EBM News Kannada
Leading News Portal in Kannada

ಕಿಮ್-ಟ್ರಂಪ್ ಐತಿಹಾಸಿಕ ಭೇಟಿ: ಕುತೂಹಲದಿಂದ ನಿದ್ರೆಯೇ ಮಾಡದ ದ.ಕೊರಿಯಾ ಅಧ್ಯಕ್ಷ

0

ಸಿಯೋಲ್: ಅತ್ತ ಸಿಂಗಾಪುರದಲ್ಲಿ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಐತಿಹಾಸಿ ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದರೆ ಇತ್ತ ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್ ಜೇ-ಇನ್ ರಾತ್ರಿ ಇಡೀ ರಾತ್ರಿ ನಿದ್ರೆಯನ್ನೇ ಮಾಡಿಲ್ಲವಂತೆ.

ಹೌದು..ಬರೊಬ್ಬರಿ 7 ದಶಕಗಳ ವೈಷಮ್ಯಕ್ಕೆ ಇಂದು ಸಿಂಗಾಪುರ ಶೃಂಗಸಭೆಯಲ್ಲಿ ತೆರೆ ಎಳೆಯುವ ಪ್ರಯತ್ನ ಮಾಡಲಾಗುತ್ತಿದ್ದು, ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಕ್ಕೆ ವಿದ್ಯುಕ್ತ ಚಾಲನೆ ನೀಡಿದ್ದಾರೆ. ಈ ಐತಿಹಾಸಿಕ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಉತ್ತರ ಕೊರಿಯಾದ ಬದ್ದ ವೈರಿ ಮತ್ತು ಅಮೆರಿಕದ ಸ್ನೇಹ ರಾಷ್ಟ್ರ ದಕ್ಷಿಣ ಕೊರಿಯಾ ತುದಿಗಾಲಲ್ಲಿ ನಿಂತಿತ್ತು. ಸ್ವತಃ ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್ ಜೇ-ಇನ್ ಈ ಐತಿಹಾಸಿಕ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಇಡೀ ರಾತ್ರಿ ನಿದ್ದೆ ಗೆಟ್ಟಿದ್ದಾರಂತೆ.

ಕಿಮ್ ಜಾಂಗ್ ಉನ್ ಮತ್ತು ಡೊನಾಲ್ಡ್ ಟ್ರಂಪ್ ಐತಿಹಾಸಿಕ ಭೇಟಿಯನ್ನು ದಕ್ಷಿಣ ಕೊರಿಯಾ ಮಾಧ್ಯಮಗಳು ನೇರ ಪ್ರಸಾರ ಮಾಡಿದ್ದು, ಈ ನೇರ ಪ್ರಸಾರ ಮತ್ತು ತತ್ ಕ್ಷಣದ ಸುದ್ದಿಗಳನ್ನು ಅಧ್ಯಕ್ಷ ಮೂನ್ ಜೇ-ಇನ್ ರಾತ್ರಿ ಇಡೀ ನೋಡಿದ್ದಾರೆ. ದಕ್ಷಿಣ ಕೊರಿಯಾ ರಾಜಧಾನಿ ಸಿಯೋಲ್ ನ ಕಚೇರಿಯಲ್ಲಿ ಅಧ್ಯಕ್ಷ ಮೂನ್ ಜೇ-ಇನ್ ರಾತ್ರಿ ಇಡೀ ಶೃಂಗಸಭೆ ಕುರಿತ ನೇರ ಪ್ರಸಾರ ವೀಕ್ಷಿಸುತ್ತಿದ್ದರು ಎಂದು ದಕ್ಷಿಣ ಕೊರಿಯಾ ಅಧ್ಯಕ್ಷರ ಕಚೇರಿ ಮಾಹಿತಿ ನೀಡಿದೆ. ಅಲ್ಲದೆ ಅಧ್ಯಕ್ಷ ನೇರ ಪ್ರಸಾರ ವೀಕ್ಷಿಸುತ್ತಿರುವ ಫೋಟೋವನ್ನು ಕೂಡ ಬಿಡುಗಡೆ ಮಾಡಿದೆ.

ಅಧ್ಯಕ್ಷ ಮೂನ್ ಜೇ-ಇನ್ ಅವರಿಗೆ ಅವರ ಕ್ಯಾಬಿನೆಟ್ ಸಟಿವರು ಕೂಡ ಸಾಥ್ ನೀಡಿದ್ದು, ಪ್ರತೀ 10 ನಿಮಿಷಕ್ಕೊಮ್ಮೆ ಅಧ್ಯಕ್ಷರಿಗೆ ಅಧಿಕಾರಿಗಳು ಮಾಹಿತಿ ನೀಡುತ್ತಿದ್ದರಂತೆ.
ಇನ್ನು ಇದೇ ವಿಚಾರವಾಗಿ ಈ ಹಿಂದೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಕರೆ ಮಾಡಿದ್ದ ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್ ಜೇ ಇನ್ ಅವರು, ಐತಿಹಾಸಿಕ ಶೃಂಗಸಭೆ ಸಂಬಂಧ ಸುಧೀರ್ಘ ಚರ್ಚೆ ನಡೆಸಿದ್ದರು ಎಂದು ಮಾಧ್ಯಮಗಳು ವರದಿ ಮಾಡಿವೆ.

Leave A Reply

Your email address will not be published.