EBM News Kannada
Leading News Portal in Kannada

ಲಿವಿಂಗ್ ರೂಂ ಮತ್ತು ಮೊಬೈಲ್- ಭಾರತದಲ್ಲಿ ಯೂಟ್ಯೂಬ್​ಗೆ ಮುನ್ನಡೆ ತರುವ ಅಂಶಗಳು – Kannada News | Youtube Says Video Consumption Through TV Screens and Short Videos Drive Growth In India

0


Youtube and India: ಭಾರತದಲ್ಲಿ 2017ರಲ್ಲಿ 12.2 ಕೋಟಿ ಇದ್ದ ಯೂಟ್ಯೂಬ್ ಬಳಕೆದಾರರ ಸಂಖ್ಯೆ 2022ರಲ್ಲಿ 56.7 ಕೋಟಿಗೆ ಹೆಚ್ಚಾಗಿದೆ. ಮನೆಯಲ್ಲಿರುವ ಟಿವಿ ಸ್ಕ್ರೀನ್​ಗಳಲ್ಲಿ ಯೂಟ್ಯೂಬ್ ನೋಡುವವರ ಸಂಖ್ಯೆ ಹೆಚ್ಚುತ್ತಿದೆ. ಯೂಟ್ಯೂಬ್ ವಿಡಿಯೋಗಳು ಮೊಬೈಲ್​ನಲ್ಲಿ ತಯಾರುತ್ತಿರುವುದು ಹೆಚ್ಚಿದೆ.

ವಿಶ್ವದ ಅತಿದೊಡ್ಡ ವಿಡಿಯೋ ಸ್ಟ್ರೀಮಿಂಗ್ ಪ್ಲಾಟ್​ಫಾರ್ಮ್ ಎನಿಸಿರುವ ಯೂಟ್ಯೂಬ್ (YouTube) ಭಾರತದಲ್ಲಿ ಭರ್ಜರಿ ನೆಲೆ ಕಂಡುಕೊಂಡಿದೆ. ಅದರ ಬಹುಪಾಲು ವಿಡಿಯೋಗಳ ವೀಕ್ಷಣೆ ಭಾರತದಲ್ಲಿ ಆಗುತ್ತದೆ. ಗೂಗಲ್ ಮಾಲಕತ್ವದ ಯೂಟ್ಯೂಬ್ ಇತ್ತೀಚೆಗೆ ಬಿಡುಗಡೆ ಮಾಡಿದ ವರದಿಯೊಂದರಲ್ಲಿ ಕೆಲ ಕುತೂಹಲದ ಅಂಶಗಳು ವ್ಯಕ್ತವಾಗಿವೆ. ಭಾರತದಲ್ಲಿ ಕಳೆದ ಐದಾರು ವರ್ಷದಲ್ಲಿ ಯೂಟ್ಯೂಬ್ ಅಗಾಧವಾಗಿ ಬೆಳೆದಿದೆ. ಕನೆಕ್ಟೆಡ್ ಟಿವಿ ಸ್ಕ್ರೀನ್​ನಲ್ಲಿ (Connected TV Screen) ಯೂಟ್ಯೂಬ್ ಬಳಕೆ ಗಣನೀಯವಾಗಿ ಹೆಚ್ಚಿದೆ. ಯೂಟ್ಯೂಬ್ ಶಾರ್ಟ್ಸ್ ಕೂಡ ಅದ್ವಿತೀಯವಾಗಿ ಜನಪ್ರಿಯತೆ ಗಳಿಸಿವೆ. ಇವೆರಡು ಅಂಶಗಳು ಭಾರತದಲ್ಲಿ ಯೂಟ್ಯೂಬ್ ಅನ್ನು ಮುನ್ನಡೆಸುತ್ತವೆ ಎಂದು ಆ ಸಂಸ್ಥೆ ಹೇಳಿಕೊಂಡಿದೆ.

‘ಲಿವಿಂಗ್ ರೂಂ ಸ್ಕ್ರೀನ್​ಗಳಲ್ಲಿ ಈಗ ಹೆಚ್ಚೆಚ್ಚು ಯೂಟ್ಯೂಬ್ ನೋಡಲಾಗುತ್ತಿದೆ. ಮೊಬೈಲ್ ಸಾಧನಗಳಲ್ಲಿ ಹೆಚ್ಚೆಚ್ಚು ವಿಡಿಯೋಗಳು ತಯಾರಾಗುತ್ತಿವೆ. 2022ರಲ್ಲಿ ಯೂಟ್ಯೂಬ್ ವೀಕ್ಷಣೆಯ ಸ್ಥಳಗಳ ಪೈಕಿ ಅತಿಹೆಚ್ಚು ಬೆಳವಣಿಗೆಯಾಗಿದ್ದು ಲಿವಿಂಗ್ ರೂಂ’ ಎಂದು ಯೂಟ್ಯೂಬ್​ನ ಇಂಡಿಯಾ ಡೈರೆಕ್ಟರ್ ಇಶಾನ್ ಜಾನ್ ಚಟರ್ಜಿ ಆಗಸ್ಟ್ 9ರಂದು ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಭಾರತದಲ್ಲಿ ಯೂಟ್ಯೂಬ್ ಬಳಕೆದಾರರ ಸಂಖ್ಯೆ 50 ಕೋಟಿಗೂ ಹೆಚ್ಚು

ಭಾರತದಲ್ಲಿ ಯೂಟ್ಯೂಬ್ ಬಳಕೆದಾರರ ಸಂಖ್ಯೆ 2017ರಲ್ಲಿ 12.2 ಕೊಟಿಯಷ್ಟಿತ್ತು. 2022ರಲ್ಲಿ ಇದರ ಸಂಖ್ಯೆ 56.7 ಕೋಟಿ ಆಗಿದೆ. ಐದು ವರ್ಷದಲ್ಲಿ 44 ಕೋಟಿಗೂ ಹೆಚ್ಚು ಮಂದಿ ಹೊಸ ಯೂಟ್ಯೂಬ್ ಬಳಕೆದಾರರು ಸೃಷ್ಟಿಯಾಗಿದ್ದಾರೆ. ಅಷ್ಟರಮಟ್ಟಿಗೆ ಯೂಟ್ಯೂಬ್ ಅಗಾಧವಾಗಿ ಬೆಳೆದಿದೆ.

ಯೂಟ್ಯೂಬ್​ಗೆ ಅತಿಹೆಚ್ಚು ಬಳಕೆದಾರರು ಇರುವ ದೇಶ ಭಾರತವೇ. ಯೂಟ್ಯೂಬ್​ನಲ್ಲಿ ಅತಿಹೆಚ್ಚು ವೀಕ್ಷಕರು ಇರುವ ಮತ್ತು ಸಬ್​ಸ್ಕ್ರೈಬರ್​ಗಳು ಇರುವ 10 ಚಾನಲ್​ಗಳಲ್ಲಿ ಭಾರತದ ಟಿ ಸೀರೀಸ್, ಎಸ್​ಇಟಿ ಇಂಡಿಯಾ ಮತ್ತು ಝೀ ಮ್ಯೂಸಿಕ್ ಒಳಗೊಂಡಿವೆ.

15 ವರ್ಷದ ಹಿಂದೆ ಭಾರತದಲ್ಲಿ ವಿಡಿಯೋ ಎಂಬುದು ಒಂದೇ ಸ್ವರೂಪದ್ದಾಗಿರುತ್ತಿತ್ತು. ಈಗ ವಿವಿಧ ಸ್ವರೂಪಗಳ ವಿಡಿಯೋಗಳನ್ನು ಜನರು ಇಷ್ಟಪಡುತ್ತಾರೆ. ದೀರ್ಘ ಅವಧಿಯ ವಿಡಿಯೋ, ಅಲ್ಪ ಅವಧಿಯ ಶಾರ್ಟ್ಸ್ ವಿಡಿಯೋ, ಪ್ರೀ ರೆಕಾರ್ಡೆಡ್ ವಿಡಿಯೋ, ಕನೆಕ್ಟೆಡ್ ಟಿವಿ ಸ್ಕ್ರೀನ್ ಹೀಗೆ ನಾನಾ ರೀತಿಯಲ್ಲಿ ವಿಡಿಯೋಗಳನ್ನು ನೋಡಲು ಜನರು ಬಯಸುತ್ತಾರೆ.

ಯೂಟ್ಯೂಬ್​ನಿಂದ ಬಳಕೆದಾರರಿಗೂ ಆದಾಯಸೃಷ್ಟಿ

ಯೂಟ್ಯೂಬ್ ಮೂಲಕ ಬಹಳಷ್ಟು ಮಂದಿ ಹಣ ಸಂಪಾದನೆ ಮಾಡುತ್ತಿರುವುದು ಬಹುಶಃ ಎಲ್ಲರಿಗೂ ಗೊತ್ತಿರಬಹುದು. ಇವತ್ತು ಯೂಟ್ಯೂಬ್​ನಲ್ಲಿ ಭಾರತೀಯರು ಹಾಕುವ ವಿಡಿಯೋ ಕೇವಲ ಭಾರತದ ಮಾರುಕಟ್ಟೆಗೆ ಸೀಮಿತವಾಗದೇ ಬೇರೆ ಬೇರೆ ಕಡೆ ವಿಸ್ತರಣೆಗೊಂಡಿದೆ. ಯೂಟ್ಯೂಬ್​ನ ಆಂತರಿಕ ದತ್ತಾಂಶದ ಪ್ರಕಾರ ಭಾರತದ ಚಾನಲ್​ಗಳು ತಯಾರಿಸುವ ವಿಡಿಯೋಗಳ ಒಟ್ಟಾರೆ ವೀಕ್ಷಣೆ ಅವಧಿಯಲ್ಲಿ ಶೇ. 15ಕ್ಕಿಂತಲೂ ಹೆಚ್ಚು ಭಾಗವು ದೇಶದ ಹೊರಗಿನಿಂದ ಬರುತ್ತದಂತೆ.

ತಾಜಾ ಸುದ್ದಿ

Leave A Reply

Your email address will not be published.