ಮೈಸೂರು: ಚುಂಚನಕಟ್ಟೆ ಫಾಲ್ಸ್ ನಲ್ಲಿ ಕೊಚ್ಚಿಹೋದ ಸಿ ಎಫ್ ಟಿ ಆರ್ ಐ ವಿಜ್ಞಾನಿ
ಮೈಸೂರು: ಮೈಸೂರಿನ ಚುಂಚನಕಟ್ಟೆ ಜಲಪಾತದಲ್ಲಿ ಮುಳುಗಿ ಸಿ ಎಫ್ ಟಿ ಆರ್ ಐ ವಿಜ್ಞಾನಿ ಸಾವನ್ನಪ್ಪಿರುವ ಘಟನೆ ನಡೆದಿದೆ
ಹರ್ಯಾಣ ಮೂಲದ ಸೋಮಶೇಖರ್ (40) ಎನ್ನುವವರು ಸಿ ಎಫ್ ಟಿ ಆರ್ ಐ ಹಿರಿಯ ವಿಜ್ಞಾನಿಯಾಗಿ ಕೆಲಸ ಮಾಡುತ್ತಿದ್ದ ಮೃತಪಟ್ಟ ದುರ್ದೈವಿಯಾಗಿದ್ದಾರೆ.
ಇನ್ನು ಮೃತ ಸೋಮಶೇಖರ್ ಇಂದು ತಮ್ಮ ಕುಟುಂಬದ ಜೊತೆಗೆ ರಜೆಯ ಮಜವನ್ನು ಅನುಭವಿಸುವ ಸಲುವಾಗಿ ತಮ್ಮ ಕುಟುಂಬಸ್ಥರು ಹಾಗೂ ಸ್ನೇಹಿತರೊಂದಿಗೆ ಆಗಮಿಸಿದ್ದರು.
ಅವರು ನೀರಿನಲ್ಲಿ ಆಟವಾಡುತ್ತಿದ್ದ ವೇಳೆ ನೀರಿನ ಮಟ್ಟ ಏಕಾಏಕಿ ಏರಿದೆ, ಈ ವೇಳೆ ಸೋಮಶೇಖರ್ ಪತ್ನಿ ಪ್ರತಿಮ ಮಕ್ಕಳಾದ ರಿಷಾನಿ, ವಿನಯ್ ಕೊಚ್ಚಿಕೊಂಡು ಹೋಗುತ್ತಿದ್ದ ವೇಳೆ ಸ್ಥಳೀಯರು ಕೂಡಲೇ ಮೂವರನ್ನು ರಕ್ಷಣೆ ಮಾಡಿದ್ದಾರೆ. ನೀರಿನ ರಭಸ ಹೆಚ್ಚಿದ್ದರಿಂದ ಸೋಮಶೇಖರ್ ಅವರನ್ನು ರಕ್ಷಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಸೋಮಶೇಖರ್ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ.
ಜಲ ವಿದ್ಯುತ್ ಘಟಕ ನೀರಿನ ರಭಸ ಹೆಚ್ಚಾಗಿರುವು ಬಗ್ಗೆ ಸೈರನ್ ಮೊಳಿಗಿಸಿ ಎಚ್ಚರಿಕೆ ನೀಡಿದೆ, ಆದರೆ ನೀರಿನಲ್ಲಿ ಆಡುತ್ತಿದ್ದ ಪ್ರವಾಸಿಗರಿಗೆ ಇದು ಕೇಳಿಸಿಲ್ಲ, ನೀರಿನ ಮಟ್ಟ ಏರಿದ ಬಳಿಕ ಅಲ್ಲಿಂದ ತೆರಳಿದ್ದಾರೆ. ಕೆ.ಆರ್ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಶವ ಹುಡುಕಾಟ ನಡೆಸಿದ್ದಾರೆ.