ಭಾರತ-ಚೀನಾ ಒಟ್ಟಾಗಿ ಕೆಲಸ ಮಾಡಿದರೆ ವಿಶ್ವದ ಭವಿಷ್ಯ ಉಜ್ವಲ: ಪ್ರಧಾನಿ ನರೇಂದ್ರ ಮೋದಿ
ಸಿಂಗಾಪುರ: ಭಾರತ ಹಾಗೂ ಚೀನಾ ಪರಸ್ಪರ ನಂಬಿಕೆ, ವಿಶ್ವಾಸದಿಂದ ಒಟ್ಟಾಗಿ ಕೆಲಸ ಮಾಡಿದ್ದಾಗ ಏಷ್ಯಾ ಮತ್ತು ವಿಶ್ವ ಉಜ್ವಲ ಭವಿಷ್ಯ ಹೊಂದಲು ಸಾಧ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಸಿಂಗಾಪುರದ ಶಾಂಘ್ರಿ ಲಾ ದಲ್ಲಿ ಮಾತನಾಡಿದ ನರೇಂದ್ರಮೋದಿ, ವಿವಾದಾತ್ಮಕ ವಿಷಯಗಳಲ್ಲಿ ಭಾರತ ಹಾಗೂ ಚೀನಾ ದೂರದೃಷ್ಟಿ ಹಾಗೂ ಆಲೋಚನಾತ್ಮಾಕ ನಿರ್ಧಾರ ಕೈಗೊಳ್ಳುವ ಮೂಲಕ ಗಡಿ ಪ್ರದೇಶದಲ್ಲಿ ಶಾಂತಿ ನೆಲೆಸುವಂತೆ ಮಾಡಲಾಗಿದೆ ಎಂದು ತಿಳಿಸಿದರು.
ಏಷ್ಯಾದ “ಪೈಪೋಟಿಯು” ಈ ಪ್ರದೇಶವನ್ನು ಮತ್ತೆ ಹಿಡಿದಿಟ್ಟುಕೊಳ್ಳುತ್ತದೆ ಮತ್ತು ಏಷ್ಯಾದ ಸಹಕಾರವು ಶತಮಾನವನ್ನು ರೂಪಿಸುತ್ತದೆ ಎಂದು ಅವರು ಪ್ರತಿಪಾದಿಸಿದ್ದಾರೆ.”ಇದು ವಿಭಜನೆ ಮತ್ತು ಒಟ್ಟಿಗೆ ಕೆಲಸ ಮಾಡಲು ಪೈಪೋಟಿಗಿಂತ ಹೆಚ್ಚಾಗಲು ನಮಗೆ ಸಮನ್ವಯಗೊಳಿಸುತ್ತದೆ” ಎಂದು ಪ್ರಧಾನಿ ಹೇಳಿದರು.
ಪ್ರಾದೇಶಿಕ ಜಲಮಾರ್ಗದ ಬಗ್ಗೆ ಮಾತನಾಡಿದ ಮೋದಿ, ಇಂಡೋ- ಫೆಸಿಪಿಕ್ ವಲಯ ಸೇರಿದಂತೆ ಎಲ್ಲಾ ಕಡೆ ಮುಕ್ತವಾಗಿ ಸಂಚರಿಸಲು ಅವಕಾಶವಿದೆ. “ಭಾರತವು ಮುಕ್ತ, ಅಂತರ್ಗತ ಇಂಡೋ-ಪೆಸಿಫಿಕ್ ಪ್ರದೇಶವನ್ನು ಪ್ರತಿನಿಧಿಸುತ್ತದೆ, ಇದು ಪ್ರಗತಿ ಮತ್ತು ಸಮೃದ್ಧಿಯ ಸಾಮಾನ್ಯ ಅನ್ವೇಷಣೆಯಲ್ಲಿ ನಮ್ಮನ್ನು ತಬ್ಬಿಕೊಳ್ಳುತ್ತದೆ” ಎಂದರು.
ವುಹಾನ್ ನಲ್ಲಿ ಏಪ್ರಿಲ್ ತಿಂಗಳ ಕೊನೆ ವಾರದಲ್ಲಿ ಪ್ರಧಾನಿ ನರೇಂದ್ರಮೋದಿ ಹಾಗೂ ಚೀನಾ ಅಧ್ಯಕ್ಷ ಕ್ಸಿ- ಜಿನ್ ಪಿಂಗ್ ಔಪಾಚಾರಿಕ ಸಭೆ ನಡೆಸಿ, ಉಭಯ ದೇಶಗಳ ನಡುವಿನ ಬಾಂಧವ್ಯ ವೃದ್ದಿ ಬಲವರ್ದನೆ ಕುರಿತಂತೆ ಮಾತುಕತೆ ನಡೆಸಿದ್ದರು.