ಜಿ-7 ನಾಯಕರ ಪೋಟೋ ವೈರಲ್: ಟ್ರಂಪ್ ವಿವರಣೆ
ಸೆಂತೊಸಾ: ಜಿ-7 ರಾಷ್ಟ್ರಗಳ ಶೃಂಗಸಭೆ ವೇಳೆಯಲ್ಲಿ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಜರ್ಮನಿಯ ಛಾನ್ಸಲರ್ ಏಂಜೆಲಾ ಮಾರ್ಕೆಲ್ ಅವರ ದೇಹಭಾಷೆಯ ಪೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇವರಿಬ್ಬರ ನಡುವೆ ಅತಿ ಸಲುಗೆ ಇರುವಂತೆ ಈ ಪೋಟೋದಲ್ಲಿ ಕಂಡುಬಂದಿತ್ತು.
ಪೋಟೋದಲ್ಲಿರುವಂತೆ ಡೊನಾಲ್ಡ್ ಟ್ರಂಪ್, ಕೆಳಗಡೆಯ ಕುರ್ಚಿಯೊಂದರ ಮೇಲೆ ಕೈ ಕಟ್ಟಿ ಕುಳಿತಿದ್ದು, ಮಾರ್ಕೆಲ್ ನಿಂತಿದ್ದಾರೆ. ವಿವಿಧ ರಾಷ್ಟ್ರಗಳ ಮುಖಂಡರು ಸಹ ನಿಂತಿದ್ದು, ಟ್ರಂಪ್ ಅವರ ಕಣ್ಣುಗಳು ಹೊಳೆಯುವಂತೆ ಭಾಸವಾಗುತ್ತಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆ ನಡೆದಿತ್ತು.
ಸಿಂಗಾಪುರದಲ್ಲಿ ಸೆಂತೊಸಾದಲ್ಲಿಂದು ಈ ಪೋಟೋ ಕುರಿತಂತೆ ಮಾತನಾಡಿದ ಡೊನಾಲ್ಡ್ ಟ್ರಂಪ್, ಜಿ-7 ಉತ್ತಮ ಸ್ನೇಹಿತರಾಗಿದ್ದು, ಕಳೆದ ವಾರ ಉತ್ತಮ ಮಾತುಕತೆ ನಡೆದಿದೆ. ಆ ರಾಷ್ಟ್ರಗಳ ನಾಯಕರಿಂದ ನಾವೆಲ್ಲರೂ ಅನುಕೂಲ ಪಡೆದುಕೊಂಡಿರುವುದಾಗಿ ತಿಳಿಸಿದರು.
ಶೃಂಗಸಭೆ ಗುಂಪಿನ ಪಠ್ಯಕ್ಕಾಗಿ ನಾಯಕರು ಕಾಯುತ್ತಿದ್ದರು, ಹಾಗೆಯೇ ಮಾತನಾಡುತ್ತಿದ್ದೆವು. ಯಾವುದೇ ಸಂಬಂಧವಿಲ್ಲದ ವಿಷಯದ ಕುರಿತಂತೆ ಎಲ್ಲಾ ನಾಯಕರು ಮಾತನಾಡುತ್ತಿದ್ದೇವು. ಜಸ್ಟಿನ್ ಹಾಗೂ ಮಾರ್ಕೆಲ್ ಅವರೊಂದಿಗೆ ನಾನು ಉತ್ತಮ ಸಂಬಂಧ ಹೊಂದಿದ್ದೇನೆ. ಆದರೆ, ಜರ್ಮನಿ ಜಿಡಿಪಿಯ ಶೇ. 1 ರಷ್ಟನ್ನು ನ್ಯಾಟೋಗೆ ನೀಡುತ್ತದೆ ಎಂದು ಟ್ರಂಪ್ ವಿವರಿಸಿದರು.