EBM News Kannada
Leading News Portal in Kannada

ಕೊರೊನಾ: ಏಪ್ರಿಲ್ 30 ರವರೆಗೆ ವಿಮಾನಗಳು ಹಾರಾಡುವುದು ಡೌಟ್

0

ನವದೆಹಲಿ, ಏಪ್ರಿಲ್ 14: ಕೊರೊನಾ ಹಾವಳಿಯಿಂದ ಕಳೆದ 10 ದಿನಗಳಿಂದ ದೇಶಿ ಹಾಗೂ ಅಂತಾರಾಷ್ಟ್ರೀಯ ವಿಮಾನ ಸೇವೆ ಸ್ಥಗೀತಗೊಂಡಿದೆ. ಸದ್ಯಕ್ಕೆ ಕೊರೊನಾ ಹಾವಳಿ ನಿಲ್ಲುವಂತೆ ಕಾಣುತ್ತಿಲ್ಲವಾದ್ದರಿಂದ ಏಪ್ರೀಲ್ 30 ರವರೆಗೆ ಭಾರತದಲ್ಲಿ ವಿಮಾನಗಳು ಹಾರಾಡುವುದಿಲ್ಲ ಎನ್ನಲಾಗಿದೆ.

ಇದಕ್ಕೆ ಪೂರಕವಾಗಿ ಏಪ್ರಿಲ್ 14 ರವರೆಗೆ ಲಾಕ್‌ಡೌನ್ ಜಾರಿಯಲ್ಲಿರುವುದರಿಂದ ಏರ್ ಇಂಡಿಯಾ, ಏಪ್ರಿಲ್ 30 ರವರೆಗೆ ತನ್ನ ಎಲ್ಲಾ ವಿಮಾನಗಳಿಗೆ ಮುಂಗಡ ಟಿಕೆಟ್ ಕಾಯ್ದಿರಿಸುವಿಕೆಯನ್ನು ನಿಲ್ಲಿಸುವು ನಿರ್ಧಾರ ತೆಗೆದುಕೊಂಡಿದೆ.

“ಏರ್ ಇಂಡಿಯಾ ಬುಕಿಂಗ್ ಅನ್ನು ಈಗ ಏಪ್ರಿಲ್ 30 ರವರೆಗೆ ಮುಚ್ಚಲಾಗಿದೆ. ಏಪ್ರಿಲ್ 14 ರ ನಂತರ ಲಾಕ್‌ಡೌನ್‌ ಬಗ್ಗೆ ಸರ್ಕಾರ ಕೈಗೊಳ್ಳುವ ನಿರ್ಧಾರಕ್ಕೆ ನಾವು ಕಾಯುತ್ತಿದ್ದೇವೆ” ಎಂದು ಏರ್ ಇಂಡಿಯಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಒಂದು ವೇಳೆ ಏ 14 ರ ನಂತರ ಲಾಕ್‌ಡೌನ್‌ನಲ್ಲಿ ವಿಮಾನಯಾನಕ್ಕೆ ಅವಕಾಶ ಸಿಕ್ಕರೂ ಆಗ ಪ್ರಯಾಣಕರ ಸಂಖ್ಯೆ ಅತ್ಯಂತ ಕಡಿಮೆ ಇರಲಿದೆ ಎಂದು ಅಂದಾಜಿಸಬಹುದು. ಹೀಗಾಗಿ ಮುಂಗಡ ಟಿಕೆಟ್ ಕಾಯ್ದಿರುಸುವುದನ್ನು ಏಪ್ರಿಲ್ 30 ರವೆರೆಗೆ ತಡೆಹಿಡಿಯುವುದೇ ಸೂಕ್ತ ಎಂಬ ನಿರ್ದಾರ ತೆಗೆದುಕೊಂಡಿದ್ದೇವೆ ಎಂದು ಏರ್ ಇಂಡಿಯಾ ತಿಳಿಸಿದೆ. ಏರ್‌ ಇಂಡಿಯಾ ಸೇರಿದಂತೆ ಇನ್ನುಳಿದ ದೇಶಿ ವಿಮಾನಯಾನ ಸಂಸ್ಥೆಗಳು ಇದೇ ಹಾದಿ ತುಳಿಯಬಹುದು ಎನ್ನಲಾಗಿದೆ.

Leave A Reply

Your email address will not be published.