EBM News Kannada
Leading News Portal in Kannada

ಫೋನ್ ಪೇ, ಗೂಗಲ್ ಪೇಯನ್ನು ಬೈಪಾಸ್ ಮಾಡುವ ಹೊಸ ಯುಪಿಐ ಪ್ಲಗಿನ್; ಆನ್​ಲೈನ್ ವರ್ತಕರಿಗೊಂದು ಹೊಸ ಸೌಲಭ್ಯ – Kannada News | PhonePe, Google Pay Worried Over New UPI Plugin Model of NPCI

0


UPI Plugin: ಸ್ವಿಗ್ಗಿ, ಮಿನ್​ತ್ರಾ ಇತ್ಯಾದಿ ಆನ್​ಲೈನ್ ವರ್ತಕರಿಗೆ ಗ್ರಾಹಕರಿಂದ ಸುಲಭವಾಗಿ ಪೇಮೆಂಟ್ ಆಗಲು ಅನುವಾಗುವಂತೆ ಎನ್​ಪಿಸಿಐ ಹೊಸ ಯುಪಿಐ ಪ್ಲಗಿನ್ ಅಥವಾ ಎಸ್​ಡಿಕೆ ಕಿಟ್ ಅನ್ನು ಅಭಿವೃದ್ಧಿಪಡಿಸಿದೆ.

ನವದೆಹಲಿ, ಆಗಸ್ಟ್ 7: ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ (NPCI) ಸಂಸ್ಥೆ ಯುಪಿಐನಲ್ಲಿ ಹೊಸ ಆವಿಷ್ಕಾರ ತಂದಿದೆ. ಇದು ಸ್ವಿಗ್ಗಿ, ಜೊಮಾಟೊ, ಮಿಂತ್ರಾ ಇತ್ಯಾದಿ ಇಕಾಮರ್ಸ್ ಕಂಪನಿಗಳಿಗೆ ಹೊಸ ಪೇಮೆಂಟ್ ಅವಕಾಶ ಮಾಡಿಕೊಡುತ್ತದೆ. ಈ ಕಂಪನಿಗಳು ಗ್ರಾಹಕರಿಂದ ಹಣ ಪಡೆಯಲು ಪೇಮೆಂಟ್ ಆ್ಯಪ್​ಗಳಿಗೆ ಕಳುಹಿಸುವ ಬದಲು ತಮ್ಮಲ್ಲೇ ನೇರವಾಗಿ ಹಣಪಾವತಿಗೆ ಅವಕಾಶ ಕೊಡುತ್ತದೆ ಹೊಸ ಯುಪಿಐ ಆವಿಷ್ಕಾರ. ಇದು ಮರ್ಚೆಂಟ್ ಸಾಫ್ಟ್​ವೇರ್ ಡೆವಲಪ್ಮೆಂಟ್ ಕಿಟ್ ಅಥವಾ ಯುಪಿಐ ಪ್ಲಗ್ಗಿನ್ ಆಗಿರುವ ಈ ಹೊಸ ಉತ್ಪನ್ನವು ಇಕಾಮರ್ಸ್ ಕಂಪನಿಗಳಿಗೆ ತಮ್ಮದೇ ಪ್ರತ್ಯೇಕ ವರ್ಚುವಲ್ ಪೇಮೆಂಟ್ ವಿಳಾಸ (Virtual Payment Address) ನೀಡುತ್ತದೆ. ಇದನ್ನು ಬಳಸಿ ತಮ್ಮದೇ ಪ್ಲಾಟ್​ಫಾರ್ಮ್​ನೊಳಗೆಯೇ ಗ್ರಾಹಕರಿಂದ ಪೇಮೆಂಟ್ ಪಡೆಯಲು ಸಾಧ್ಯವಾಗುತ್ತದೆ.

ಈಗಿರುವ ವ್ಯವಸ್ಥೆಯಲ್ಲಿ, ಸ್ವಿಗ್ಗಿ ಆ್ಯಪ್​ಗೆ ಹೋಗುವ ಗ್ರಾಹಕ ಹಣಪಾವತಿಸಲು ಯುಪಿಐ ಪೇಮೆಂಟ್ ಎಂಬ ಆಯ್ಕೆ ಆರಿಸಿಕೊಂಡರೆ, ಅವರು ಗೂಗಲ್ ಪೇ, ಫೋನ್ ಪೇನಂತರ ಪೇಮೆಂಟ್ ಆ್ಯಪ್​ಗೆ ಹೋಗಬೇಕಾಗುತ್ತದೆ. ಅಲ್ಲಿ ಹಣ ಪಾವತಿಸಿದ ಬಳಿಕ ವಾಪಸ್ ಸ್ವಿಗ್ಗಿ ಪ್ಲಾಟ್​ಫಾರ್ಮ್​ಗೆ ಮರಳುತ್ತಾರೆ. ಈ ಸಂದರ್ಭದಲ್ಲಿ ಕೆಲ ಬಾರಿ ಪೇಮೆಂಟ್ ವೈಫಲ್ಯದ ಸಮಸ್ಯೆ ಎದುರಾಗುವ ಸಾಧ್ಯತೆ ಇರುತ್ತದೆ. ಇದನ್ನು ತಪ್ಪಿಸಲು ಎನ್​ಪಿಸಿಐ ಈಗ ಹೊಸ ಯುಪಿಐ ಪ್ಲಗ್ಗಿನ್ ಅನ್ನು ಆವಿಷ್ಕರಿಸಿರುವುದು ತಿಳಿದುಬಂದಿದೆ. ಈ ಪ್ಲಗ್ಗಿನ್ ಅನ್ನು ಸ್ವಿಗ್ಗಿ ತನ್ನ ಪೇಮೆಂಟ್ ಆಪ್ಷನ್ ಆಗಿ ಬಳಸಬಹುದು. ಪೇಮೆಂಟ್ ಆ್ಯಪ್​ಗೆ ರೀಡೈರೆಕ್ಟ್ ಆಗುವ ಬದಲು ಸ್ವಿಗ್ಗಿ ಪ್ಲಾಟ್​ಫಾರ್ಮ್​ನಲ್ಲಿಯೇ ಇರುವ ಯುಪಿಐ ಪ್ಲಗಿನ್ ಅಥವಾ ಎಸ್​ಡಿಕೆ ಮೂಲಕ ಗ್ರಾಹಕನಿಂದ ಹಣ ಪಾವತಿ ಮಾಡಿಸಿಕೊಳ್ಳಬಹುದು.

ಪೇಮೆಂಟ್ ಗೇಟ್​ವೇ ಮತ್ತು ಪ್ರೋಸಸಿಂಗ್ ಕಂಪನಿಗಳಾದ ರೇಜರ್​ಪೇ, ಜಸ್​ಪೇ, ಪೇಟಿಎಂ ಈಗಾಗಲೇ ತಮ್ಮ ವರ್ತಕರಿಗೆ ಇಂಥದ್ದೊಂದು ಯುಪಿಐ ಪ್ಲಗಿನ್ ಅಥವಾ ಎಸ್​ಡಿಕೆ ಬಳಕೆಗೆ ಅವಕಾಶ ಕೊಟ್ಟಿದೆ.

ಫೋನ್ ಪೇ, ಗೂಗಲ್ ಪೇಗೆ ಕಷ್ಟ?

ಒಂದು ವೇಳೆ ಯುಪಿಐ ಪೇಮೆಂಟ್​ಗೆ ಎನ್​ಪಿಸಿಐ ರೂಪಿಸಿರುವ ಸಾಫ್ಟ್​ವೇರ್ ಡೆವಲಪ್ಮೆಂಟ್ ಕಿಟ್ ಅನ್ನು ವರ್ತಕರು ಬಳಸತೊಡಗಿದರೆ ಹೆಚ್ಚು ಹಾನಿಯಾಗುವುದು ಫೋನ್ ಪೇ ಮತ್ತು ಗೂಗಲ್ ಪೇಗೆ. ಇವೆರಡು ಕೂಡ ಭಾರತದ ಅತಿದೊಡ್ಡ ಪೇಮೆಂಟ್ ಆ್ಯಪ್​ಗಳಾಗಿವೆ. ಸ್ವಿಗ್ಗಿ, ಮಿನ್​ತ್ರಾ ಇತ್ಯಾದಿ ದೊಡ್ಡ ವರ್ತಕರು ಕೈಬಿಟ್ಟುಹೋದರೆ ಇವುಗಳ ಮಾರುಕಟ್ಟೆ ಹಿಡಿತ ಕಡಿಮೆ ಆಗಬಹುದು.

ಫೋನ್ ಪೇ ಮುಖ್ಯಸ್ಥರ ಪ್ರತಿಕ್ರಿಯೆ

ಫೋನ್ ಪೇ ಸಂಸ್ಥೆಯ ಸಹ-ಸಂಸ್ಥಾಪಕ ಹಾಗೂ ಸಿಟಿಒ ರಾಹುಲ್ ಚಾರಿ ಕಳೆದ ತಿಂಗಳು ಈ ಹೊಸ ಯುಪಿಐ ಆವಿಷ್ಕಾರದ ಬಗ್ಗೆ ಪ್ರತಿಕ್ರಿಯೆ ನೀಡಿದ್ದರು.

‘ಯುಪಿಐ ಪ್ಲಗಿನ್ ಮಾಡಲ್​ನಿಂದ ಪೇಮೆಂಟ್ ಯಶಸ್ಸಿನ ಪ್ರಮಾಣ ಉತ್ತಮಗೊಳ್ಳುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಪೇಮೆಂಟ್ ವ್ಯವಸ್ಥೆಯ ಜವಾಬ್ದಾರಿಯು ಪೇಮೆಂಟ್ ಆ್ಯಪ್ ಬದಲು ಪ್ರಾಯೋಜಿತ ಬ್ಯಾಂಕ್ ಮತ್ತು ವರ್ತಕರ ಆ್ಯಪ್​ಗೆ ವರ್ಗವಾಗುತ್ತದೆ ಅಷ್ಟೇ. ವರ್ತಕರಿಗೆ ಇದು ಹೆಚ್ಚು ಹೊರೆ ತರುತ್ತದೆ. ಇದರಿಂದ ಅವರು ತಮ್ಮ ಮುಖ್ಯ ವ್ಯವಹಾರದತ್ತ ಗಮನ ಕೊಡಲು ಆಗದೇಹೋಗಬಹುದು’ ಎಂದು ರಾಹುಲ್ ಚಾರಿ ತಮ್ಮ ಬ್ಲಾಗ್​ವೊಂದರಲ್ಲಿ ಬರೆದಿದ್ದಾರೆ.

ತಾಜಾ ಸುದ್ದಿ

Leave A Reply

Your email address will not be published.