ಪೆಟ್ರೋಲ್ ದರ ಲೀಟರ್ ಗೆ 6 ಪೈಸೆ, ಡೀಸೆಲ್ 5 ಪೈಸೆ ಇಳಿಕೆ
ನವದೆಹಲಿ: ಕೇಂದ್ರ ಸರ್ಕಾರಿ ಸ್ವಾಮ್ಯದ ತೈಲ ಕಂಪೆನಿಗಳು ಶುಕ್ರವಾರ ಮತ್ತೊಮ್ಮೆ ಇಂಧನ ಬೆಲೆ ಇಳಿಕೆ ಮಾಡಿವೆ. ಪೆಟ್ರೋಲ್ ಬೆಲೆ ಲೀಟರ್ ಗೆ 6 ಪೈಸೆ ಮತ್ತು ಡೀಸೆಲ್ ಬೆಲೆ 5 ಪೈಸೆ ಕಡಿಮೆಯಾಗಿದೆ.
ರಾಜಧಾನಿ ದೆಹಲಿಯಲ್ಲಿ ಇಂದು ಪೆಟ್ರೋಲ್ ಬೆಲೆ ಲೀಟರ್ ಗೆ 78 ರೂಪಾಯಿ 29 ಪೈಸೆ ಮತ್ತು ಡೀಸೆಲ್ ಬೆಲೆ ಲೀಟರ್ ಗೆ 69 ರೂಪಾಯಿ 20 ಪೈಸೆಯಷ್ಟಾಗಿದೆ.
ಸತತ 16 ದಿನಗಳವರೆಗೆ ಏರಿಕೆ ಕಂಡಿದ್ದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇದೀಗ ಕಳೆದ ಮೂರು ದಿನಗಳಿಂದ ಇಳಿಕೆಯಾಗುತ್ತಿದೆ.
ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಇಂದು ಪೆಟ್ರೋಲ್ ಬೆಲೆ ಲೀಟರ್ ಗೆ 79 ರೂಪಾಯಿ 57 ಪೈಸೆ ಮತ್ತು ಡೀಸೆಲ್ ಬೆಲೆ ಲೀಟರ್ ಗೆ 70 ರೂಪಾಯಿ 39 ಪೈಸೆಯಷ್ಟಾಗಿದೆ.