ಹೊಸ ಕಾರುಗಳ ಮಾರಾಟ ಮತ್ತು ಅಭಿವೃದ್ಧಿಗಾಗಿ ಒಂದಾದ ಟೊಯೊಟಾ ಮತ್ತು ಸುಜುಕಿ
ಜಪಾನ್ ಮೂಲದ ವಾಹನ ಉತ್ಪಾದನಾ ದಿಗ್ಗಜರಾದ ಸುಜುಕಿ ಮೋಟಾರ್ಸ್ ಮತ್ತು ಟೊಯೊಟಾ ಮೋಟಾರ್ಸ್ ಸಂಸ್ಥೆಗಳು ಹೊಸ ಕಾರುಗಳ ಉತ್ಪಾದನೆಗಾಗಿ ಕೈಜೋಡಿಸಿದ್ದು, ಸಹಭಾಗಿತ್ವದ ಆಧಾರದ ಮೇಲೆ ಹೊಸ ಕಾರು ಉತ್ಪನ್ನಗಳನ್ನು ಅಭಿವೃದ್ಧಿ ಮಾಡುವ ಬೃಹತ್ ಯೋಜನೆಗೆ ಚಾಲನೆ ನೀಡಲು ಮುಂದಾಗಿವೆ.
ಕಳೆದ ವರ್ಷ ಫೆಬ್ರುವರಿಯಲ್ಲಿಯೇ ಟೊಯೊಟಾ ಮತ್ತು ಸುಜುಕಿ ಮೋಟಾರ್ಸ್ ಜಂಟಿಯಾಗಿ ಕಾರು ಉತ್ಪಾದಿಸುವ ಬಗ್ಗೆ ಮಾತುಕತೆ ನಡೆಸಿದ್ದವು. ಆದ್ರೆ ಕಾರಣಾಂತರಗಳಿಂದ ಹೊಸ ಯೋಜನೆಯ ಬಗ್ಗೆ ತಟಸ್ಥವಾಗಿದ್ದ ಎರಡು ಸಂಸ್ಥೆಗಳು ಇದೀಗ ಮಹತ್ವದ ನಿರ್ಣಯಕ್ಕೆ ಬಂದಿದ್ದು, ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಗಾಗಿ ಹೊಸ ಒಪ್ಪಂದ ಮಾಡಿಕೊಂಡಿವೆ.

ಹೀಗಾಗಿ ಸುಜುಕಿ ಡೀಲರ್ಸ್ ಗಳಲ್ಲಿ ಟೊಯೊಟಾ ಉತ್ಪನ್ನಗಳು ಮತ್ತು ಟೊಯೊಟಾ ಡೀಲರ್ಸ್ ಗಳಲ್ಲಿ ಸುಜುಕಿ ಕಾರು ಉತ್ಪನ್ನಗಳು ದೊರೆಯಲಿದ್ದು, ಇದು ಕಾರು ಮಾರಾಟ ಜಾಲವನ್ನು ವಿಸ್ತರಿಸುವ ಉದ್ದೇಶದಿಂದ ಇಂತದೊಂದು ಒಪ್ಪಂದ ಮಾಡಿಕೊಂಡಿವೆ. ಇನ್ನು ಟೊಯೊಟಾ ಸಂಸ್ಥೆಯು ಸುಜುಕಿ ನಿರ್ಮಾಣದ ವಿಟಾರಾ ಬ್ರೆಝಾ ಮತ್ತು ಬಲೆನೊ ಕಾರುಗಳನ್ನ ಮಾರಾಟ ಮಾಡಲಿದ್ದು, ಸುಜುಕಿ ಸಂಸ್ಥೆಯು ಟೊಯೊಟಾ ಕರೊಲ್ಲಾ ಸೆಡಾನ್ ಕಾರುಗಳನ್ನು ಮಾರಾಟ ಮಾಡಲು ನಿರ್ಧರಿಸಿವೆ.
ಜೊತೆಗೆ ಕಾರುಗಳ ಇಂಧನ ಕಾರ್ಯಕ್ಷಮತೆ ಮತ್ತು ಕಾರುಗಳ ಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಕಾರುಗಳ ಬಿಡಿಭಾಗಗಳನ್ನು ಸಹ ಒದಗಿಸುವ ಒಪ್ಪಂದಕ್ಕೂ ಉಭಯ ಸಂಸ್ಥೆಗಳು ಮುಂದಾಗಿದ್ದು, ಭಾರತದಲ್ಲಿ ಆರಂಭಗೊಂಡಿರುವ ಮೆಕ್ ಇನ್ ಇಂಡಿಯಾ ಯೋಜನೆ ಅಡಿ ಹೊಸ ಕಾರುಗಳ ಉತ್ಪಾದನೆಯನ್ನು ಆರಂಭಿಸಲಿವೆ.
2020ರ ವೇಳೆಗೆ ಹೊಸ ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆಗೊಳಿಸುವ ಸಾಧ್ಯತೆಗಳಿದ್ದು, ಮಧ್ಯಮ ಗಾತ್ರದ ಬಜೆಟ್ ನಲ್ಲಿ ಉತ್ತಮ ಎಲೆಕ್ಟ್ರಿಕ್ ಕಾರುಗಳನ್ನು ಅಭಿವೃದ್ಧಿಗೊಳಿಸುವ ಬಗ್ಗೆಯು ಹೊಸ ಸಂಶೋಧನೆಗಳನ್ನು ನಡೆಸಲಿದೆ. ಒಟ್ಟಿನಲ್ಲಿ ಕಾರು ಉತ್ಪಾದಕ ದಿಗ್ಗಜರು ಇದೀಗ ಒಂದಾಗಿದ್ದು, ಹೊಸ ಉತ್ಪನ್ನಗಳ ಮೂಲಕ ಭಾರತೀಯ ಮಾರುಕಟ್ಟೆಯಲ್ಲಿ ಮತ್ತೊಮ್ಮೆ ಸದ್ದು ಮಾಡಲಿವೆ.
ಜೊತೆಗೆ ಭಾರತೀಯ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಮತ್ತಷ್ಟು ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ಕಾರುಗಳ ರಸ್ತೆಗಿಳಿಯಲಿವೆ.