17-09-2024 4:10AM IST
/
No Comments /
Posted In: Latest News, Live News, Astro
ಪ್ರತಿ ಅಡುಗೆ ಮನೆಯಲ್ಲೂ ಏಲಕ್ಕಿ ಇದ್ದೇ ಇರುತ್ತೆ. ಆಹಾರ ಸ್ವಾದವನ್ನು ಹೆಚ್ಚಿಸುವ ಈ ಸಣ್ಣ ಏಲಕ್ಕಿ ದೊಡ್ಡ ದೊಡ್ಡ ಮ್ಯಾಜಿಕ್ ಮಾಡಬಲ್ಲದು. ಏಲಕ್ಕಿ ನಿಮ್ಮ ಸುಖ-ಸಮೃದ್ಧಿ ಜೀವನಕ್ಕೆ ಸಹಕಾರಿ. ಅದ್ರಲ್ಲಡಗಿರುವ ಶಕ್ತಿ ಕೇಳಿದ್ರೆ ಆಶ್ಚರ್ಯವಾಗೋದು ಗ್ಯಾರಂಟಿ.
ಸುಂದರ ಹಾಗೂ ಗುಣವಂತ ಸಂಗಾತಿ ಬೇಕೆಂದಾದಲ್ಲಿ ಗುರುವಾರ ಬೆಳಿಗ್ಗೆ ಐದು ಏಲಕ್ಕಿಯನ್ನು ಹಳದಿ ಬಟ್ಟೆಯಲ್ಲಿ ಸುತ್ತಿ ಬಡವರಿಗೆ ದಾನ ಮಾಡಬೇಕು.
ಸದಾ ಪರ್ಸ್ ನಲ್ಲಿ ಹಣ ತುಂಬಿರಬೇಕೆಂದು ಬಯಸುವವರು ಪರ್ಸ್ ನಲ್ಲಿ ಐದು ಏಲಕ್ಕಿಯನ್ನಿಟ್ಟುಕೊಳ್ಳಿ.
ನೌಕರಿಯಲ್ಲಿ ಯಶಸ್ಸು ಸಿಗ್ತಾ ಇಲ್ಲ ಎಂದಾದ್ರೆ ರಾತ್ರಿ ಮಲಗುವ ಮೊದಲು ಹಸಿರು ಬಟ್ಟೆಯಲ್ಲಿ ಸ್ವಲ್ಪ ಏಲಕ್ಕಿಯನ್ನು ದಿಂಬಿನ ಕೆಳಗೆ ಇಡಿ. ಬೆಳಿಗ್ಗೆ ಹೊರಗಿನ ವ್ಯಕ್ತಿಗೆ ನೀಡಿ.
ಅಭ್ಯಾಸದಲ್ಲಿ ಹಿನ್ನಡೆಯಾಗ್ತಿದ್ದರೆ ಅಥವಾ ಅಭ್ಯಾಸಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆ ಕಾಣಿಸಿಕೊಂಡರೂ ಹಾಲಿಗೆ ಏಲಕ್ಕಿಯನ್ನು ಹಾಕಿ 7 ಸೋಮವಾರ ಬಡವರಿಗೆ ಕುಡಿಯಲು ಕೊಡಿ.
ಸ್ವಲ್ಪ ನೀರಿಗೆ ಏಲಕ್ಕಿಯನ್ನು ಹಾಕಿ ಕುದಿಸಿ. ನೀರು ಅರ್ಧವಾಗುವವರೆಗೆ ಕುದಿಸಿ ಅದನ್ನು ಸ್ನಾನ ಮಾಡುವ ನೀರಿಗೆ ಬೆರೆಸಿ ಸ್ನಾನ ಮಾಡುವುದರಿಂದ ರೋಗ ನಿರ್ಮೂಲನೆಯಾಗುತ್ತದೆ. ಜೊತೆಗೆ ದುಃಖ ಕಡಿಮೆಯಾಗಿ ಸಂತೋಷ ಪ್ರಾಪ್ತಿಯಾಗುತ್ತದೆ.