EBM News Kannada
Leading News Portal in Kannada

ನಾಗರಿಕರು ‘ಪ್ರಾಮಾಣಿಕವಾಗಿ’ ತೆರಿಗೆ ಪಾವತಿಸಿದರೆ ತೈಲದ ಆದಾಯದ ಮೇಲೆ ಅವಲಂಬನೆ ತಗ್ಗುತ್ತದೆ: ಅರುಣ್ ಜೇಟ್ಲಿ

0

ನವದೆಹಲಿ: ತೈಲವನ್ನೇ ಆದಾಯ ಮೂಲವಾಗಿ ಅವಲಂಬಿಸುವುದನ್ನು ತಪ್ಪಿಸಲು ತೆರಿಗೆದಾರರು “ಪಾರಾಮಾಣಿಕವಾಗಿ” ತೆರಿಗೆ ಪಾವತಿ ಮಾಡಬೇಕು ಎಂದು ಕೇಂದ್ರ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

ಇದೇ ವೇಳೆ ಪೆಟ್ರೋಲ್ ಹಾಗೂ ಡೀಸಲ್ ಮೇಲಿನ ಎಕ್ಸೈಸ್ ಸುಂಕವನ್ನು ಕಡಿತ ಮಾಡಲಾಗದು ಎಂದು ತಿಳಿಸಿದ ಅವರು ಇದರಿಂದ ಉತ್ಪಾದಕರ ಮೇಲೆ ಹೊಡೆತ ಬೀಳಲಿದೆ ಎಂದಿದ್ದಾರೆ.

“ವೇತನ ಪಡೆಯುವ ವರ್ಗ ತೆರಿಗೆ ಪಾವತಿಯನ್ನು ಮಾಡುವಂತೆ ಇತರೆ ವರ್ಗದ ಜನ ಸಹ ತೆರಿಗೆ ಪಾವತಿಯನ್ನು ಮಾಡಿದಲ್ಲಿ ಭಾರತ “ತೆರಿಗೆ ಸಂಬಂಧಿ ದೂರುಗಳಿಂದ” ಮುಕ್ತವಾಗಲಿದೆ” ಜೇಟ್ಲಿ ಹೇಳಿದ್ದಾರೆ.

“ರಾಜಕೀಯ ನಾಯಕರಿಗೆ, ಆರ್ಥಿಕ ಪರಿಣತರಿಗೆ ನಾನು ಮನವಿ ಮಾಡುವುದೆಂದರೆ ತೈಲದ ಮೇಲಿನ ತೆರಿಗೆ ಆದಾಯದ ಅವಲಂಬನೆ ಕಡಿಮೆಯಾಗಬೇಕು, ಅದಕ್ಕಾಗಿ ತೆರಿಗೆ ತಪ್ಪಿಸುವಿಕೆ ನಿಲ್ಲಬೇಕು. ಜನರು ತಮ್ಮ ತೆರಿಗೆಗಳನ್ನು ಪ್ರಾಮಾಣಿಕವಾಗಿ ಪಾವತಿಸಬೇಕಿದೆ. ಹಾಗಾದಲ್ಲಿ ತೈಲದ ಮೇಲಿನ ಅವಲಂಬನೆ ಕಡಿಮೆಯಾಗಲಿದೆ.”
‘The Economy and the Markets Reward Structural Reforms and Fiscal Prudence’ ಎನ್ನುವ ತಲೆಬರಹದಲ್ಲಿ ಜೇಟ್ಲಿ ತಮ್ಮ ಫೇಸ್ ಬುಕ್ ಕಾತೆಯಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಕಳೆದ ನಾಲ್ಕು ವರ್ಷಗಳಲ್ಲಿ ಕೇಂದ್ರ ಸರ್ಕಾರದ ತೆರಿಗೆ -ಜಿಡಿಪಿ ಅನುಪಾತವು ಶೇಕಡಾ 10 ರಿಂದ 11.5 ಕ್ಕೆ ಏರಿದೆ ಎಂದು ಜೇಟ್ಲಿ ಹೇಳಿದ್ದಾರೆ. ಈ ಪೈಕಿ ಅರ್ಧದಷ್ಟು ಜಿಡಿಪಿ ಯ 0.72 ಶೇಕಡದಷ್ಟು ತೈಲದ ಮೇಲಿನ ತೆರಿಗೆ ಹೊರತಾದ ಅನುಪಾತದಲ್ಲಿ ಹೆಚ್ಚಳಕ್ಕೆ ಕಾರಣವಾಗಿದೆ. 2017-18ರಲ್ಲಿ ಜಿಡಿಪಿ ಪ್ರಮಾಣ 9.8 ಶೇಕಡಾ ಗೆ ತಲುಪಿದ್ದು ಇದು 2007-08ರ ನಂತರದ ಅತ್ಯಧಿಕ ಪ್ರಮಾಣವಾಗಿತ್ತು. ಅಂತರಾಷ್ಟ್ರೀಯ ಮಟ್ಟದ ಕೆಲ ಬದಲಾವಣೆಗಳಿಂದಾಗಿ ಈ ವರ್ಷ ನಮ್ಮ ಆದಾಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ ಎಂದು ಅವರು ಹೇಳಿದ್ದಾರೆ.

Leave A Reply

Your email address will not be published.