EBM News Kannada
Leading News Portal in Kannada

ಮಚ್ಚು ಹಿಡಿದು ಮೆರೆದವನು ಮಚ್ಚಿನಿಂದಲೇ ಅಂತ್ಯ, ತನ್ನ ಭವಿಷ್ಯವನ್ನು ತಾನೇ ನುಡಿದಿದ್ದ ಹತ್ಯೆಯಾದ ರೌಡಿಶೀಟರ್ – Kannada News | Bengaluru Rowdy Wilson Garden Naga Name Came to In Mahesh Murder Case

0


ಜೈಲಿಂದ ರಿಲೀಸ್ ಆದ ಕೆಲ ಹೊತ್ತಿನಲ್ಲೇ ರೌಡಿಶೀಟರ್ ಸಿದ್ದಾಪುರ ಮಹೇಶ್​ನನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. ತನ್ನ ಭವಿಷ್ಯವನ್ನು ತಾನೇ ನುಡಿದಿದ್ದಂತೆ ಮಹೇಶ್ ಹತ್ಯೆಯಾಗಿದೆ.​

ಕೊಲೆಯಾದ ಮಹೇಶ್

ಬೆಂಗಳೂರು, (ಆಗಸ್ಟ್ 06): ಬೆಂಗಳೂರಿನಲ್ಲಿ (Bengaluru) ಭೂಗತ ಪಾತಕಿಗಳು ಮತ್ತೆ ಬಾಲ ಬಿಚ್ಚಿದ್ದಾರೆ. ನಿನ್ನೆ(ಆಗಸ್ಟ್ 06) ನಡುರಸ್ತೆಯಲ್ಲೇ ಮಚ್ಚು ಬೀಸಿ ನೆತ್ತರ ಕೋಡಿ ಹರಿಸಿದ್ದಾರೆ. ರೌಡಿಶೀಟರ್(rowdy sheeter) ಸಿದ್ದಾಪುರ ಮಹೇಶ್(Mahesh Murder Case) ಜೈಲಿಂದ ರಿಲೀಸ್ ಆದ ಕೆಲ ಹೊತ್ತಿನಲ್ಲೇ ಭೀಕರವಾಗಿ ಹತ್ಯೆ ಮಾಡಲಾಗಿದೆ. ಕೈಯಲ್ಲಿ ಮಚ್ಚು ಹಿಡಿದು ಫೀಲ್ಡ್​ಗೆ ಇಳಿದವನು ಮಚ್ಚಿನೇಟಿಗೆ ಬಲಿಯಾಗುತ್ತಾನೆ ಎನ್ನುವುದು ರೌಡಿಸಂನ ಅಲಿಖಿತ ನಿಯಮ. ಅದು ರಾಜಧಾನಿ ಬೆಂಗಳೂರಿನಲ್ಲಿ ಮತ್ತೆ ಸಾಬೀತಾಗಿದೆ. ಕೊಲೆ, ಕೊಲೆ ಯತ್ನ, ಸುಫಾರಿಯಂತಹ ಹಲವು ಕೇಸ್​ಗಳಲ್ಲಿ ರೌಡಿಶೀಟ್ ಹಾಕಿಸಿಕೊಂಡಿದ್ದ ಮಹೇಶ್ ಅಲಿಯಾಸ್ ಸಿದ್ದಾಪುರ ಮಹೇಶ ಮೊನ್ನೇ ರಾತ್ರಿ ಬರ್ಬರವಾಗಿ ಕೊಲೆಯಾಗಿದ್ದಾನೆ. ವಿಲ್ಸನ್ ಗಾರ್ಡನ್ ನಾಗನೇ (Wilson Garden Naga) ನನಗೆ ಮುಹೂರ್ತ ಇಡುತ್ತಾನೆ ಎಂದು ಕೊಲೆಯಾದ ಮಹೇಶ್ ತನ್ನ ಭವಿಷ್ಯವನ್ನು ತಾನೇ ನುಡಿದಿದ್ದ. ಈ ಬಗ್ಗೆ ಆಪ್ತರು ಮತ್ತು ಕೆಲ ಪೊಲೀಸ್ ಅಧಿಕಾರಿ ಜೊತೆ‌‌‌‌ ಹೇಳಿಕೊಂಡಿದ್ದ ಎಂದು ತಿಳಿದುಬಂದಿದೆ.

ಆತನ ಕೈಯಿಂದಲೇ ನನ್ನ ಸಾವಾಗುವುದು ಗ್ಯಾರಂಟಿ ಎಂದು ತಿಳಿದಿದ್ದ ಮಹೇಶ್, ಅಷ್ಟರಲ್ಲಿ ನಾಗನ ಕಡೆಯವರನ್ನ ಮುಗಿಸುವ ಪಣ ತೊಟ್ಟಿದ್ದ. 2020ರಲ್ಲಿ ಹಾಸನದಲ್ಲಿ ಲಿಂಗನ ಹತ್ಯೆ ಸಮಯದಲ್ಲೇ ಮಹೇಶ್ ಗೂ ಮುಹೂರ್ತ ಇಟ್ಟಿದ್ದರು. ಆದ್ರೆ, ಆಗ ಮಹೇಶ್ ಬಚಾವ್ ಆಗಿದ್ದ. ಇದರ ರಿವೇಂಜ್ ಗಾಗಿ ಮಹೇಶ್, ಫೈನಾನ್ಶಿಯರ್ ಮದನ್ ಹತ್ಯೆ ಮಾಡಿಸಿದ್ದ. ಈ ವೇಳೆ ನಾಗ ನನ್ನ ಮುಗಿಸುತ್ತಾನೆ ಎನ್ನುವ ಭವಿಷ್ಯ ನುಡಿದಿದ್ದ. ಅದರಂತೆ ಮೊನ್ನೆ ಜೈಲಿನಿಂದ ಹೊರಬರುತ್ತಿದ್ದಂತೆಯೇ ತಾನು ನುಡಿದಿದ್ದ ಭವಿಷ್ಯದಂತೆ ಮಹೇಶ್ ಬರ್ಬರವಾಗಿ ಹತ್ಯೆಯಾಗಿದ್ದ.ಹೀಗಾಗಿ ಇದೀಗ ಈ ಮಹೇಶ್ ಕೊಲೆ ಹಿಂದೆ ಕೇಳಿ ವಿಲ್ಸನ್ ಗಾರ್ಡನ್ ನಾಗನ ಹೆಸರು ಕೇಳಿಬರುತ್ತಿದೆ.

ಮಹೇಶ್ ಕೊಲೆ ಬೆನ್ನಲ್ಲೇ ಖಾಕಿ ಅಲರ್ಟ್

ರೌಡಿಶೀಟರ್ ಕಪಿಲ್ ಹಾಗೂ ಸಿದ್ದಾಪುರ ಮಹೇಶ್ ಕೊಲೆ ಹತ್ಯೆ ಬಳಿಕ ಎಚ್ಚೆತ್ತ ಪೊಲೀಸ್ ಇಲಾಖೆ, ಬೆಂಗಳೂರಿನಲ್ಲಿ ಇತ್ತೀಚೆಗೆ ಹೆಚ್ಚುತ್ತಿರುವ ಕೊಲೆ, ಕೊಲೆಯತ್ನ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದೆ. ಹೀಗಾಗಿ ರೌಡಿಶೀಟರ್​ಗಳ ಚಲನವಲನದ ಮಾಹಿತಿ ಕಲೆ ಹಾಕುವಂತೆ ಎಲ್ಲಾ ಪೊಲೀಸ್ ಠಾಣಾಧಿಕಾರಿಗಳಿಗೆ ಹಿರಿಯ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಯಾರು ಯಾವ ಕೆಲಸ ಮಾಡುತ್ತಿದ್ದಾರೆ, ಸದ್ಯ ಎಲ್ಲಿ ವಾಸವಾಗಿದ್ದಾರೆ? ರಿಯಲ್ ಎಸ್ಟೇಟ್​ನಲ್ಲಿ ಭಾಗಿಯಾಗಿರುವ ರೌಡಿಶೀಟರ್​​ಗಳು ಯಾರು? ಯಾವ ರೌಡಿಶೀಟರ್​ನ ಸಹಚರರು ತುಂಬಾ ಆ್ಯಕ್ಟೀವ್ ಅಗಿದ್ದಾರೆ? ಯಾವ ರೌಡಿಶೀಟರ್​​ ಹೆಸರಿನಲ್ಲಿ ಹವಾ ಮೇಂಟೇನ್ ಮಾಡ್ತಿದ್ದಾರೆ? ಅಂತೆಲ್ಲ ಸಂಪೂರ್ಣ ಮಾಹಿತಿ ಸಂಗ್ರಹಿಸುವಂತೆ ಇನ್ಸ್​ಪೆಕ್ಟರ್​ಗಳಿಗೆ ಸೂಚನೆ ನೀಡಲಾಗಿದೆ. ಗ್ಯಾಂಗ್​ಗಳ ನಡುವೆ ಇರುವ ವೈರತ್ವದ ಕುರಿತು ಮಾಹಿತಿ ಸಂಗ್ರಹಿಸಿ ಕ್ರಮ ಕೈಗೊಳ್ಳುವಂತೆ ಠಾಣಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಹೀಗಾಗಿ ರೌಡಿಶೀಟರ್​ಗಳ ಚಲನವಲನ ಮೇಲೆ ಇನ್ಸ್​ಪೆಕ್ಟರ್​​ಗಳು ಹದ್ದಿನಕಣ್ಣಿಟ್ಟಿದ್ದಾರೆ.

ತಾಜಾ ಸುದ್ದಿ

Leave A Reply

Your email address will not be published.