EBM News Kannada
Leading News Portal in Kannada

ವೆಹಿಕಲ್ ಇನ್ಷೂರೆನ್ಸ್; ಬಹಳ ಸುಲಭವಾದ ಕ್ಯಾಷ್​ಲೆಸ್ ಕ್ಲೈಮ್ ಸೆಟಲ್ಮೆಂಟ್ ಸೌಲಭ್ಯ ಬಳಸಿ – Kannada News | Vehicle Insurance, Know About Cashless Claim Settlement Facility

0


Motor Insurance Cashless Settlement: ಮೋಟಾರ್ ಇನ್ಷೂರೆನ್ಸ್​ನಲ್ಲಿ ಕ್ಯಾಷ್ಲೆಸ್ ಕ್ಲೈಮ್ ಸೆಟಲ್ಮೆಂಟ್ ಸೌಲಭ್ಯ ಇದ್ದು, ಯಾವ ರಗಳೆ ಇಲ್ಲದೇ ಅದನ್ನು ಬಳಸಿಕೊಳ್ಳಬಹುದು. ಹಾನಿಯಾದ ನಿಮ್ಮ ಕಾರಿನ ದುರಸ್ತಿ ವೆಚ್ಚ ಬಹುತೇಕ ಇನ್ಷೂರೆನ್ಸ್ ಕಂಪನಿಯೇ ಭರಿಸುತ್ತದೆ.

ವೆಹಿಕಲ್ ಇನ್ಷೂರೆನ್ಸ್; ಬಹಳ ಸುಲಭವಾದ ಕ್ಯಾಷ್​ಲೆಸ್ ಕ್ಲೈಮ್ ಸೆಟಲ್ಮೆಂಟ್ ಸೌಲಭ್ಯ ಬಳಸಿ

ಕಾರ್ ಇನ್ಷೂರೆನ್ಸ್

ಮೆಡಿಕಲ್ ಇನ್ಷೂರೆನ್ಸ್​ನಲ್ಲಿರುವಂತೆ ಕ್ಯಾಷ್ಲೆಸ್ ಕ್ಲೈಮ್ ವ್ಯವಸ್ಥೆ (Cashless Claim Settlement) ಮೋಟಾರ್ ಇನ್ಷೂರೆನ್ಸ್​ನಲ್ಲಿಯೂ ಇರುವುದು ಹೆಚ್ಚಿನ ಮಂದಿಗೆ ತಿಳಿದಿಲ್ಲದೇ ಇರಬಹುದು. ಕ್ಯಾಷ್​ಲೆಸ್ ಜೊತೆಗೆ ಮಾಮೂಲಿಯ ವಿಧದ ರೀಯಿಂಬುರ್ಸ್ಮೆಂಟ್ ಸೆಟಲ್ಮೆಂಟ್ (Reimbursement) ವ್ಯವಸ್ಥೆಯೂ ಇದೆ. ಹಾನಿಯಾದ ನಿಮ್ಮ ವಾಹನಕ್ಕೆ ಕ್ಯಾಷ್ಲೆಸ್ ಸೆಟಲ್ಮೆಂಟ್ ಮೂಲಕ ಜೇಬಿಂದ ಖರ್ಚಿಲ್ಲದೇ ದುರಸ್ತಿ ಮಾಡಿಸಿಕೊಳ್ಳಬಹುದು. ಕೆಲವೊಮ್ಮೆ ದುರಸ್ತಿ ವೆಚ್ಚದ ಸ್ವಲ್ಪ ಭಾಗವನ್ನು ಕೈಯಿಂದ ಕೊಡಬೇಕಾಗಬಹುದು. ಅದೆಲ್ಲವೂ ನೀವು ಹೊಂದಿರುವ ಮೋಟಾರ್ ಇನ್ಷೂರೆನ್ಸ್ ಮೇಲೆ ಅವಲಂಬಿತವಾಗಿರುತ್ತದೆ.

ಕ್ಯಾಷ್ಲೆಸ್ ಕ್ಲೈಮ್ ಸೆಟಲ್ಮೆಂಟ್​ಗೆ ಏನು ಮಾಡಬೇಕು?

ಅಪಘಾತವೋ ಅಥವಾ ಮತ್ಯಾವುದಾದರೂ ಕಾರಣಕ್ಕೆ ನಿಮ್ಮ ಕಾರಿಗೆ ಹಾನಿಯಾಗಿದ್ದಲ್ಲಿ ಮೊದಲು ಈ ಘಟನೆ ಬಗ್ಗೆ ಇನ್ಷೂರೆನ್ಸ್ ಕಂಪನಿಗೆ ಮಾಹಿತಿ ನೀಡಿ. ಕಂಪನಿಯ ಆ್ಯಪ್ ಅಥವಾ ಟಾಲ್ ಫ್ರೀ ನಂಬರ್ ಮೂಲಕ ವಿವರ ನೀಡಬಹುದು. ಬಳಿಕ ಇನ್ಷೂರೆನ್ಸ್ ಕಂಪನಿ ನಿಗದಿಪಡಿಸಿದ ಸಮೀಪದ ಗ್ಯಾರೇಜ್​ಗೆ ಕಾರನ್ನು ಸಾಗಿಸಬೇಕು. ಅದರ ರಿಪೇರಿ ಖರ್ಚನ್ನು ವಿಮಾ ಸಂಸ್ಥೆಯೇ ಭರಿಸುತ್ತದೆ.

ಕೆಲವೊಮ್ಮೆ ಇನ್ಷೂರೆನ್ಸ್ ಕಂಪನಿಯೇ ನಿಮ್ಮ ವಾಹನ ಸಾಗಿಸಲು ವ್ಯವಸ್ಥೆ ಮಾಡಬಹುದು. ದುರಸ್ತಿಯ ಪೂರ್ಣ ವೆಚ್ಚ, ವಾಹನ ಸಾಗಣೆ ವೆಚ್ಚ ಎಲ್ಲವನ್ನೂ ಇನ್ಷೂರೆನ್ಸ್ ಕಂಪನಿಯೇ ಭರಿಸಬಹುದು. ನೀವು ಇನ್ಷೂರೆನ್ಸ್ ಮಾಡಿಸುವಾಗ ಯಾವೆಲ್ಲಾ ಸೌಲಭ್ಯ ಇದೆ ಎಂಬುದನ್ನು ಕೂಲಂಕಷವಾಗಿ ಪರಿಶೀಲಿಸಿ. ಕೆಲ ಪಾಲಿಸಿಗಳಲ್ಲಿ ವಾಹನ ಸಾಗಣೆ ವೆಚ್ಚವು ಲೆಕ್ಕಕ್ಕೆ ಇರುವುದಿಲ್ಲ. ಶೂನ್ಯ ಸವಕಳಿ ಪಾಲಿಸಿ ಅಥವಾ ಝೀರೋ ಡಿಪ್ರಿಶಿಯೇಶನ್ ಅಂಶವನ್ನು ಇನ್ಷೂರೆನ್ಸ್ ಒಳಗೊಂಡಿದ್ದರೆ ನಿಮ್ಮ ಕಾರಿನ ದುರಸ್ತಿಗೆ ನಿಮಗಾಗುವ ವೆಚ್ಚ ಶೂನ್ಯದ್ದಾಗಿರುತ್ತದೆ.

ಮೋಟಾರ್ ಇನ್ಷೂರೆನ್ಸ್ ನೀಡುವ ಕಂಪನಿ ವಿವಿಧ ಗ್ಯಾರೇಜ್​ಗಳೊಂದಿಗೆ ಟಯಪ್ ಹೊಂದಿರುತ್ತದೆ. ಆ ಗ್ಯಾರೇಜ್​ಗೆ ಕಾರು ಕೊಂಡೊಯ್ದರೆ ಸುಲಭವಾಗಿ ಕ್ಯಾಷ್ಲೆಸ್ ಸೆಟಲ್ಮೆಂಟ್ ಆಗುತ್ತದೆ. ಇನ್ಷೂರೆನ್ಸ್ ಕಂಪನಿ ನೇಮಿಸಿದ ಸರ್ವೇಯರ್​ವೊಬ್ಬರು ಗ್ಯಾರೇಜ್​ಗೆ ಬಂದು ವಾಹನವನ್ನು ಪರಿಶೀಲಿಸಿ ಹೋಗುತ್ತಾರೆ. ಆ ಬಳಿಕ ಗ್ಯಾರೇಜ್​ನವರು ದುರಸ್ತಿ ಮಾಡುತ್ತಾರೆ. ರಿಪೇರಿ ಆದ ಬಳಿಕ ಸರ್ವೇಯರ್ ಮತ್ತೊಮ್ಮೆ ಬಂದು ಮರುಪರಿಶೀಲನೆ ನಡೆಸುತ್ತಾರೆ. ಅಂತಿಮ ಬಿಲ್ ಅನ್ನು ಸೆಟಲ್ ಮಾಡಲಾಗುತ್ತದೆ.

ಒಂದು ವೇಳೆ ಇನ್ಷೂರೆನ್ಸ್ ಕಂಪನಿ ನಿಗದಿಪಡಿಸಿದ ಗ್ಯಾರೇಜ್​ನಲ್ಲಿ ವಾಹನ ದುರಸ್ತಿ ಬೇಡವೆನಿಸಿದರೆ ಬೇರೆ ಗ್ಯಾರೇಜ್​ನಲ್ಲೂ ಮಾಡಿಸಬಹುದು. ಆಗ ಅದು ಕ್ಯಾಷ್ಲೆಸ್ ಸೆಟಲ್ಮೆಂಟ್ ಸಾಧ್ಯವಾಗುವುದಿಲ್ಲ. ಹಾನಿಯಾದ ಕಾರಿನ ಭಾಗಗಳ ಫೋಟೋ ತೆಗೆದು ಆ್ಯಪ್​ಗೆ ಹಾಕಬೇಕು. ಆ ಬಳಿಕ ಇನ್ಷೂರೆನ್ಸ್ ಕಂಪನಿ ನಿಮ್ಮ ಕ್ಲೈಮ್ ಅನ್ನು ಕೂಡಲೇ ಸೆಟಲ್ ಮಾಡುತ್ತದೆ. ಬಳಿಕ ನೀವು ನಿಮ್ಮಿಷ್ಟದ ಗ್ಯಾರೇಜ್​ಗೆ ತೆಗೆದುಕೊಂಡು ಹೋಗಿ ರಿಪೇರಿ ಮಾಡಿಸಬಹುದು.

ತಾಜಾ ಸುದ್ದಿ

Leave A Reply

Your email address will not be published.