EBM News Kannada
Leading News Portal in Kannada

2,000 ರೂ ನೋಟು ವಿನಿಮಯಕ್ಕೆ ಸೆಪ್ಟೆಂಬರ್ 30 ಕೊನೆಯ ದಿನ; ಬ್ಯಾಂಕುಗಳು ಯಾವ್ಯಾವಾಗ ಮುಚ್ಚಿರುತ್ತೆ ತಿಳಿದಿರಿ – Kannada News | Rs 2,000 Note Exchange Time Till September 30, Know Bank Holidays List To Go For Note Exchange

0


Bank Holidays Till September: ಆರ್​ಬಿಐ 2,000 ರೂ ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆದು ಎರಡು ತಿಂಗಳಿಗೂ ಹೆದ್ಚು ಕಾಲವಾಗಿದೆ. ಸೆಪ್ಟೆಂಬರ್ 30ರವರೆಗೂ ಬ್ಯಾಂಕುಗಳಲ್ಲಿ ಈ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ಅವಕಾಶ ಇದೆ. ಈ ನಿಟ್ಟಿನಲ್ಲಿ ಅಲ್ಲಿಯವರೆಗೆ ಬ್ಯಾಂಕುಗಳ ರಜಾದಿನಗಳೆಂದು ಎಂಬ ಮಾಹಿತಿ ಇಲ್ಲಿದೆ.

ಬೆಂಗಳೂರು, ಆಗಸ್ಟ್ 8: ಭಾರತೀಯ ರಿಸರ್ವ್ ಬ್ಯಾಂಕ್ (RBI) ತನ್ನ 2,000 ರೂ ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯುವ ನಿರ್ಧಾರವನ್ನು ಮೇ 19ರಂದು ಘೋಷಿಸಿತ್ತು. 2,000 ರೂ ನೋಟುಗಳನ್ನು ಹೊಂದಿರುವವರು ಬ್ಯಾಂಕುಗಳಲ್ಲಿ ಅವುಗಳನ್ನು ವಿನಿಮಯ (Note Exchange) ಮಾಡಿಕೊಳ್ಳಲು ತಿಳಿಸಲಾಗಿದೆ. ಜುಲೈ ತಿಂಗಳ ಅಂತ್ಯದೊಳಗೆ ಶೇ. 88ರಷ್ಟು ಪ್ರಮಾಣದಲ್ಲಿ ನೋಟುಗಳು ಮರಳಿವೆ ಎಂದು ಆರ್​ಬಿಐ ಮಾಹಿತಿ ನೀಡಿದೆ. ಅಂದರೆ ಇನ್ನೂ ಶೇ. 10ಕ್ಕಿಂತ ಹೆಚ್ಚು ನೋಟುಗಳು ಬ್ಯಾಂಕುಗಳಿಗೆ ಮರಳಿಲ್ಲದಿರುವುದು ಈ ಅಂಕಿ ಅಂಶದಿಂದ ಕಂಡುಬರುತ್ತದೆ. ಬಹಳ ಮಂದಿ ಬಳಿ 2,000 ರೂ ನೋಟುಗಳ ಸಂಗ್ರಹ ಇನ್ನೂ ಇರಬಹುದು.

ಸೆಪ್ಟೆಂಬರ್ 30ರವರೆಗೂ ಈ ನೋಟುಗಳನ್ನು ಬ್ಯಾಂಕುಗಳಲ್ಲಿ ವಿನಿಮಯ ಮಾಡಿಕೊಳ್ಳಲು ಅವಕಾಶ ಕೊಡಲಾಗಿದೆ. ಅದಾದ ಬಳಿಕ ನೋಟು ಅಸಿಂಧುಗೊಳ್ಳುವುದಿಲ್ಲ ಎಂದು ಆರ್​ಬಿಐ ಹೇಳಿದೆಯಾದರೂ, ಆ ನೋಟು ನಿರುಪಯುಕ್ತವಾಗುತ್ತದಾ ಎಂಬುದು ಸ್ಪಷ್ಟಗೊಂಡಿಲ್ಲ. ಸೆಪ್ಟಂಬರ್ 30 ರ ಬಳಿಕ ಆರ್​ಬಿಐ ಈ ಬಗ್ಗೆ ಸ್ಪಷ್ಟನೆ ನೀಡಬಹುದು. ಅದೇನೇ ಇದ್ದರೂ 2,000 ರೂ ನೋಟು ವಿನಿಮಯಕ್ಕೆ ಇನ್ನೂ ಒಂದೂವರೆ ತಿಂಗಳಿಗೂ ಹೆಚ್ಚು ಕಾಲಾವಕಾಶ ಇದೆ. ಸೆಪ್ಟಂಬರ್ 30ರವರೆಗೆ ಬ್ಯಾಂಕುಗಳಿಗೆ ಯಾವ್ಯಾವಾಗ ರಜಾ ದಿನಗಳೆಂದು ತಿಳಿಯುವುದು ಈ ಸಂದರ್ಭದಲ್ಲಿ ಉಚಿತವೆನಿಸಬಹುದು.

ಕರ್ನಾಟಕದಲ್ಲಿ ಆಗಸ್ಟ್ ತಿಂಗಳಲ್ಲಿ ಇರುವ ಬ್ಯಾಂಕ್ ರಜೆಗಳು

ಆಗಸ್ಟ್ 6: ಭಾನುವಾರ

ಆಗಸ್ಟ್ 12: ಶನಿವಾರ

ಆಗಸ್ಟ್ 13: ಭಾನುವಾರ

ಆಗಸ್ಟ್ 15: ಸ್ವಾತಂತ್ರ್ಯ ದಿನ

ಆಗಸ್ಟ್ 20: ಭಾನುವಾರ

ಆಗಸ್ಟ್ 26: ಶನಿವಾರ

ಆಗಸ್ಟ್ 27: ಭಾನುವಾರ

ಕರ್ನಾಟಕದಲ್ಲಿ ಸೆಪ್ಟಂಬರ್ ತಿಂಗಳಲ್ಲಿ ಇರುವ ಬ್ಯಾಂಕ್ ರಜೆಗಳು

ಈ ತಿಂಗಳು ದೇಶಾದ್ಯಂತ ಒಟ್ಟು 17 ದಿನಗಳು ಬ್ಯಾಂಕುಗಳಿಗೆ ರಜೆ ಇರಲಿದೆ. ಕರ್ನಾಟಕದಲ್ಲಿ 8 ದಿನಗಳು ರಜೆ ಇದೆ. ರಾಜ್ಯದಲ್ಲಿ ಯಾವ್ಯಾವ ದಿನಗಳು ರಜೆ ಇರುತ್ತವೆ ಎಂಬ ಪಟ್ಟಿ ಇಲ್ಲಿದೆ…

ಸೆಪ್ಟಂಬರ್ 3: ಭಾನುವಾರ

ಸೆಪ್ಟಂಬರ್ 9: ಶನಿವಾರ

ಸೆಪ್ಟಂಬರ್ 10: ಭಾನುವಾರ

ಸೆಪ್ಟಂಬರ್ 17: ಭಾನುವಾರ

ಸೆಪ್ಟಂಬರ್ 19: ಗಣಪತಿ ಹಬ್ಬ

ಸೆಪ್ಟಂಬರ್ 23: ಶನಿವಾರ

ಸೆಪ್ಟಂಬರ್ 24: ಭಾನುವಾರ

ಸೆಪ್ಟಂಬರ್ 28: ಈದ್ ಮಿಲಾದ್

ತಾಜಾ ಸುದ್ದಿ

Leave A Reply

Your email address will not be published.