ಬ್ರಿಟನ್ ನ ಹೌಸ್ ಆಫ್ ಲಾರ್ಡ್ಸ್ ನಿಂದ ಬ್ರೆಕ್ಸಿಟ್ ಮಸೂದೆ ತಿರಸ್ಕೃತ
ಲಂಡನ್: ಬ್ರಿಟನ್ ಪ್ರಧಾನಿ ತೆರೇಸಾ ಮೇ ಅವರ ಮಹತ್ವದ ಬ್ರೆಕ್ಸಿಟ್ ಮಸೂದೆಯನ್ನು ಲಂಡನ್ ನ ಹೌಸ್ ಆಫ್ ಲಾರ್ಡ್ಸ್ ಸೋಮವಾರ ಬಹುಮತದೊಂದಿದೆ ತಿರಸ್ಕರಿಸಿದೆ.
ಒಟ್ಟು 354 ಮತದಾನದ ಪೈಕಿ 235 ಮತಗಳು ಬ್ರೆಕ್ಸಿಟ್ ವಿರುದ್ಧವಾಗಿ ಚಲಾವಣೆಯಾಗಿದ್ದು ಅವರು ಇಯು ಪರವಾದ ಕನ್ಸರ್ವೇಟಿವ್ ಪಕ್ಷದ ಸಂಸದ ಮತ್ತು ಮಾಜಿ ಅಟಾರ್ನಿ ಜನರಲ್ ಡೋಮಿನಿಕ್ ರ ಮಾತುಗಳಿಗೆ ತಾವು ಬೆಲೆ ನಿಡುವುದಾಗಿ ಹೇಳಿದ್ದಾರೆ.
ಬ್ರಿಟೀಷ್ ಸಂಸತ್ತು ಬ್ರೆಕ್ಸಿಟ್ ಬಗೆಗೆ ಏನು ಹೇಳಬೇಕೆಂಬ ಕುರಿತಂತೆ ಸಂಸತ್ ಸದಸ್ಯರು ಬುಧವಾರ ಇನ್ನೊಂದು ಸುತ್ತು ಮತ ಚಲಾಯಿಸುತ್ತಾರೆ. ಹೌಸ್ ಆಫ್ ಲಾರ್ಡ್ಸ್ ನ ಸದಸ್ಯರು ಯುರೋಪಿಯನ್ ಒಕ್ಕೂಟ (ಇಯು)ದೊಂದಿಗೆ ಬ್ರೆಕ್ಸಿಟ್ ಒಪ್ಪಂದದ ಕುರಿತಂತೆ ಅರ್ಥಪೂರ್ಣವಾದ ಮಾತುಕತೆ ಹಾಗೂ ತಿದ್ದುಪಡಿ ಸಂಬಂಧ ಚರ್ಚೆಗೆ ಮುಂದಾಗಿದ್ದಾರೆ ಎಂದು ’ಕ್ಸಿನ್ಹುವಾ ವರದಿ ಮಾಡಿದೆ.
ಮೇ ಮತ್ತು ಅವರ ಮಂತ್ರಿಮಂಡಲ ಸದಸ್ಯರು ಬ್ರೆಕ್ಸಿಟ್ ಬಿಲ್ ಸಂಬಂಧ ಯಾವ ಪ್ರತಿಕ್ರಿಯೆಗಳನ್ನು ನೀಡಲು ಸಿದ್ದರಿಲ್ಲ, ಒಂದೊಮ್ಮೆ ಪ್ರತಿಕ್ರಿಯೆ ನಿಡಿದಲ್ಲಿ ಬ್ರುಸೆಲ್ಸ್ ಅಧಿಕಾರಿಗಳೊಡನೆ ಮಾತುಕತೆ ಕಠಿಣವಾಗಲಿದೆ. ಒಟ್ಟು 22 ಕನ್ಸರ್ವೇಟಿವ್ ಪಕ್ಷದ ಸಂಸದರು ಮೇ ಅವರ ಸರ್ಕಾರದ ವಿರುದ್ಧ ಮತ ಚಲಾಯಿಸಿದ್ದಾರೆ.
ಹೌಸ್ ಆಫ್ ಕಾಮನ್ಸ್ ನಲ್ಲಿ ಮೇ ಸರ್ಕಾರಕ್ಕೆ ಬೆಂಬಲ ನೀಡುವ ಮುನ್ನ ಯುಕೆ ಸರ್ಕಾರ ಮೇ ಅವರೊಡನೆ ಒಪ್ಪಂದ ಮಾಡಿಕೊಂಡಿದ್ದು ಇದೀಗ ಹೌಸ್ ಆಫ್ ಲಾರ್ಡ್ಸ್ ಇದೊಂದು ರಾಷ್ಟ್ರೀಯ ವಿಕೋಪ ಎಂದು ಬಣ್ಣಿಸಿದ್ದು ಸರ್ಕಾರವು ನೀಡಿದ ಭರವಸೆಯು ಬ್ರೆಕ್ಸಿಟ್ ಪರ ಮತಚಲಾವಣೆಗೆ ಪೂರಕವಾಗಿರಲಿಲ್ಲ ಎಂದಿದೆ.
ಯುನೈಟೆಡ್ ಕಿಂಗ್ಡಮ್ ವಿದೇಶಾಂಗ ಕಾರ್ಯದರ್ಶಿ ಬೋರಿಸ್ ಜಾನ್ಸನ್ ಜೂನ್ 6ರಂದು ನಿಡಿದ್ದ ಹೇಳಿಕೆಯೊಂದರಲ್ಲಿ ಬ್ರೆಕ್ಸಿಟ್ ಸಮಸ್ಯೆಗೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಬ್ರಿಟನ್ ಪ್ರಧಾನಿ ಮೇ ಅವರಿಗಿಂತ ಉತ್ತಮ ನಿರ್ವಹಣೆ ತೋರಲಿದ್ದಾರೆ ಎಂದಿದ್ದರು.
ಯುರೋಪಿಯನ್ ಒಕ್ಕೂಟದಿಂದ ಬ್ರಿಟನ್ ಅನ್ನು ಬೇರ್ಪಡಿಸುವ ಪ್ರಕ್ರಿಯೆಗೆ ಬ್ರೆಕ್ಸಿಟ್ ಎಂದು ಕರೆಯಲಾಗುತ್ತದೆ.2016 ರ ಜೂನ್ 23 ರಂದು ನಡೆದ ಜನಾಭಿಪ್ರಾಯ ಸಂಗ್ರಹದಲ್ಲಿ 51.9 ಪ್ರತಿಶತದಷ್ಟು ಯುಕೆ ಮತದಾರರು ಇಯು ನಿಂದ ಹೊರಬರುವುದಕ್ಕೆ ಸಹಮತ ಸೂಚಿಸಿದ್ದರು.