BREAKING: ಕಾಡಾನೆ ದಾಳಿಗೆ ರೈತ ಬಲಿ: ವಾರದಲ್ಲಿ ಎರಡನೇ ಘಟನೆ | Kannada Dunia | Kannada News | Karnataka News
14-04-2024 8:17AM IST
/
No Comments /
Posted In: Karnataka, Latest News, Live News
ಕೋಲಾರ: ಪೋಲೇನಹಳ್ಳಿಯಲ್ಲಿ ಕಾಡಾನೆ ದಾಳಿಯಿಂದ ರೈತ ಸಾವನ್ನಪ್ಪಿದ್ದಾರೆ. ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ಪೋಲೇನಹಳ್ಳಿಯಲ್ಲಿ ಘಟನೆ ನಡೆದಿದೆ.
45 ವರ್ಷದ ನಾರಾಯಣಸ್ವಾಮಿ ಕಾಡಾನೆ ದಾಳಿಯಿಂದ ಸಾವನ್ನಪ್ಪಿದವರು ಎಂದು ಹೇಳಲಾಗಿದೆ. ತರಕಾರಿ ತರಲು ಬಂಗಾರಪೇಟೆಗೆ ಹೋಗುವಾಗ ಆನೆ ದಾಳಿ ನಡೆಸಿದೆ. ಕಳೆದೊಂದು ವಾರದಲ್ಲಿ ಕಾಡಾನೆ ದಾಳಿಗೆ ಎರಡನೇ ಸಾವಿನ ಪ್ರಕರಣ ಇದಾಗಿದೆ. ಕಾಮಸಮುದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.