Ultimate magazine theme for WordPress.

ಭಾರತದಲ್ಲಿ ಕೊರೊನಾ ಆಕ್ಟೀವ್ ಪ್ರಕರಣಗಳಿಗಿಂತ ಡಿಸ್ಚಾರ್ಜ್ ಆದವರೇ ಹೆಚ್ಚು

0

ನವದೆಹಲಿ, ಜೂನ್ 10: ಭಾರತದಲ್ಲಿ ಮೊದಲ ಬಾರಿಗೆ ಕೊರೊನಾ ಆಕ್ಟೀವ್ ಪ್ರಕರಗಳಿಗಿಂತ ಗುಣಮುಖರಾದವರ ಸಂಖ್ಯೆಯೇ ಹೆಚ್ಚಿದೆ. ಕಳೆದ 24 ಗಂಟೆಗಳಲ್ಲಿ 9985 ಹೊಸ ಪ್ರಕರಣಗಳು ಪತ್ತೆಯಾಗಿದೆ. 279 ಮಂದಿ ಸಾವನ್ನಪ್ಪಿದ್ದಾರೆ.ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ 1,33,632 ಆಕ್ಟೀವ್ ಪ್ರಕರಣಗಳಿದ್ದು, 1,35,205 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ತೆರಳಿದ್ದಾರೆ.

ದೇಶದಲ್ಲಿ 2.7 ಲಕ್ಷ ಮಂದಿ ಕೊರೊನಾ ಸೋಂಕಿತರಿದ್ದಾರೆ, 7,745 ಮಂದಿ ಸಾವನ್ನಪ್ಪಿದ್ದಾರೆ.ಅಮೆರಿಕ, ಬ್ರೆಜಿಲ್, ರಷ್ಯಾ, ಯುಕೆ ಬಳಿಕ, ಭಾರತದಲ್ಲಿ ಸತತ ಎಂಟನೇ ದಿನವೂ ಸೋಂಕಿತರ ಸಂಖ್ಯೆ 9 ಸಾವಿರಕ್ಕೇರಿದೆ.

ಮಹಾರಾಷ್ಟ್ರದಲ್ಲಿ ಸಮುದಾಯ ಸೋಂಕು ಇಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಈಗಾಗಲೇ ಸೋಂಕಿತರ ಸಂಖ್ಯೆ 90 ಸಾವಿರ ದಾಟಿದ್ದು, ಮುಂಬೈ ಒಂದರಲ್ಲೇ 51 ಸಾವಿರ ಸೋಂಕಿತರಿದ್ದಾರೆ. ಅತಿ ಹೆಚ್ಚು ಕೊರೊನಾ ಸೋಂಕಿತರಿರುವ ಪ್ರದೇಶಗಳ ಪೈಕಿ ದೆಹಲಿ ಮೂರನೇ ಸ್ಥಾನದಲ್ಲಿದೆ. ಜುಲೈ ಅಂತ್ಯದಷ್ಟೊತ್ತಿಗೆ ಸೋಂಕಿತರ ಸಂಖ್ಯೆ ಐದು ಲಕ್ಷ ದಾಟಲಿದೆ ಎಂದು ಉಪ ಮುಖ್ಯಮಂತ್ರಿ ಮನಿಶ್ ಸಿಸೊಡಿಯಾ ಹೇಳಿದ್ದರು.

Leave A Reply

Your email address will not be published.