EBM News Kannada
Leading News Portal in Kannada

ಕಡಿಮೆ ಆಗುತ್ತಾ ಬ್ಯಾಂಕ್ ಸಾಲದ ಬಡ್ಡಿದರ? ಆರ್​ಬಿಐ ಎಂಪಿಸಿ ಸಭೆಯ ನಿರ್ಧಾರದಿಂದ ಸಾಲದ ಇಎಂಐ ಮೇಲೇನು ಪರಿಣಾಮ? – Kannada News | Will Home Loan Rates Come Down? Know The Effects Of RBI MPC Decision On Repo Rate

0


RBI MPC Decision on Repo Rate: ಭಾರತಿಯ ರಿಸರ್ವ್ ಬ್ಯಾಂಕ್​ನ ಹಣಕಾಸು ನೀತಿ ಸಮಿತಿಯ ದ್ವೈಮಾಸಿಕ ಸಭೆಯಲ್ಲಿ ರೆಪೋ, ರಿವರ್ಸ್ ರೆಪೋ ಇತ್ಯಾದಿ ಬೆಂಚ್​ಮಾರ್ಕ್ ದರಗಳನ್ನು ಏರಿಸದೇ ಇರಲು ನಿರ್ಧರಿಸಿದೆ. ಇದರಿಂದ ಬ್ಯಾಂಕ್ ಸಾಲದ ಮೇಲಿನ ಬಡ್ಡಿದರ ಹೆಚ್ಚಳವಾಗುವ ಸಾಧ್ಯತೆ ಕಡಿಮೆ. ಸಾಲದ ದರಗಳು ಕಡಿಮೆ ಆಗುವ ನಿರೀಕ್ಷೆ ಇದೆ.

ಕಡಿಮೆ ಆಗುತ್ತಾ ಬ್ಯಾಂಕ್ ಸಾಲದ ಬಡ್ಡಿದರ? ಆರ್​ಬಿಐ ಎಂಪಿಸಿ ಸಭೆಯ ನಿರ್ಧಾರದಿಂದ ಸಾಲದ ಇಎಂಐ ಮೇಲೇನು ಪರಿಣಾಮ?

ಬ್ಯಾಂಕ್ ಸಾಲ

ನವದೆಹಲಿ, ಆಗಸ್ಟ್ 10: ಆರ್​ಬಿಐನ ಎಂಪಿಸಿಯ ದ್ವೈಮಾಸಿಕ ಸಭೆ (RBI MPC Meeting) ಇಂದು ಮುಕ್ತಾಯಗೊಂಡಿದೆ. ಅದರ ನೀತಿಗಳಲ್ಲಿ ಹೆಚ್ಚಿನ ಬದಲಾವಣೆಗಳಾಗಿಲ್ಲ. ಜನಸಾಮಾನ್ಯರಿಗೆ ಬಹಳ ಮುಖ್ಯ ಎನಿಸಿರುವ ರೆಪೋ ದರದಲ್ಲಿ (repo rate) ಯಥಾಸ್ಥಿತಿ ಕಾಯ್ದುಕೊಳ್ಳಲು ನಿರ್ಧರಿಸಲಾಗಿದೆ. ರೆಪೋ ದರ ಶೇ. 6.5ರಲ್ಲಿ ಮುಂದುವರಿಯಲಿದೆ. ಹಿಂದಿನ ಎರಡು ಸಭೆಗಳಲ್ಲೂ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿತ್ತು. ಫೆಬ್ರುವರಿಯಲ್ಲಿ ನಡೆದಿದ್ದ ಎಂಪಿಸಿ ಸಭೆಯಲ್ಲಿ ರೆಪೋ ದರವನ್ನು ಶೇ. 6.25ರಿಂದ ಶೇ. 6.50ಕ್ಕೆ ಏರಿಸಲಾಗಿತ್ತು. ಹಣದುಬ್ಬರ ತುಸು ನಿಯಂತ್ರಣಕ್ಕೆ ಬಂದಿದ್ದರಿಂದ ಫೆಬ್ರುವರಿಯಿಂದ ಈಚೆಗೆ ರೆಪೋ ದರದಲ್ಲಿ ಬದಲಾವಣೆ ಮಾಡಲಾಗಿಲ್ಲ. ಹಾಗೆಯೇ, ರಿವರ್ಸ್ ರೆಪೋ ದರದಲ್ಲೂ ಬದಲಾವಣೆ ಆಗಿಲ್ಲ.

ರೆಪೋ ದರ ಯಥಾಸ್ಥಿತಿಯಿಂದ ಏನು ಪರಿಣಾಮ?

ರೆಪೋ ದರ ಎಂದರೆ ಆರ್​ಬಿಐನ ಬಡ್ಡಿದರ. ಇದನ್ನು ಏರಿಸಿದರೆ ಬ್ಯಾಂಕುಗಳೂ ಗ್ರಾಹಕರಿಗೆ ಬಡ್ಡಿದರ ಹೆಚ್ಚಿಸುವುದು ಅನಿವಾರ್ಯ ಆಗಬಹುದು. ಆರ್​ಬಿಐನ ಬಡ್ಡಿದರ ಕಡಿಮೆ ಆದರೆ ಬ್ಯಾಂಕುಗಳು ಬಡ್ಡಿದರ ಕಡಿಮೆ ಮಾಡುವ ಸಾಧ್ಯತೆ ಅಧಿಕವಾಗಿರುತ್ತದೆ. ಇನ್ನು, ಆರ್​ಬಿಐನ ರೆಪೋ ದರದಲ್ಲಿ ಯಾವುದೇ ಬದಲಾವಣೆ ಆಗದಿದ್ದಾಗ ಬ್ಯಾಂಕುಗಳು ತಮ್ಮ ಅಗತ್ಯಕ್ಕೆ ತಕ್ಕಂತೆ ಬಡ್ಡಿದರ ಏರಿಕೆ ಅಥವಾ ಇಳಿಕೆ ಮಾಡಬಹುದು.

ಸದ್ಯದ ಸನ್ನಿವೇಶದಲ್ಲಿ ಬ್ಯಾಂಕುಗಳು ತಾವು ನೀಡುವ ಸಾಲದ ಮೇಲಿನ ಬಡ್ಡಿದರಗಳನ್ನು ತುಸು ಕಡಿಮೆಗೊಳಿಸುವ ಸಾಧ್ಯತೆ ಇದೆ. ಇದರಿಂದ ಸಾಲದ ಇಎಂಐಗಳ ಮೊತ್ತ ಕಡಿಮೆ ಆಗಬಹುದು.

ಆರ್​ಬಿಐ ನಿರ್ಧಾರದಿಂದ ರಿಯಲ್ ಎಸ್ಟೇಟ್ ವಲಯ ನಿರಾಳ

ರೆಪೋ ದರವನ್ನು ಏರಿಸದೇ ಇರುವ ಆರ್​ಬಿಐ ಎಂಪಿಸಿ ಸಭೆಯ ನಿರ್ಧಾರವನ್ನು ರಿಯಲ್ ಎಸ್ಟೇಟ್ ಉದ್ಯಮ ಸ್ವಾಗತಿಸಿದೆ. ಶೇ. 6.5ರಷ್ಟಿರುವ ರೆಪೋ ದರ ಈಗಾಗಲೇ ಹೆಚ್ಚಿನ ಮಟ್ಟದಲ್ಲಿದೆ. ಇದನ್ನು ಇನ್ನಷ್ಟು ಏರಿಸಿದ್ದರೆ ಮನೆ ಖರೀದಿಸುವವರಿಗೆ ಮತ್ತು ಗೃಹಸಾಲ ಪಡೆಯುವವರಿಗೆ ಅಧೈರ್ಯ ತರುತ್ತಿತ್ತು ಎಂಬುದು ರಿಯಲ್ ಎಸ್ಟೇಟ್ ಉದ್ಯಮದವರ ಅನಿಸಿಕೆ.

2021ರಲ್ಲಿ ಗೃಹಸಾಲಕ್ಕೆ ಸರಾಸರಿ ಬಡ್ಡಿದರ ಶೇ 6.5ರಿಂದ ಶೇ. 7ರಷ್ಟಿತ್ತು. ಈಗ ಅದು ಶೇ. 9ರಿಂದ ಶೇ. 10ರ ಆಸುಪಾಸಲಿನಲ್ಲಿದೆ. ಈ ಬಾರಿ ಆರ್​ಬಿಐ ರೆಪೋ ದರವನ್ನು ಏರಿಸಿದ್ದರೆ ಗೃಹಸಾಲಕ್ಕೆ ಬಡ್ಡಿದರ ಶೇ. 10 ದಾಟಿ ಹೋಗುವ ಸಾಧ್ಯತೆ ಇತ್ತು. ಗ್ರಾಹಕರ ಕೊರತೆ ಅನುಭವಿಸುತ್ತಿರುವ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಇದರಿಂದ ಇನ್ನಷ್ಟು ಸಂಕಷ್ಟ ಏರ್ಪಡುವ ಸಾಧ್ಯತೆ ಇತ್ತು.

ತಾಜಾ ಸುದ್ದಿ

Leave A Reply

Your email address will not be published.