಧಪಟ್ಟವರು ರಾಜಕೀಯ ನಾಯಕರು ಸ್ಪಂದನ ಸಾವಿಗೆ ಶೋಕ ವ್ಯಕ್ತಪಡಿಸುತ್ತಿದ್ದಾರೆ ಮತ್ತು ವಿಜಯ್ ಮನೆಗೆ ಭೇಟಿ ನೀಡುತ್ತಿದ್ದಾರೆ. ಚಿತ್ರ ನಿರ್ಮಾಪಕರೂ ಆಗಿರುವ ರಾಜರಾಜೇಶ್ವರಿನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ನಾಯ್ಡು (Munirathna Naidu) ಅವರನ್ನು ವಿಜಯ ರಾಘವೇಂದ್ರ ಮನೆ ಮುಂದೆ ನೋಡಬಹುದು.

Leave A Reply

Your email address will not be published.