Ultimate magazine theme for WordPress.

ಕೊಡಗಿನ ಆಶಾ ಕಾರ್ಯಕರ್ತರಿಗೆ ಸಹಕಾರ ಸಂಘದ ಉಚಿತ ಸದಸ್ಯತ್ವ ಮತ್ತಿತರ ಕೊಡುಗೆಗಳು

0

ಕೊಡಗು(ಏ. 24): ಕೊರೊನಾ ಹರಡದಂತೆ ಹಗಲಿರುಳು ದುಡಿಯುತ್ತಿರುವ ಆಶಾ ಕಾರ್ಯಕರ್ತರ ಮೇಲೆ ಸಾಕಷ್ಟು ಕಡೆಗಳಲ್ಲಿ ಹಲ್ಲೆ ನಡೆಯುತ್ತಿದೆ. ಆದ್ರೆ ಕೊಡಗು ಜಿಲ್ಲೆಯ ಕುಶಾಲನಗರದ ಕೃಷಿ ಪತ್ತಿನ ಸಹಕಾರ ಸಂಘವು ಮಾತ್ರ ಇದೇ ಆಶಾ ಕಾರ್ಯಕರ್ತರನ್ನು ಗುರುತಿಸಿ ಗೌರವಿಸುವ ಕೆಲಸ ಮಾಡಿದೆ. ಕುಶಾಲನಗರ ವ್ಯಾಪ್ತಿಯ 32 ಆಶಾ ಕಾರ್ಯಕರ್ತರಿಗೆ ಮತ್ತು ಪೌರಕಾರ್ಮಿಕರಿಗೆ ಸಹಕಾರ ಸಂಘವು ಉಚಿತ ಸದಸ್ಯತ್ವ ನೀಡುವುದಾಗಿ ಘೋಷಿಸಿದೆ.

ತಮ್ಮ ಸಹಕಾರ ಸಂಘಕ್ಕೆ ಆಶಾ ಕಾರ್ಯಕರ್ತೆಯರನ್ನು ಬರಮಾಡಿಕೊಂಡ ಸಂಘದ ಪ್ರಮುಖರು ಅವರಿಗೆ ಗುಲಾಬಿ ಹೂವು ನೀಡಿ ಗೌರವಿಸಿದ್ರು. ಅವರಿಗೆ ಅಗತ್ಯವಾಗಿ ಬೇಕಾಗಿರುವ ಸ್ಯಾನಿಟೈಸರ್, ಸೋಪು, ಮಾಸ್ಕ್, ಟವಲ್ ಸೇರಿದಂತೆ ವಿವಿಧ ವಸ್ತುಗಳಿರುವ ಕಿಟ್ ಅನ್ನು ವಿತರಣೆ ಮಾಡಿದ್ರು. ಅಲ್ಲದೆ ತಾತ್ಕಾಲಿಕ ಖರ್ಚಿಗಾಗಿ ತಲಾ 2,000 ರೂಪಾಯಿ ಹಣ ಕೂಡ ನೀಡಿದ್ರು.

ಇದಲ್ಲದೆ ಕೊರೊನಾ ಅವಧಿ ಮುಗಿದ ನಂತರ ಸಹಕಾರ ಸಂಘದಲ್ಲಿರುವ ಬಡ ಕೂಲಿ ಕಾರ್ಮಿಕರಾಗಿರುವ ಸದಸ್ಯರ ಮಕ್ಕಳಿಗೆ ಶಿಕ್ಷಣಕ್ಕೆ ಅನುಕೂಲವಾಗಲೆಂದು ಒಂದು ವರ್ಷಕ್ಕೆ ಬೇಕಾಗಿರುವ ನೋಟ್ ಪುಸ್ತಕ, ಪೆನ್ನು, ಬ್ಯಾಗ್ ಸೇರಿದಂತೆ ಎಲ್ಲಾ ವಸ್ತುಗಳನ್ನು ವಿತರಣೆ ಮಾಡಲಿದೆ.

Leave A Reply

Your email address will not be published.