Ultimate magazine theme for WordPress.

ಫೋಟೋ ವೈರಲ್; ಜಾಲಿ ರೈಡ್ ಮುಗಿಸಿ ವಾಪಸ್ ಆದ ದರ್ಶನ್ ಆ್ಯಂಡ್ ಟೀಂ

0

ಚಾಲೆಂಜಿಂಗ್ ಸ್ಟಾರ್ ದರ್ಶನ್ ಸದ್ಯ ಸ್ನೇಹಿತರ ಜೊತೆ ಮಸ್ತ್ ಎಂಜಾಯ್ ಮಾಡುತ್ತಿದ್ದಾರೆ. ಲಾಕ್ ಡೌನ್ ಬಳಿಕ ಹೆಚ್ಚಾಗಿ ತಮ್ಮ ಮೈಸೂರಿನ ತೋಟದ ಮನೆಯಲ್ಲೇ ವಾಸಿಸುತ್ತಿರುವ ದಚ್ಚು, ಆಗಾಗ ತನ್ನ ಆಪ್ತ ಗ್ಯಾಂಗ್ ಜೊತೆ ಜಾಲಿ ಟ್ರಿಪ್ ಎಂಜಾಯ್ ಮಾಡುತ್ತಿರುತ್ತಾರೆ.

ಇತ್ತೀಚಿಗಷ್ಟೆ ಕೊಡಗು ಕಡೆ ಬೈಕ್ ರೈಡ್ ಹೊರಟಿದ್ದ ಚಾಲೆಂಜಿಂಗ್ ಸ್ಟಾರ್ ಆಂಡ್ ಗ್ಯಾಂಗ್ ಇದೀಗ ಕೇರಳ ಕಡೆ ಹೊರಟಿದ್ದಾರೆ. ವಿಶೇಷ ಎಂದರೆ ಈಗಾಗಲೇ ಕೇರಳ ರೈಡ್ ಮುಗಿಸಿ ಕರ್ನಾಟಕಕ್ಕೆ ವಾಪಸ್ ಆಗಿದ್ದಾರೆ. ದರ್ಶನ್ ಮತ್ತು ತಂಡ ಜಾಲಿ ರೈಡ್ ಹೋಗಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಮುಂದೆ ಓದಿ…

ಕೇರಳಕಡೆ ಜಾಲಿ ರೈಡ್ ಹೊರಟಿದ್ದ ದರ್ಶನ್ ಗೆ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ, ಹಾಸ್ಯ ನಟ ಚಿಕ್ಕಣ್ಣ, ಯಶಸ್ ಸೂರ್ಯ, ಪ್ರಜ್ವಲ್ ದೇವರಾಜ್, ಪನ್ನಗಾಭರಣ ಸೇರಿದಂತೆ ಹತ್ತಕ್ಕೂ ಹೆಚ್ಚು ಸ್ನೇಹಿತರು ಸಾಥ್ ನೀಡಿದ್ದಾರೆ. ಸ್ನೇಹಿತರ ಜೊತೆ ಬೈಕ್ ರೈಡ್ ಹೋಗಿದ್ದ ದರ್ಶನ್ ವೀಕೆಂಡ್ ಸಖತ್ ಎಂಜಾಯ್ ಮಾಡಿದ್ದಾರೆ.

Leave A Reply

Your email address will not be published.