22-05-2024 5:20PM IST
/
No Comments /
Posted In: Featured News, Live News, Entertainment
ಭರತ್ ಬಾಬು ಎಲ್ ನಿರ್ದೇಶಿಸಿ ನಿರ್ಮಾಣ ಮಾಡಿರುವ ‘ಸಲ್ಯೂಟ್’ ಚಿತ್ರದ ಅಪ್ಪ ಅಪ್ಪ ಎಂಬ ಎಮೋಷನಲ್ ಹಾಡನ್ನು ಯುಟ್ಯೂಬ್ ನಲ್ಲಿ ಬಿಡುಗಡೆ ಮಾಡಲಾಗಿದ್ದು, ಗಾನಪ್ರಿಯರ ಗಮನ ಸೆಳೆದಿದೆ. ಈ ಹಾಡಿಗೆ ರಮೇಶ್ಚಂದ್ರ ಧ್ವನಿಯಾಗಿದ್ದು, ರಾಜ್ ಭಾಸ್ಕರ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ನಿರ್ದೇಶಕ ಭರತ್ ಬಾಬು ಸಾಹಿತ್ಯ ಬರೆದಿದ್ದಾರೆ.
ಈ ಚಿತ್ರವನ್ನು ಶ್ರೀ ಬಾಲಾಜಿ ಈಶ್ವರ್ ಕ್ರಿಯೇಶನ್ಸ್ ಬ್ಯಾನರ್ ನಲ್ಲಿ ನಿರ್ಮಾಣ ಮಾಡಲಾಗಿದ್ದು, ಮಾಸ್ಟರ್ ಪರಿಣಿತ್ ಸೇರಿದಂತೆ ಎಂ. ಶಿವ ಕಾರ್ತಿಕ್, ಕಾರ್ತಿಕ್ ತಳಕಲ್, ಕಪ್ಪೆರಾಯ (ಫಕ್ಕೀರಪ್ಪ ದೊಡ್ಡಮನಿ), ಶಿಲ್ಪಾ ನಾಯ್ಕ್, ನವ್ಯ ಶ್ರೀ, ಗೀತಾ, ಭರತ್ ಬಾಬು ಎಲ್ ಮತ್ತು ಪುರುಷೋತ್ತಮ್ ತಾರಾ ಬಳಗದಲ್ಲಿದ್ದಾರೆ. ಪ್ರವೀಣ್ ನೃತ್ಯ ನಿರ್ದೇಶನ, ಆರ್ಮುಗಂ ಸಾಹಸ ನಿರ್ದೇಶನ, ಚನ್ನಕೇಶವ ಛಾಯಾಗ್ರಹಣವಿದೆ.