ಉತ್ತಮ ನಡತೆಗಾಗಿ ಜೈಲಿಂದ ಬಿಡುಗಡೆಯಾದ ಅತ್ಯಾಚಾರ ಆರೋಪಿಯಿಂದ ಮತ್ತೆ ರೇಪ್ | Kannada Dunia | Kannada News | Karnataka News
17-08-2023 7:27PM IST
/
No Comments /
Posted In: Latest News, India, Live News
ಸತ್ನಾ(ಮಧ್ಯಪ್ರದೇಶ): ಜೈಲು ಶಿಕ್ಷೆಯಿಂದ ಮುಕ್ತಿ ಪಡೆದು ಬಿಡುಗಡೆಗೊಂಡ 35 ವರ್ಷದ ಅತ್ಯಾಚಾರ ಆರೋಪಿಯೊಬ್ಬ ಬುಧವಾರ ಮಧ್ಯಪ್ರದೇಶದ ಸತ್ನಾ ಜಿಲ್ಲೆಯಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದಾನೆ.
ಆರೋಪಿಯನ್ನು ಸಾತ್ನಾದ ಕೃಷ್ಣ ನಗರ ಪ್ರದೇಶದ ನಿವಾಸಿ ರಾಕೇಶ್ ವರ್ಮಾ(35) ಎಂದು ಗುರುತಿಸಲಾಗಿದೆ. ಬಾಲಕಿಯ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ರೇವಾ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.
ನಗರ ಪೊಲೀಸ್ ಅಧೀಕ್ಷಕ(CSP) ಮಹೇಂದ್ರ ಸಿಂಗ್ ಚೌಹಾಣ್ ಮಾಹಿತಿ ನೀಡಿ, 12 ವರ್ಷಗಳ ಹಿಂದೆ ವರ್ಮಾ ಅಪ್ರಾಪ್ತ ಬಾಲಕಿಯ ಮೇಲೆ(ಸುಮಾರು ನಾಲ್ಕೂವರೆ ವರ್ಷ ವಯಸ್ಸಿನ) ಅತ್ಯಾಚಾರವೆಸಗಿದ್ದ. ನಂತರ ಆತನಿಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. ಆರೋಪಿಯು ಕೇವಲ 7 ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸಿದ್ದು, ಉಳಿದ ಮೂರು ವರ್ಷಗಳ ಜೈಲು ಶಿಕ್ಷೆಯನ್ನು ಅವನ ಉತ್ತಮ ನಡವಳಿಕೆಯ ನಂತರ ಕ್ಷಮಿಸಿ ಬಿಡುಗಡೆ ಮಾಡಲಾಗಿತ್ತು.
ಆರೋಪಿ ರಾಕೇಶ್ ವರ್ಮಾ ಬುಧವಾರ ಸಂಜೆ 5 ಗಂಟೆ ಸುಮಾರಿಗೆ ಜಿಲ್ಲೆಯ ಜಗತ್‌ದೇವ್ ತಲಾಬ್ ಪ್ರದೇಶದಿಂದ ಬಾಲಕಿಯನ್ನು ತನ್ನೊಂದಿಗೆ ಕರೆದೊಯ್ದಿದ್ದಾನೆ. ವಿಷಯ ತಿಳಿದು ಅಪ್ರಾಪ್ತ ಬಾಲಕಿಯನ್ನು ಹುಡುಕಿದಾಗ ಆರೋಪಿಗಳು ಆಕೆಯ ಮೇಲೆ ಅತ್ಯಾಚಾರವೆಸಗಿರುವುದು ಪತ್ತೆಯಾಗಿದೆ.
ಅಪ್ರಾಪ್ತಿಯನ್ನು ಆಸ್ಪತ್ರೆಗೆ ಕರೆತರಲಾಗಿದ್ದು, ಪ್ರಾಥಮಿಕ ಚಿಕಿತ್ಸೆ ನಂತರ ಹೆಚ್ಚಿನ ಚಿಕಿತ್ಸೆಗಾಗಿ ರೇವಾಗೆ ಸೂಚಿಸಲಾಗಿದೆ. ಈ ಸಂಬಂಧ ಪೊಲೀಸರು ಸೂಕ್ತ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.