ಕೋಲಾರ: ಎಂಟನೇ ತರಗತಿ ವಿದ್ಯಾರ್ಥಿನಿ ಮೇಲೆ ಶಿಕ್ಷಕನಿಂದ ನಿರಂತರ ಅತ್ಯಾಚಾರ; ಆರೋಪಿ ವಶಕ್ಕೆ – Kannada News | In a private school in Srinivasapur taluk an eighth grade student was continuously raped by a teacher
ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಖಾಸಗಿ ಶಾಲೆಯೊಂದರಲ್ಲಿ, ಎಂಟನೇ ತರಗತಿ ವಿದ್ಯಾರ್ಥಿನಿ ಮೇಲೆ 33 ವರ್ಷದ ಶಿಕ್ಷಕ ನಿರಂತರ ಅತ್ಯಾಚಾರ ನಡೆಸಿದ ಆರೋಪ ಕೇಳಿಬಂದಿದೆ.
ಪ್ರಾತಿನಿಧಿಕ ಚಿತ್ರ
ಕೋಲಾರ, ಆ.6: ಮಕ್ಕಳ ಬಾಳಿಗೆ ಬೆಳಕು ತೋರಿಸಿಕೊಡುವ ಶಿಕ್ಷಕ(Teacher) ಹುದ್ದೆ ಸಾಮಾನ್ಯವಾದದಲ್ಲ. ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಆತನ ಪಾತ್ರ ಬಹಳ ದೊಡ್ಡದು. ಆದರೆ, ಜಿಲ್ಲೆಯ ಶ್ರೀನಿವಾಸಪುರ(Srinivaspur) ತಾಲೂಕಿನ ಖಾಸಗಿ ಶಾಲೆಯೊಂದರಲ್ಲಿ, ಎಂಟನೇ ತರಗತಿ ವಿದ್ಯಾರ್ಥಿನಿ ಮೇಲೆ 33 ವರ್ಷದ ಶಿಕ್ಷಕ ನಿರಂತರ ಅತ್ಯಾಚಾರ ನಡೆಸಿದ ಆರೋಪ ಕೇಳಿಬಂದಿದೆ. ಈ ಘಟನೆಗೆ ಸಂಬಂಧಪಟ್ಟಂತೆ ಆರೋಪಿ ಶಿಕ್ಷಕನನ್ನು ಪೊಲೀಸರು ಬಂಧಿಸಿದ್ದು, ಪೋಕ್ಸೋ ಕಾಯಿದೆಯಡಿ ಪ್ರಕರಣ ದಾಖಲು ಮಾಡಿ, ವಶಕ್ಕೆ ಪಡೆಯಲಾಗಿದೆ. ಈ ಘಟನೆ ಗೌನಿಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬೆಳವಾಡಿಯಲ್ಲಿ ನಿವೇಶನ ವಿಚಾರಕ್ಕೆ ಇಬ್ಬರ ಮೇಲೆ ಹಲ್ಲೆ ಆರೋಪ
ಮೈಸೂರು: ತಾಲೂಕಿನ ಬೆಳವಾಡಿ ಗ್ರಾಮದಲ್ಲಿ ನಿವೇಶನ ವಿಚಾರಕ್ಕೆ ಇಬ್ಬರ ಮೇಲೆ ಹಲ್ಲೆ ಮಾಡಿದ ಆರೋಪ ಕೇಳಿಬಂದಿದೆ. ಗುಂಡೇಗೌಡ ಪತ್ನಿ ಸುಶೀಲಾ ಹಾಗೂ ಆಕೆಯ ಸಂಬಂಧಿ ಮೇಲೆ, ಗ್ರಾಮದ ಶಿವಣ್ಣ ಹಾಗೂ ಕುಟುಂಬಸ್ಥರಿಂದ ಹಲ್ಲೆ ನಡೆಸಲಾಗಿದೆ. 14 ವರ್ಷಗಳ ಹಿಂದೆ ಶಿವಣ್ಣ, 5 ಲಕ್ಷ ರೂಪಾಯಿಗೆ ಗುಂಡೇಗೌಡ ಎಂಬುವರಿಗೆ ನಿವೇಶನವನ್ನು ಮಾರಾಟ ಮಾಡಿದ್ದರು. 2016ರಿಂದ ನಿವೇಶನ ವಾಪಸ್ ಕೊಡುವಂತೆ ಗಲಾಟೆ ಮಾಡಲು ಶುರು ಮಾಡಿದ್ದನಂತೆ. ಇದೀಗ ನಿವೇಶನ ಬಳಿ ಇದ್ದ ಗುಂಡೇಗೌಡ ಪತ್ನಿ ಹಾಗೂ ಸಂಬಂಧಿ ಮೇಲೆ ಹಲ್ಲೆ ಮಾಡಿದ ಆರೋಪದ ಮೇಲೆ ಮೈಸೂರಿನ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಿಐಡಿ ಜಂಕ್ಷನ್ ಟ್ರಾಫಿಕ್ ಸಿಗ್ನಲ್ ಕಂಬಕ್ಕೆ ಅಪರಿಚಿತ ಲಾರಿ ಡಿಕ್ಕಿ
ಬೆಂಗಳೂರು: ಸಿಐಡಿ ಜಂಕ್ಷನ್ ಟ್ರಾಫಿಕ್ ಸಿಗ್ನಲ್ ಕಂಬಕ್ಕೆ ಅಪರಿಚಿತ ಲಾರಿಯೊಂದು ಡಿಕ್ಕಿಯಾದ ಘಟನೆ ಹೈಗ್ರೌಂಡ್ಸ್ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಲಾರಿ ಡಿಕ್ಕಿಯ ರಭಸಕ್ಕೆ ಫುಟ್ಪಾತ್ನಲ್ಲಿದ್ದ ಕಂಬ ಕಿತ್ತು ಬಿದ್ದಿದ್ದು, ಡಿಕ್ಕಿ ಬಳಿಕ ಚಾಲಕ, ಲಾರಿ ಸಮೇತ ಎಸ್ಕೇಪ್ ಆಗಿದ್ದಾನೆ. ಘಟನಾ ಸ್ಥಳಕ್ಕೆ ವಿಧಾನಸೌಧ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.