E Commerce: ಸೋಮವಾರದಿಂದ ಆನ್ಲೈನ್ ಶಾಪಿಂಗ್ ಪುನರಾರಂಭ: ಕೇಂದ್ರ ಸರ್ಕಾರ ಅನುಮತಿ
ನವದೆಹಲಿ(ಏ.16): ಕೊರೋನಾ ವೈರಸ್ ತಹಬದಿಗೆ ಬಾರದ ಹಿನ್ನೆಲೆಯಲ್ಲಿ 21 ದಿನಗಳ ಕಾಲ ಜಾರಿಯಲ್ಲಿದ್ದ ಲಾಕ್ಡೌನ್ ಅನ್ನು ಪ್ರಧಾನಿ ನರೇಂದ್ರ ಮೋದಿಯವರ ಆದೇಶದ ಮೇರೆಗೆ ಮೇ 3ರವರೆಗೂ ವಿಸ್ತರಿಸಲಾಗಿದೆ. ಹಾಗಾಗಿ ಶಾಪಿಂಗ್ ಮಾಲ್ಗಳು, ಮುಂಬೈಲ್ ಸ್ಟೋರ್ಗಳು, ಇ-ಕಾಮರ್ಸ್ ಸಂಸ್ಥೆಗಳು ಬಂದ್ ಆಗಿವೆ. ಹಾಗಾಗಿ ಎಲೆಕ್ಟ್ರಾನಿಕ್ ವಸ್ತುಗಳ ಮಾರಾಟವೇ ನಿಂತು ಆಗಿದೆ. ಆದರೀಗ, ಕೇಂದ್ರ ಸರ್ಕಾರವೂ ಇ-ಕಾಮರ್ಸ್ ಸಂಸ್ಥೆಗಳ ಮೂಲಕ ಮತ್ತೆ ಎಲೆಕ್ಟ್ರಾನಿಕ್ ಐಟಮ್ಸ್ಗಳ ಮಾರಾಟಕ್ಕೆ ಅವಕಾಶ ನೀಡಿದೆ. ಇದೇ ಏಪ್ರಿಲ್ 20ನೇ ತಾರೀಕಿನಿಂದ ಆನ್ಲೈನ್ ಮೂಲಕ ಜನ ತಮಗೆ ಅಗತ್ಯವಿರುವ ಎಲೆಕ್ಟ್ರಾನಿಕ್ ವಸ್ತುಗಳು ಪರ್ಚೇಸ್ ಮಾಡಬಹುದಾಗಿದೆ.
ಕೇಂದ್ರ ಸರ್ಕಾರದ ಅನುಮತಿ ಮೇರೆಗೆ ಇದೇ ತಿಂಗಳು 20ನೇ ತಾರೀಕಿನಿಂದ ಇ-ಕಾಮರ್ಸ್ ಸಂಸ್ಥೆಗಳಾದ ಅಮೆಜಾನ್, ಫ್ಲಿಪ್ ಕಾರ್ಟ್ ಮತ್ತು ಸ್ನ್ಯಾಪ್ ಡೀಲ್ಗಳಲ್ಲಿ ಮೊಬೈಲ್ ಫೋನ್, ಟಿವಿ, ರೆಫ್ರಿಜರೇಟರ್, ಲ್ಯಾಪ್ ಟಾಪ್ ಹಾಗೂ ಸ್ಟೇಷನರಿ ವಸ್ತುಗಳನ್ನು ಮಾರಾಟ ಮಾಡಲಾಗುತ್ತದೆ. ಎರಡನೇ ಬಾರಿಗೆ ಲಾಕ್ಡೌನ್ ಅವಧಿಯನ್ನು ಮೇ 3ರವರೆಗೂ ವಿಸ್ತರಿಸಿದ ನಂತರದಲ್ಲಿ ಕೇಂದ್ರ ಗೃಹ ಇಲಾಖೆ ಹೀಗೆ ಆದೇಶಿಸಿದೆ.
ಇನ್ನು, ಕೇಂದ್ರ ಗೃಹ ಇಲಾಖೆ ಕಾರ್ಯದರ್ಶಿ ಅಜಯ್ ಭಲ್ಲಾ ಪರಿಷ್ಕೃತ ಮಾರ್ಗದರ್ಶಿ ಸೂತ್ರಗಳನ್ನು ನೀಡಿದ್ದಾರೆ. ಹಾಗಾಗಿಯೇ ಗೃಹ ಇಲಾಖೆ ಅಧಿಕಾರಿಗಳು ಇ-ಕಾಮರ್ಸ್ ಸಂಸ್ಥೆಗಳ ಮೂಲಕ ಎಲೆಕ್ಟ್ರಾನಿಕ್ ವಸ್ತುಗಳ ಮಾರಾಟಕ್ಕೆ ಏ.20ರಿಂದ ಅವಕಾಶ ಮಾಡಿಕೊಟ್ಟಿದ್ದಾರೆ.
ಇ-ಕಾಮರ್ಸ್ ಸಂಸ್ಥೆಗಳ ಡೆಲಿವರಿ ವಾಹನಗಳ ಸಂಚಾರಕ್ಕೆ ಪೊಲೀಸರಿಂದ ಅನುಮತಿ ಪಡೆಯಬೇಕು. ಆಯಾ ರಾಜ್ಯಗಳ ಪೊಲೀಸ್ ಇಲಾಖೆಯಿಂದ ಪಾಸ್ ಪಡೆದು ಎಲೆಕ್ಟ್ರಾನಿಕ್ ವಸ್ತುಗಳು ಮಾರಾಟ ಮಾಡಬಹುದಾಗಿದೆ.