Gold Silver Price on 09 August: ಭಾರತ ಹಾಗೂ ವಿದೇಶಗಳಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ಇಳಿಕೆ; ಇಲ್ಲಿದೆ ಇತ್ತೀಚಿನ ದರಗಳ ಪಟ್ಟಿ – Kannada News | Gold Prices August 9th 2023, See Today’s Gold Silver Rates In Bengaluru And Other Places
Bullion Market 2023, August 9th: ಭಾರತದಲ್ಲಿ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 55,050 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 60,060 ರುಪಾಯಿ ಇದೆ. ಬೆಳ್ಳಿ ಬೆಲೆ ಒಂದು ಗ್ರಾಮ್ಗೆ 74 ರು ಆಗಿದೆ. ಯಾವ್ಯಾವ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ದರ ಎಷ್ಟಿದೆ, ಡೀಟೇಲ್ಸ್ ನೋಡಿ.
ಬೆಂಗಳೂರು, ಆಗಸ್ಟ್ 9: ಚಿನ್ನ ಮತ್ತು ಬೆಳ್ಳಿ ಬೆಲೆಗಳು (Gold Rates) ಕಡಿಮೆಗೊಳ್ಳುತ್ತಿವೆ. ಡಾಲರ್ ಮೌಲ್ಯ ವೃದ್ಧಿಸುತ್ತಿರುವಂತೆಯೇ ಈ ಅಮೂಲ್ಯ ಲೋಹಗಳಿಗೆ ಬೇಡಿಕೆ ತುಸು ತಗ್ಗಿದೆ. ಯುಎಇ ಸೇರಿದಂತೆ ಕೆಲವಾರು ದೇಶಗಳಲ್ಲಿ ಚಿನ್ನದ ಬೆಲೆ ಇಳಿಕೆಯಾಗಿದೆ. ಭಾರತದ ವಿವಿಧೆಡೆಯೂ ನಿರೀಕ್ಷೆಯಂತೆ ಚಿನ್ನದ ದರ ತಗ್ಗಿದೆ. ಬೆಳ್ಳಿ ಬೆಲೆಯೂ ಕಡಿಮೆ ಆಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 55,050 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 60,060 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 7,400 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 55,050 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 7,300 ರುಪಾಯಿಯಲ್ಲಿ ಇದೆ.
ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಆಗಸ್ಟ್ 9ಕ್ಕೆ):
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 55,050 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 60,060 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 740 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 55,050 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 60,060 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 730 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
- ಬೆಂಗಳೂರು: 55,050 ರೂ
- ಚೆನ್ನೈ: 55,400 ರೂ
- ಮುಂಬೈ: 55,050 ರೂ
- ದೆಹಲಿ: 55,200 ರೂ
- ಕೋಲ್ಕತಾ: 55,050 ರೂ
- ಕೇರಳ: 55,050 ರೂ
- ಅಹ್ಮದಾಬಾದ್: 55,100 ರೂ
- ಜೈಪುರ್: 55,200 ರೂ
- ಲಕ್ನೋ: 55,200 ರೂ
- ಭುವನೇಶ್ವರ್: 55,050 ರೂ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ):
- ಮಲೇಷ್ಯಾ: 2,830 ರಿಂಗಿಟ್ (51,517 ರುಪಾಯಿ)
- ದುಬೈ: 2167.50 ಡಿರಾಮ್ (48,903 ರುಪಾಯಿ)
- ಅಮೆರಿಕ: 595 ಡಾಲರ್ (49,226 ರುಪಾಯಿ)
- ಸಿಂಗಾಪುರ: 808 ಸಿಂಗಾಪುರ್ ಡಾಲರ್ (49,620 ರುಪಾಯಿ)
- ಕತಾರ್: 2,235 ಕತಾರಿ ರಿಯಾಲ್ (50,873 ರೂ)
- ಓಮನ್: 236.50 ಒಮಾನಿ ರಿಯಾಲ್ (50,910 ರುಪಾಯಿ)
- ಕುವೇತ್: 186 ಕುವೇತಿ ದಿನಾರ್ (50,094 ರುಪಾಯಿ)
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ)
- ಬೆಂಗಳೂರು: 7,300 ರೂ
- ಚೆನ್ನೈ: 7,730 ರೂ
- ಮುಂಬೈ: 7,400 ರೂ
- ದೆಹಲಿ: 7,400 ರೂ
- ಕೋಲ್ಕತಾ: 7400 ರೂ
- ಕೇರಳ: 7,730 ರೂ
- ಅಹ್ಮದಾಬಾದ್: 7,400 ರೂ
- ಜೈಪುರ್: 7,400 ರೂ
- ಲಕ್ನೋ: 7,400 ರೂ
- ಭುವನೇಶ್ವರ್: 7,730 ರೂ
ಅಮೆರಿಕದಲ್ಲಿ ಬ್ಯಾಂಕ್ ಬಡ್ಡಿ ದರ ಏರಿಕೆ ಆಗಬಹುದು ಎಂಬ ಭೀತಿ ಈ ಚಿನ್ನದ ಬೆಲೆ ಇಳಿಕೆಗೆ ಎಡೆ ಮಾಡಿಕೊಟ್ಟಿದೆ. ತಜ್ಞರ ಅಂದಾಜಿನ ಪ್ರಕಾರ ಚಿನ್ನದ ಬೆಲೆ ಈಗ ಇಳಿಯುತ್ತಿದೆಯಾದರೂ ಮುಂಬರುವ ದಿನಗಳಲ್ಲಿ ಮತ್ತೆ ಏರಿಕೆಯ ಹಾದಿ ಹಿಡಿಯುವ ನಿರೀಕ್ಷೆ ಇದೆ. ಮುಂದಿನ ವರ್ಷದಲ್ಲಿ ಚಿನ್ನದ ಬೆಲೆ 70,000 ರೂ ಗಡಿ ದಾಟಬಹುದು ಎನ್ನಲಾಗುತ್ತಿದೆ.
(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)