ಬೀಜಿಂಗ್, ಡಿಸೆಂಬರ್ 31: ಸ್ವತಂತ್ರ ಟಿಬೆಟ್ ಕುರಿತು ಭಾರತ ಪ್ರತಿಪಾದಿಸಿರುವ ಬೆನ್ನಲ್ಲೇ, 2003ರಲ್ಲಿ ಭಾರತದ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಮತ್ತು ಚೀನಾ ಪ್ರಧಾನಿ ವೆನ್ ಜಿಯಾಬವೊ ಸಹಿ ಹಾಕಿದ್ದ ಘೋಷಣೆಯನ್ನು ಚೀನಾ ನೆನಪಿಸಿದೆ. ಟಿಬೆಟ್ ಸ್ವಾಯತ್ತ ಪ್ರದೇಶವು ಚೀನಾದ ಒಂದು ಭಾಗ ಎಂದು ಭಾರತ ಈಗಾಗಲೇ ಪರಿಗಣಿಸಿದೆ ಎಂದು ಅದು ಹೇಳಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇತ್ತೀಚೆಗೆ ಸಹಿ ಹಾಕಿರುವ ಟಿಬೆಟಿಯನ್ ನೀತಿ ಮತ್ತು ಬೆಂಬಲ ಕಾಯ್ದೆ (ಟಿಪಿಎಸ್ಎ) 2020ಯನ್ನು ಖಂಡಿಸಿ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದ ರಾಯಭಾರ ಕಚೇರಿ ಹೇಳಿಕೆ ಬಿಡುಗಡೆ ಮಾಡಿದೆ. ಟಿಪಿಎಸ್ಎ 2020ಯನ್ನು ಈ ತಿಂಗಳ ಆರಂಭದಲ್ಲಿ ಅನುಮೋದಿಸಿದ್ದ ಅಮೆರಿಕ ಸಂಸತ್ತು, ಚೀನಾದ ಯಾವುದೇ ಹಸ್ತಕ್ಷೇಪವಿಲ್ಲದೆ ಟಿಬೆಟ್ನ ಬೌದ್ಧರಿಗೆ ಮುಂದಿನ ದಲೈಲಾಮಾ ಅವರನ್ನು ಆಯ್ಕೆ ಮಾಡುವ ಹಕ್ಕು ಇದೆ ಎಂದು ಹೇಳಿತ್ತು.
‘2003ರಲ್ಲಿ ಭಾರತ ಮತ್ತು ಚೀನಾಗಳು ಪೀಪಲ್ಸ್ ರಿಪಬ್ಲಿಕನ್ ಆಫ್ ಚೀನಾ ಮತ್ತು ರಿಪಬ್ಲಿಕ್ ಆಫ್ ಇಂಡಿಯಾದ ನಡುವಿನ ಸಂಬಂಧಗಳ ತತ್ವಗಳು ಮತ್ತು ವಿಸ್ತೃತ ಸಹಕಾರ ಘೋಷಣೆಗಳಿಗೆ ಸಹಿ ಹಾಕಿದ್ದವು. ಇದರಲ್ಲಿ, ಕ್ಸಿಜಾಂಗ್ ಸ್ವಾಯತ್ತ ಪ್ರದೇಶವನ್ನು ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ ಪ್ರದೇಶದ ಭಾಗ ಎಂದು ಭಾರತ ಪರಿಗಣಿಸಲಿದೆ ಮತ್ತು ಭಾರತದಲ್ಲಿ ಚೀನಾ ವಿರುದ್ಧ ರಾಜಕೀಯ ಚಟುವಟಿಕೆಗಳನ್ನು ನಡೆಲು ಟಿಬೆಟ್ಟಿಯನ್ನರಿಗೆ ಭಾರತ ಅವಕಾಶ ನೀಡುವುದಿಲ್ಲ ಎಂದು ಹೇಳಲಾಗಿತ್ತು’ ಎಂಬುದಾಗಿ ನವದೆಹಲಿಯಲ್ಲಿನ ಚೀನಾ ರಾಯಭಾರ ಕಚೇರಿ ವಕ್ತಾರ ಜಿ ರಾಂಗ್ ಹೇಳಿದ್ದಾರೆ. ಮುಂದೆ ಓದಿ.