ಟೋಲ್ ಪ್ಲಾಜಾ ಸಿಬ್ಬಂದಿಗೆ ಡಿಕ್ಕಿ ಹೊಡೆದು ಎಳೆದೊಯ್ದ ಕಾರು ಚಾಲಕ, ವಿಡಿಯೋ ವೈರಲ್ – Kannada News | Uttar Prasdesh Crime: apur hit and run, Toll plaza employee run over by car on Delhi Lucknow highway
ಉತ್ತರ ಪ್ರದೇಶದ ಟೋಲ್ ಒಂದರಲ್ಲಿ ಕಾರು ಚಾಲಕನೊಬ್ಬ ಟೋಲ್ ಸಿಬ್ಬಂದಿಗೆ ಡಿಕ್ಕಿ ಹೊಡೆದು ಎಳೆದುಕೊಂಡು ಹೋಗಿರುವ ಘಟನೆ ವರದಿಯಾಗಿದೆ.
ಉತ್ತರ ಪ್ರದೇಶದ ಟೋಲ್ ಒಂದರಲ್ಲಿ ಕಾರು ಚಾಲಕನೊಬ್ಬ ಟೋಲ್ ಸಿಬ್ಬಂದಿಗೆ ಡಿಕ್ಕಿ ಹೊಡೆದು ಎಳೆದುಕೊಂಡು ಹೋಗಿರುವ ಘಟನೆ ವರದಿಯಾಗಿದೆ. ದೆಹಲಿ-ಲಕ್ನೋ ಹೆದ್ದಾರಿಯಲ್ಲಿರುವ ಛಜರ್ಸಿ ಟೋಲ್ ಪ್ಲಾಜಾದಲ್ಲಿ, ವ್ಯಕ್ತಿಯೊಬ್ಬ ತನ್ನ ಕಾರನ್ನು ಟೋಲ್ ಸಿಬ್ಬಂದಿಗೆ ಡಿಕ್ಕಿ ಹೊಡೆಸಿ ಬಳಿಕ ಕಾರಿನಲ್ಲಿ ಸ್ವಲ್ಪ ದೂರ ಎಳೆದೊಯ್ದ ಘಟನೆ ನಡೆದಿದೆ. ಇದೀಗ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಈ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ದೃಶ್ಯಗಳಲ್ಲಿ ಚಾಲಕ ಅತಿವೇಗದಲ್ಲಿ ಬಂದ ಕಾರು, ಬೇಕಂತಲೇ ಟೋಲ್ ಸಿಬ್ಬಂದಿಗೆ ಡಿಕ್ಕಿ ಹೊಡೆದಂತೆ ತೋರುತ್ತದೆ.
ಡಿಕ್ಕಿ ಹೊಡೆದ ಬಳಿಕ ಇದಾದ ಬಳಿಕ ಸ್ವಲ್ಪ ದೂರ ಎಳೆದೊಯ್ದಿದ್ದಾರೆ. ಅಷ್ಟರಲ್ಲಿ ಅಲ್ಲಿ ನಿಂತಿದ್ದವರ ಕೂಗಾಟದಿಂದಾಗಿ ಕಾರನ್ನು ನಿಲ್ಲಿಸಿದ್ದಾರೆ.
#Hapur, #UttarPradesh: A car rams into a toll booth staff at Delhi-Lucknow highway at Chhajarsi Toll Plaza. pic.twitter.com/kQJfcDpgXq
— Sanjay Jha (@JhaSanjay07) August 6, 2023
ಘಟನೆಯ ಕುರಿತು ಪಿಲ್ಖುವಾ ಸರ್ಕಲ್‌ನ ಡಿಸಿಪಿ ವರುಣ್ ಮಿಶ್ರಾ, ಮಾತನಾಡಿ ವ್ಯಕ್ತಿ ಉದ್ದೇಶ ಪೂರ್ವಕವಾಗಿ ಛಜರ್ಸಿ ಟೋಲ್ ಪ್ಲಾಜಾ ಸಿಬ್ಬಂದಿಗೆ ಕಾರು ಡಿಕ್ಕಿ ಹೊಡೆಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಮತ್ತಷ್ಟು ಓದಿ: ಟೋಲ್ ವಿಚಾರಕ್ಕೆ ನಡೆದ ಜಗಳ ಕೊಲೆಯಲ್ಲಿ ಅಂತ್ಯ; ಫಾಲೋ ಮಾಡಿಕೊಂಡು ಹೋಗಿ ಟೋಲ್ ಸಿಬ್ಬಂದಿ ಹತ್ಯೆ
ಈ ಸಂಬಂಧ ಪ್ರಕರಣವನ್ನು ದಾಖಲಿಸಲಾಗಿದೆ. ಶೀಘ್ರದಲ್ಲೇ ಕಾರು ಚಾಲಕನನ್ನು ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಟೋಲ್ ಪ್ಲಾಜಾ ಸಿಬ್ಬಂದಿ ಆರೋಗ್ಯ ಸ್ಥಿತಿ ಹೇಗಿದೆ ಎಂಬುದರ ಕುರಿತು ಯಾವುದೇ ಮಾಹಿತಿ ಇಲ್ಲ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ