EBM News Kannada
Leading News Portal in Kannada

ಕೆಲಸ ಹೇಳಿದ್ದಕ್ಕೆ ಮಗಳು ಆತ್ಮಹತ್ಯೆ

0

ಬೆಂಗಳೂರು: ಮನೆ ಕೆಲಸದಲ್ಲಿ ನೆರವಾಗು ಎಂದು ತಾಯಿ ಜೋರು ಧ್ವನಿಯಲ್ಲಿ ಹೇಳಿದ್ದರಿಂದ ಮನನೊಂದ ಮಗಳು ನೇಣಿಗೆ ಶರಣಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜೆ.ಜೆ.ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಪಾದರಾಯನಪುರದ ನರಸಿಂಹಯ್ಯ ಕಾಂಪೌಂಡ್‌ ನಿವಾಸಿ ಸಂಧ್ಯಾ (14) ಮೃತ ಬಾಲಕಿ. ತಂದೆ ಇಲ್ಲದೆ, ತಾಯಿ ಆರೈಕೆ ಬೆಳೆಯುತ್ತಿದ್ದ ಈಕೆ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಎರಡು ವರ್ಷಗಳ ಹಿಂದಷ್ಟೇ ಈಕೆಯ ಅಕ್ಕ ಕೂಡ ಇದೇ ರೀತಿ ನೇಣು ಹಾಕಿಕೊಂಡು ಮೃತಪಟ್ಟಿದ್ದಳು ಎಂದು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪತಿ ಅನಾರೋಗ್ಯದಿಂದ ಮೃತಪಟ್ಟ ಬಳಿಕ ಭೂಮಿಕಾ(ತಾಯಿ) ಅವರು ಸಂಧ್ಯಾ ಜತೆ ಪಾದರಾಯನಪುರದಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಬೀದಿ ಬದಿ ಹಣ್ಣು, ತರಕಾರಿ ಮಾರಿ ಜೀವನ ನಡೆಸುತ್ತಿದ್ದರು.ಬಾಲಕಿ ವಿದ್ಯಾಭ್ಯಾಸ ಅರ್ಧಕ್ಕೆ ನಿಲ್ಲಿಸಿ, ಮನೆಯಲ್ಲೇ ಇದ್ದಳು. ಈ ಕಾರಣಕ್ಕೆ ಮನೆ ಕೆಲಸದಲ್ಲಾದರೂ ನೆರವಾಗು ಎಂದು ತಾಯಿ ಪದೇ ಪದೇ ಹೇಳುತ್ತಿದ್ದರು. ಆದರೆ ಮಗಳು ಸಹಕಾರ ನೀಡುತ್ತಿರಲಿಲ್ಲ. ಶುಕ್ರವಾರ ಬೆಳಗ್ಗೆ ಕೂಡ ಇದನ್ನೇ ತಾಯಿ ಜೋರು ಧ್ವನಿಯಲ್ಲಿ ಹೇಳಿ ಮಾಮೂಲಿಯಂತೆ ತರಕಾರಿ ಮಾರಾಟಕ್ಕೆ ಮನೆ ಬಿಟ್ಟಿದ್ದರು. ಮಧ್ಯಾಹ್ನದ ವೇಳೆಗೆ ತಾಯಿ ಮನೆಗೆ ಮರಳಿದಾಗ ಮಗಳು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Leave A Reply

Your email address will not be published.