ಶಾರ್ಟ್ ಸರ್ಕ್ಯೂಟ್‌ನಿಂದ ಮನೆಗೆ ಬೆಂಕಿ: ಹಾಸಿಗೆಯಲ್ಲಿದ್ದ ವೃದ್ಧೆ ಸಜೀವ ದಹನ | Kannada Dunia | Kannada News | Karnataka News
29-02-2024 8:48PM IST
/
No Comments /
Posted In: Latest News, India, Live News
ಗ್ವಾಲಿಯರ್(ಮಧ್ಯಪ್ರದೇಶ): ದಾರುಣ ಘಟನೆಯೊಂದರಲ್ಲಿ ಗ್ವಾಲಿಯರ್‌ನ ಕಂಪು ಪ್ರದೇಶದಲ್ಲಿ ವಾಸಿಸುತ್ತಿದ್ದ 70 ವರ್ಷದ ಮಹಿಳೆಯೊಬ್ಬರು ತಮ್ಮ ಮನೆಯಲ್ಲೇ ಸಜೀವ ದಹನವಾದ ಘಟನೆ ಬುಧವಾರ ನಡೆದಿದೆ.
ವೃದ್ಧೆ ಅಸ್ವಸ್ಥರಾಗಿದ್ದು ಹಾಸಿಗೆಯಲ್ಲೇ ಮಲಗಿ ವಿಶ್ರಾಂತಿ ಪಡೆಯುತ್ತಿದ್ದರು. ಏಕಾಏಕಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿ ಆಹುತಿಯಾಗಿದ್ದಾರೆ. ಮಹಿಳೆಯೂ ವಿದ್ಯುತ್ ಸ್ಪರ್ಶಕ್ಕೊಳಗಾದರು ಮತ್ತು ಕೆಲವೇ ನಿಮಿಷಗಳಲ್ಲಿ ಇಡೀ ಕೋಣೆ ಬೆಂಕಿಯಿಂದ ಆವೃತವಾಗಿತ್ತು. ಇಡೀ ದೇಹವು ಸುಟ್ಟುಹೋದಾಗ ಎದ್ದೇಳಲು ಸಹ ಸಾಧ್ಯವಾಗಲಿಲ್ಲ. ಚಿಂತಾಜನಕ ಸ್ಥಿತಿಯಲ್ಲಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಉಳಿಸಲಾಗಲಿಲ್ಲ. ಕಂಪು ಠಾಣೆ ಪೊಲೀಸರು ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ. ಬಳಿಕ ಮಹಿಳೆಯ ಶವವನ್ನು ಕುಟುಂಬಸ್ಥರು ಅಂತ್ಯಸಂಸ್ಕಾರ ಮಾಡಿದ್ದಾರೆ.